»   » ಕೈಮುಗಿದು ಏರು, ಇದು 'ತುಪ್ಪದ ಬೆಡಗಿ' ರಾಗಿಣಿ ತೇರು

ಕೈಮುಗಿದು ಏರು, ಇದು 'ತುಪ್ಪದ ಬೆಡಗಿ' ರಾಗಿಣಿ ತೇರು

Posted by:
Subscribe to Filmibeat Kannada

ಕನ್ನಡತಿ ಅಲ್ಲದೇ ಇದ್ದರೂ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ಕಂಡುಕೊಂಡಿರುವ ನಟಿ ರಾಗಿಣಿ ದ್ವಿವೇದಿ. 'ತುಪ್ಪದ ಬೆಡಗಿ' ಅಂತಲೇ ಫೇಮಸ್ ಆಗಿರುವ ರಾಗಿಣಿ, ಇದೀಗ ಪಡ್ಡೆಗಳ ನಿದ್ದೆ ಕೆಡಿಸುವ ಪಾತ್ರಗಳಿಗಿಂತ ಹೊಡಿಬಡಿ ಕ್ಯಾರೆಕ್ಟರ್ ಗಳಲ್ಲೇ ಹೆಚ್ಚಾಗಿ ಮಿಂಚುತ್ತಿದ್ದಾರೆ.

'ಕನ್ನಡದ ಕಿರಣ್ ಬೇಡಿ', 'ಹೆಣ್ ಚಿರತೆ' ಮಾಲಾಶ್ರೀ ಅವರಂತೆ ಐಪಿಎಸ್ ಪಾಸ್ ಮಾಡಿ ಇದೀಗ 'ವೀರ ರಣಚಂಡಿ' ಆಗಿರುವ ರಾಗಿಣಿಗೆ ಒಂದು ಆಸೆ ಇದೆ. ಜುಂ...ಅಂತ ಒಮ್ಮೆ ಆದರೂ ಆಟೋ ಓಡಿಸಬೇಕು ಅಂತ ರಾಗಿಣಿ ಕನವರಿಸುತ್ತಿದ್ದಾರೆ.

Actress Ragini Dwivedi's new wish: Wants to become Auto Driver

ಅರೇ...ಬಿ.ಎಂ.ಡಬ್ಲ್ಯೂ, ಬೆಂಝ್ ನಲ್ಲಿ ಓಡಾಡುವ ರಾಗಿಣಿಗೆ ಯಾಕೆ ಮೂರು ಚಕ್ರದ ಆಟೋ ಮೇಲೆ ಕಣ್ಣು ಅಂತ ಬಾಯಿ ಮೇಲೆ ಬೆರಳಿಡಬೇಡಿ. ಇದು ಕೇವಲ ರೀಲ್ ಬಯಕೆ ಅಷ್ಟೆ. ಹಿಂದಿಗಿಂತ ಕೊಂಚ ತೆಳ್ಳಗಾಗಿ, ಮೊನ್ನೆಮೊನ್ನೆಯಷ್ಟೇ ಹೊಸ ಫೋಟೋಶೂಟ್ ಮಾಡಿಸಿಕೊಂಡ ರಾಗಿಣಿ ಅಂದು ಒಂದು ಆಟೋ ಏರಿ ಪೋಸ್ ಕೊಟ್ಟಿದ್ದರು. [ಪ್ರೇಮಿಗಳ ದಿನ ತುಪ್ಪದ ಬೆಡಗಿ ರಾಗಿಣಿ ಏನ್ಮಾಡ್ತಾರೆ?]

ಆಟೋ ಡ್ರೈವರ್ ಸೀಟ್ ನಲ್ಲಿ ಕೂತು ತೆಗೆಸಿಕೊಂಡಿರುವ ಫೋಟೋ ರಾಗಿಣಿಗೆ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಒಂದೊಳ್ಳೆ ಪಾತ್ರ ಸಿಕ್ಕರೆ, ಭವಿಷ್ಯದಲ್ಲಿ ಆಟೋ ಡ್ರೈವರ್ ಆಗುವುದಕ್ಕೂ ನಾನು ರೆಡಿ ಅಂತ ತಮ್ಮ ಫೇಸ್ ಬುಕ್ ನಲ್ಲಿ ಅಭಿಮಾನಿಗಳೊಂದಿಗೆ ರಾಗಿಣಿ ಹಂಚಿಕೊಂಡಿದ್ದಾರೆ.

ಹಾಗ್ನೋಡಿದ್ರೆ, 'ಲೇಡಿ ರ್ಯಾಂಬೋ' ಮಾಲಾಶ್ರೀ ಕೂಡ 'ಗಂಗಾ' ಚಿತ್ರದಲ್ಲಿ ಆಟೋ ಡ್ರೈವರ್ ಪಾತ್ರ ನಿರ್ವಹಿಸುತ್ತಿದ್ದಾರೆ. ರಾಗಿಣಿಯ ಈ ಹೊಸ ಕನವರಿಕೆಯನ್ನ ಕೇಳಿದವರು, ''ಮಾಲಾಶ್ರೀ ಹಾದಿಯಲ್ಲಿ ರಾಗಿಣಿ ಸಾಗುತ್ತಿದ್ದಾರೆ'' ಅಂತ ಮಾತನಾಡಿಕೊಳ್ಳುತ್ತಿದ್ದಾರೆ. [ಟಾಪ್ ಟು ಬಾಟಮ್ ಬದಲಾಗಿದ್ದಾರೆ ರಾಗಿಣಿ ನೋಡಿ]

ಯಾರು ಏನೇ ಅಂದ್ರೂ, 'ತುಪ್ಪದ ಬೆಡಗಿ' ರಾಗಿಣಿಯ ಸ್ಟೈಲ್ ಈಗ ಬದಲಾಗಿದೆ. ಅವರ ಈ ಲೇಟೆಸ್ಟ್ ಬಯಕೆಯನ್ನ ಈಡೇರಿಸುವುದಕ್ಕೆ ಯಾರಾದ್ರೂ ನಿರ್ಮಾಪಕರು ಮನಸ್ಸು ಮಾಡಿದರೆ, ಗಾಂಧಿನಗರದಲ್ಲಿ 'ತುಪ್ಪದ ಬೆಡಗಿ' ರಾಗಿಣಿ 'ಸಾರಥಿ'ಯ ತೇರು ಓಡಾಡುವುದು ಖಂಡಿತ. (ಫಿಲ್ಮಿಬೀಟ್ ಕನ್ನಡ)

English summary
By posting her new Photo shoot picture on Facebook, Actress Ragini Dwivedi has expressed her desire to play a Auto Driver Character in future.
Please Wait while comments are loading...

Kannada Photos

Go to : More Photos