»   » ರಾಗಿಣಿಗೆ ತುಪ್ಪ ಬೇಡ್ವಂತೆ, ಬೆಣ್ಣೆನೇ ಬೇಕಂತೆ

ರಾಗಿಣಿಗೆ ತುಪ್ಪ ಬೇಡ್ವಂತೆ, ಬೆಣ್ಣೆನೇ ಬೇಕಂತೆ

Posted by:
Subscribe to Filmibeat Kannada

Actress Ragini Dwivedi upset by not getting award
ರಾಗಿಣಿ ದ್ವಿವೇದಿ ಗೊತ್ತಲ್ವಾ.. ಅದೇ ತುಪ್ಪಾ..ಬೇಕಾ.. ತುಪ್ಪಾಂತ ಎಲ್ಲಾ ವರ್ಗದ ಗಂಡು ಹೈಕ್ಳ ಮೈ, ಮನಸ್ಸು ಬೆಚ್ಚಗೆ ಮಾಡಿದ ಗಿಣಿ ಚೆಲುವೆಗೆ ಯಾಕೋ ಬೇಸರಯಾಗಿದೆಯಂತೆ.

ಈ ಬಾರಿ ರಾಗಿಣಿ ದೊಡ್ಡ ಮಟ್ಟದ ಅವಾರ್ಡ್ ನಿರೀಕ್ಷೆಯಲ್ಲಿದ್ದಂತಿದೆ. ವಿಲನ್, ಆರಕ್ಷಕ ಮತ್ತು ಶಿವ ಚಿತ್ರಗಳಲ್ಲಿ ನಟಿಸಿರುವ ರಾಗಿಣಿಗೆ ಕಳೆದ ಬಾರಿ ಹೆಚ್ಚಿನ ವಾಹಿನಿಗಳು ರಮ್ಯಾ, ರಾಧಿಕಾ ಮೊದಲಾದವರಿಗೆ ಅವಾರ್ಡ್ ಕೊಟ್ಟಿರುವುದಕ್ಕೆ ಶಾಣೆ ಬೇಜಾರು ಮಾಡಿಕೊಂಡು ಕಣ್ಣನ್ನು ಕೆಂಪಗೆ ಮಾಡ್ಕೊಂಡು ಬಿಟ್ಟವ್ರಂತಪ್ಪೋ..!

ಅದೇ ಈ ಬಾರಿ ಮೂರು ಚಿತ್ರಗಳಲ್ಲೂ ಅದ್ಭುತ ನಟನೆ ಮಾಡಿದ್ದೇನೆ. ಯಾಕೆ ನನಗೆ ಅವಾರ್ಡ್ ಸಿಗುವುದಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡ ವಿಚಾರ ಸುದ್ದಿಯಾಗಿ ಅದು ಕನ್‍ವರ್ಟ್ ಆಗಿ, ಸಿನಿಮಾ ಮಾಧ್ಯಮದವರ ಕಿವಿಗೆ ಬಿದ್ದಿದೆ.

ತುಪ್ಪಾ ಬೇಕಾ ತುಪ್ಪಾ ಹಾಡೊಂದು ಸೂಪರ್ ಹಿಟ್ ಅಗಿದ್ದು ಬಿಟ್ಟರೆ, ರಾಗಿಣಿ ಈ ವರ್ಷ ನಟಿಸಿದ ಯಾವೊಂದು ಚಿತ್ರವೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿಲ್ಲ. ಆದ್ರೂ ಆ ಚಿತ್ರದಲ್ಲಿ ರಾಗಿಣಿ ಕೇವಲ 'ಐಟಂ ಡ್ಯಾನ್ಸರ್' ಎಂದು ಎಲ್ಲರೂ ಪರಿಗಣಿಸಿರುವುದು ರಾಗಿಣಿ ಮನಸಿಗೆ ಬಹಳ ನೋವಾಗಿದೆಯಂತೆ.

ಈ ಬಾರಿ ಅವಾರ್ಡ್ ಲಿಸ್ಟ್ ನಲ್ಲಿ ರಾಧಿಕಾ ಪಂಡಿತ್ ಮುಂಚೂಣಿಯಲ್ಲಿದ್ದಾರೆ. 'ಅದ್ದೂರಿ' ಚಿತ್ರ ಬ್ಲಾಕ್ ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದ್ದು ರಾಧಿಕಾಗೆ ಆದ ಪ್ಲಸ್ ಪಾಯಿಂಟು. ಜೊತೆಗೆ ಪೂಜಾ ಗಾಂಧಿಗೆ ಬೆಸ್ಟ್ ಸಪೋರ್ಟಿಂಗ್ ಅವಾರ್ಡ್ ದಂಡುಪಾಳ್ಯ ಚಿತ್ರಕ್ಕೆ ಬಂದರೂ ಅಚ್ಚರಿಯಿಲ್ಲ, ಯಾಕೆಂದರೆ ಆ ಚಿತ್ರದಲ್ಲಿ ಪೂಜಾ ಗಾಂಧಿ ತಾನೆ ದೊಡ್ಡ "ಬೆನ್ನೆಲುಬು".

English summary
Actress Ragini Dwivedi upset because she has not got any award so far.
Please Wait while comments are loading...

Kannada Photos

Go to : More Photos