»   » 'ಪಟಾಕಿ' ಹಚ್ಚಲಿದ್ದಾರೆ ಗಣೇಶ್ ಮತ್ತು ರನ್ಯ

'ಪಟಾಕಿ' ಹಚ್ಚಲಿದ್ದಾರೆ ಗಣೇಶ್ ಮತ್ತು ರನ್ಯ

Posted by:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಪಟಾಕಿ ಸಿಡಿಸೋಕೆ ರೆಡಿಯಾಗಿದ್ದಾರೆ. ಇದೇನಪ್ಪಾ ದೀಪಾವಳಿ ಹಬ್ಬಕ್ಕೆ ಇನ್ನು ತುಂಬಾ ಟೈಮಿದೆ, ಈಗೇನು ಇವರಿಗೆ ಅವಸರ ಅಂದುಕೊಂಡ್ರಾ. ಇದು ದೀಪಾವಳಿಗೆ ಸುಡೋ ಪಟಾಕಿ ಅಲ್ಲಾ. ಗಣೇಶ್ ಅವರು ಪಟಾಕಿ ಸಿಡಿಸ್ತಾಯಿರೋದು ತಮ್ಮ ಹೊಸ ಚಿತ್ರ 'ಪಟಾಕಿ'ಯಲ್ಲಿ.

'ಪಟಾಕಿ' ಚಿತ್ರ 'ನಂದಮುರಿ ಕಲ್ಯಾಣ್ ರಾಮ್' ಅಭಿನಯದ ತೆಲುಗು ಹಿಟ್ ಮೂವಿ 'ಪಟಾಸ್' ರೀಮೇಕ್. ಈ ಮೊದಲು 'ಗಣಿ-ದಿ ಬಾಸ್' ಅನ್ನೋ ಟೈಟಲ್ ನಲ್ಲಿ ಅನೌನ್ಸ್ ಆಗಿದ್ದ ಈ ಚಿತ್ರ ಇದೀಗ ಹೊಸದಾಗಿ 'ಪಟಾಕಿ' ಅನ್ನುವ ಹೆಸರಿಗೆ ಬದಲಾಯಿಸಲಾಗಿದೆ.

Actress Ranya to pair opposite Ganesh in 'Pataki'

'ಮಾಣಿಕ್ಯ' ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರನ್ಯ, ಈಗ ಗಣೇಶ್ ಜೊತೆ ಪಟಾಕಿ ಹಚ್ಚಲಿದ್ದಾರೆ. ಇನ್ನುಳಿದಂತೆ ಡೈಲಾಗ್ ಕಿಂಗ್ ಸಾಯಿಕುಮಾರ್, ಗಣಿಗೆ ತಂದೆಯಾಗಲಿದ್ದಾರೆ.

Actress Ranya to pair opposite Ganesh in 'Pataki'

'ಶ್ರಾವಣಿ ಸುಬ್ರಮಣ್ಯ' ಅಂತಹ ಹಿಟ್ ಚಿತ್ರವನ್ನ ಪ್ರೇಕ್ಷಕರಿಗೆ ನೀಡಿದ್ದ ನಿರ್ದೇಶಕ ಮಂಜು ಸ್ವರಾಜ್ 'ಪಟಾಕಿ'ಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಎಸ್.ವಿ ಬಾಬು ಅವರು ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಇನ್ನೂ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿರುವುದು ಅರ್ಜುನ್ ಜನ್ಯ. ಸದ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.

English summary
Actress Ranya is roped into pair opposite Golden Star Ganesh in Kannada movie 'Pataki'. The movie is directed by Manju Swaraj of 'Shravani Subramanya' fame.
Please Wait while comments are loading...

Kannada Photos

Go to : More Photos