»   » ಜಿಂಕೆ ಕಂಗಳ ಚೆಲುವೆ ಸರಣ್ಯ ಬಾಳಲ್ಲಿ ಬೆಳದಿಂಗಳು

ಜಿಂಕೆ ಕಂಗಳ ಚೆಲುವೆ ಸರಣ್ಯ ಬಾಳಲ್ಲಿ ಬೆಳದಿಂಗಳು

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಜಿಂಕೆ ಕಂಗಳ ಮಲಯಾಳಿ ಚೆಲುವೆ ಸರಣ್ಯ ಮೋಹನ್ ಬಾಳಲ್ಲಿ ಬೆಳದಿಂಗಳು ಕಾಣಿಸಿದೆ. ಕನ್ನಡ, ತಮಿಳು, ಮಲಯಾಳಂ, ಹಿಂದಿ ಹಾಗೂ ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ಸರಣ್ಯ ಅವರು ಶೀಘ್ರದಲ್ಲೇ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ.

ಅನಿವಾಸಿ ಕನ್ನಡಿಗರಾದ ಪ್ರಭು ಮತ್ತು ಅರುಣ್ ಎ ನಿರ್ಮಾಣದ 'ಈ ಭೂಮಿ ಆ ಭಾನು' ಕನ್ನಡ ಚಿತ್ರ ಹಾಗೂ ವಿ ರವಿಚಂದ್ರನ್ ಜೊತೆ ಪರಮಶಿವ ಚಿತ್ರದಲ್ಲಿ ಸರಣ್ಯ ನಟಿಸಿದ್ದರು. ಹಿಂದಿಯಲ್ಲಿ ಬದ್ಲಾಪುರ್ ಬಾಯ್ಸ್ ಎಂಬ ಚಿತ್ರದಲ್ಲೂ ನಟಿಸಿದರು.

Actress Saranya Mohan engaged Doctor Aravind Krishnan

ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಹೆಚ್ಚು ಜನಪ್ರಿಯರಾಗಿರುವ ಸರಣ್ಯ (ಶರಣ್ಯ) ತಮ್ಮ ವಿವಾಹ ನಿಶ್ಚಿತಾರ್ಥ ಜುಲೈ 10ರಂದು ನೆರವೇರಿದೆ ಎಂದು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಘೋಷಿಸಿದ್ದಾರೆ.

ವೃತ್ತಿಯಿಂದ ಡಾಕ್ಟರ್ ಆಗಿರುವ ಅರವಿಂದ್ ಕೃಷ್ಣನ್ ಎಂಬುವವರನ್ನು ವರಿಸುತ್ತಿದ್ದೇನೆ. ನಿಮ್ಮೆಲ್ಲರ ಶುಭ ಹಾರೈಕೆ ನಮ್ಮ ಮೇಲಿರಲಿ ಎಂದು ಸರಣ್ಯಕೋರಿದ್ದಾರೆ. 'ಯಾರಡಿ ನೀ ಮೋಹಿನಿ' ಹಾಗೂ 'ವೆನ್ನಿಲಾ ಕಬಡಿ ಕುಳು', ಈರಂ, ವೇಲಾಯುಧಂ ಚಿತ್ರಗಳು ಹೆಸರು ತಂದುಕೊಟ್ಟ ಚಿತ್ರಗಳು.

I am taking this opportunity to officially announce you all about the most important day of my life that is about to...

Posted by Saranya Mohan on12 July 2015

ಸರಣ್ಯ ಅವರ ತಂದೆ ಮೋಹನ್ ಹಾಗೂ ತಾಯಿ ಕಲಾಮಂಡಲಂ ದೇವಿ ಇಬ್ಬರು ಶಾಸ್ತ್ರೀಯ ನೃತ್ಯಪಟುಗಳು ಕೇರಳದ ಅಳಪ್ಪುಳದಲ್ಲಿ ನೃತ್ಯ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಸಹಜವಾಗಿ ಶರಣ್ಯರಿಗೆ ಬಾಲ್ಯದಿಂದಲೇ ನೃತ್ಯ, ಗಾಯಕ, ನಟನೆ ಕಲೆ ಒಲಿಯಿತು. ಆಂಗ್ಲ ಸಾಹಿತ್ಯ ವಿಷಯದಲ್ಲಿ ಬಿಎ ಪದವೀಧರೆಯಾದ ಸರಣ್ಯ, ಅಣ್ಣಾಮಲೈ ವಿವಿಯಿಂದ ಎಂಎ ಪದವಿ ಪಡೆಯಲು ಓದುತ್ತಿದ್ದಾರೆ. 26 ವರ್ಷ ವಯಸ್ಸಿನ ಸರಣ್ಯ ಅವರ ಬದುಕಿನ ಹೊಸ ಅಧ್ಯಾಯಕ್ಕೆ ಫಿಲ್ಮಿಬೀಟ್ ತಂಡದಿಂದ ಶುಭ ಹಾರೈಕೆಗಳು.

English summary
Actress Saranya Mohan took social networking sit Facebook to announce that she got engaged doctor Aravind Krishnan. Vennila Kabbadi Kuzhu movie fame Saranya acted in Kannada film Ee Bhoomi Aa Bhanu.
Please Wait while comments are loading...

Kannada Photos

Go to : More Photos