»   » ಶಿಲ್ಪಿ ಶರ್ಮಾ ಬಿಕಿನಿಯಲ್ಲಿ ಬೊಂಬಾಟ್ ದರ್ಶನ

ಶಿಲ್ಪಿ ಶರ್ಮಾ ಬಿಕಿನಿಯಲ್ಲಿ ಬೊಂಬಾಟ್ ದರ್ಶನ

Written by: ಉದಯರವಿ
Subscribe to Filmibeat Kannada

ಊರಿಗೆ ಬಂದವಳು ನೀರಿಗೆ ಬರದೆ ಇರ್ತಾಳಾ ಎಂಬುದು ಹಳೆ ಗಾದೆ. ಇನ್ನು ಬಣ್ಣದ ಜಗತ್ತಿಗೆ ಬಂದವರು ಒಂದಲ್ಲಾ ಒಂದು ಸಲವಾದರೂ ಬಿಕಿನಿ ತೊಡಲೇ ಬೇಕು. ಅದರಲ್ಲೂ ಮಾಡೆಲಿಂಗ್ ಕ್ಷೇತ್ರದಿಂದ ಬಂದಿದ್ದಾರೆ ಎಂದರೆ ಕೇಳಬೇಕೆ.

ಆಕ್ರಮಣ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಬೆಡಗಿ ಶಿಲ್ಪಿ ಶರ್ಮಾ. ಈ ಹಿಂದೊಮ್ಮೆ ಬಿಕಿನಿಯಲ್ಲಿ ಎಲ್ಲರ ಗಮನಸೆಳೆದಿದ್ದರು. ಇದೀಗ ಬಿಕಿನಿಯಲ್ಲಿ ಇನ್ನೊಂದು ವರಸೆ ತೋರಿಸಿದ್ದಾರೆ ನೋಡಿ.

ಆರಂಭದಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಶಿಲ್ಪಿ ಬಳಿಕ ಬಣ್ಣದ ಜಗತ್ತಿಗೆ ಅಡಿಯಿಟ್ಟರು. ತೆಲುಗಿನ 'ಗ್ರೀನ್ ಸಿಗ್ನಲ್' ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟರು. ಅದಾದ ಬಳಿಕ 'ಆಕ್ರಮಣ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖಾತೆ ತೆರೆದರು.

ಹೈಪ್ರೊಫೈಲ್ ಬೆಡಗಿ ಶಿಲ್ಪಿ ಶರ್ಮಾ

ಹೈಪ್ರೊಫೈಲ್ ಬೆಡಗಿ ಶಿಲ್ಪಿ ಶರ್ಮಾ

ದೆಹಲಿ ಮೂಲದ ಈ ತಾರೆಯ ಪ್ರಾಯ ಇನ್ನೂ ಇಪ್ಪತ್ತು ಪ್ಲಸ್ ಮೂರು. ಇವರ ತಂದೆತಾಯಿ ಇಬ್ಬರೂ ವೈದ್ಯರು. ಈಕೆಯ ಅಂಕಲ್ ಒಬ್ಬರು ಸಂಸದ, ಇನ್ನೊಬ್ಬರು ಮುಂಬೈನಲ್ಲಿ ಐಪಿಎಸ್ ಅಧಿಕಾರಿ.

ಓದಿದ್ದು ಬಿ.ಎಸ್ಸಿ ಟೆಕ್ಸ್ ಟೈಲ್ಸ್ ಬಂದದ್ದು ಚಿತ್ರರಂಗಕ್ಕೆ

ಓದಿದ್ದು ಬಿ.ಎಸ್ಸಿ ಟೆಕ್ಸ್ ಟೈಲ್ಸ್ ಬಂದದ್ದು ಚಿತ್ರರಂಗಕ್ಕೆ

ಇನ್ನು ಶಿಲ್ಪಿ ಶರ್ಮ ಓದಿರುವುದು ಬಿ.ಎಸ್ಸಿ. ಟೆಕ್ಸ್ ಟೈಲ್ ಡಿಸೈನ್ ಫ್ಯಾಬ್ರಿಕ್ಸ್ ನಲ್ಲಿ ಸ್ಪೆಷಲೈಸೇಷನ್ ಮಾಡಿದ್ದಾರೆ. ಸದ್ಯಕ್ಕೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡದ ಆಕ್ರಮಣದಲ್ಲಿ ಮಿಂಚಿದ ಬೆಡಗಿ

ಕನ್ನಡದ ಆಕ್ರಮಣದಲ್ಲಿ ಮಿಂಚಿದ ಬೆಡಗಿ

ಕನ್ನಡದ 'ಆಕ್ರಮಣ' ಚಿತ್ರ 2d ಹಾಗೂ 3d ಯಲ್ಲಿ ಬಿಡುಗಡೆಯಾಗಿತ್ತು. ಕನ್ನಡದ ಮೊದಲ ಹಾರತ್ ತ್ರಿಡಿ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಆಕ್ರಮಣ.

ಸಲ್ಲು ಜೊತೆಗೂ ಚಾನ್ಸ್ ಗಿಟ್ಟಿಸಿದ ಚೆಲುವೆ

ಸಲ್ಲು ಜೊತೆಗೂ ಚಾನ್ಸ್ ಗಿಟ್ಟಿಸಿದ ಚೆಲುವೆ

ಆಕ್ರಮಣ ಚಿತ್ರ ಹಿಂದಿ, ತೆಲುಗು ಹಾಗೂ ತಮಿಳಿ ಭಾಷೆಗೂ ಡಬ್ ಆಗಿದ್ದು ವಿಶೇಷ. ಸಲ್ಮಾನ್ ಖಾನ್ ಜೊತೆಗೂ ಶಿಲ್ಲಿ ಶರ್ಮ ಚಾನ್ಸ್ ಗಿಟ್ಟಿಸಿದ್ದಾರೆ. 'ನೋ ಎಂಟ್ರಿ' ಚಿತ್ರದ ಮುಂದುವರಿದ ಭಾಗವಾದ 'ನೋ ಎಂಟ್ರಿ ಮೇ ಎಂಟ್ರಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅನೀಸ್ ಬಝ್ ಮೀ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

ದಕ್ಷಿಣದಲ್ಲಿ ಬಿಜಿಯಾದ ತಾರೆ

ದಕ್ಷಿಣದಲ್ಲಿ ಬಿಜಿಯಾದ ತಾರೆ

ಸದ್ಯಕ್ಕೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲೂ ತಲಾ ಒಂದೊಂದು ಚಿತ್ರದಲ್ಲಿ ಮಗ್ನರಾಗಿದ್ದಾರೆ ಶಿಲ್ಪಿ ಶರ್ಮಾ.

ಶಿಲ್ಪಿ ಮಾಡೆಲಿಂಗ್ ಹೆಜ್ಜೆ ಗುರುತುಗಳು

ಶಿಲ್ಪಿ ಮಾಡೆಲಿಂಗ್ ಹೆಜ್ಜೆ ಗುರುತುಗಳು

ಮಾಡೆಲಿಂಗ್ ಕ್ಷೇತ್ರಕ್ಕೆ 2006ರಲ್ಲಿ ಅಡಿಯಿಟ್ಟ ಶಿಲ್ಪಿ ಶರ್ಮಾ 2010ರಲ್ಲಿ ನಡೆದ ಮಿಸ್ ಡೆಲ್ಲಿ ಟೀನ್ ಕ್ವೀನ್ ಬ್ಯೂಟಿ ಪೇಜೆಂಟ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಿಸ್ ಪುಣೆ ಸ್ಪರ್ಧೆಯಲ್ಲೂ ಭಾಗಿಯಾಗಿದ್ದರು.

ಮಿಸ್ ಬ್ಯೂಟಿಫುಲ್ ಸ್ಮೈಲ್

ಮಿಸ್ ಬ್ಯೂಟಿಫುಲ್ ಸ್ಮೈಲ್

2012ರಲ್ಲಿ ಫೆಮೀನಾ ಮಿಸ್ ಇಂಡಿಯಾ ಸ್ಟೇಟ್ ಪೇಜೆಂಟ್ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್ ಬಾಡಿ ಬ್ಯೂಟಿಫುಲ್ ಹಾಗೂ ಮಿಸ್ ಬ್ಯೂಟಿಫುಲ್ ಸ್ಮೈಲ್ ಟೈಟಲ್ ಗೆದ್ದರು.

English summary
Shilpi Sharma hails from a small town called Dholpur situated in the state of Rajasthan, near the city of Agra.She studied from the All saints schoo, nainital And has degree for acting, interior designing and western music.
Please Wait while comments are loading...

Kannada Photos

Go to : More Photos