»   » ಎರಡನೇ ಇನ್ನಿಂಗ್ಸ್ ಆರಂಭಿಸಿದ ನಟಿ ಸೋನು ಗೌಡ

ಎರಡನೇ ಇನ್ನಿಂಗ್ಸ್ ಆರಂಭಿಸಿದ ನಟಿ ಸೋನು ಗೌಡ

Written by: ಉದಯರವಿ
Subscribe to Filmibeat Kannada

'ಇಂತಿ ನಿನ್ನ ಪ್ರೀತಿಯ' ನಟಿ ಸೋನು ಗೌಡ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮದುವೆಯಾದ ಬಳಿಕ ನಾಪತ್ತೆಯಾಗಿದ್ದ ಸೋನು ಅವರು ಇದೀಗ 'ಹಾಫ್ ಮೆಂಟ್ಲು' ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.

ಮದುವೆಗೆ ಮುನ್ನವೇ 'ಹಾಫ್ ಮೆಂಟ್ಲು' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು ಸೋನು. ಮದುವೆಯಾದ ಮೂರು ವರ್ಷದ ಬಳಿಕ ಮತ್ತೆ ಅದೇ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಗಡ್ಡ ವಿಜಿ ನಿರ್ದೇಶನದ 'ದ್ಯಾವ್ರೇ' ಚಿತ್ರದಲ್ಲಿ ಸಣ್ಣ ಪಾತ್ರ ಪೋಷಿಸಿದ್ದರು. ಆ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಗೊತ್ತೇ ಇದೆ. [ನಟಿ ಸೋನು ಗೌಡ ದಾಂಪತ್ಯದಲ್ಲಿ ಬಿರುಕು?]

Actress Sonu Gowda starts second innings

ಗುಲಾಮ, ಪೊಲೀಸ್ ಕ್ವಾಟ್ರಸ್ ಚಿತ್ರಗಳಲ್ಲಿ ಸೋನು ಅಭಿನಯಿಸಿದ್ದರೂ ಅವರ ವೃತ್ತಿಬದುಕಿನ ಗ್ರಾಫ್ ಮಾತ್ರ ಆರಕ್ಕೇರಲಿಲ್ಲ. ಮಲಯಾಳಂ ಹಾಗೂ ತಮಿಳಿನ ಕೆಲ ಚಿತ್ರಗಳಲ್ಲೂ ಸೋನು ಅಭಿನಯಿಸಿದ್ದಾರೆ. ಸದ್ಯಕ್ಕೆ 'ಎಂಡ್ರ ಕತುಲ ಮಲೈ' ಎಂಬ ಚಿತ್ರದಲ್ಲಿ ಬಿಜಿಯಾಗಿದ್ದಾರೆ.

ಸ್ವತಂತ್ರ ನಾಯಕಿಯಾಗಿ ಅಭಿನಯಿಸುತ್ತಿರುವ 'ಹಾಫ್ ಮೆಂಟ್ಲು' ಚಿತ್ರ ಶೇ.90ರಷ್ಟು ಚಿತ್ರೀಕರಣ ಮುಗಿದಿದೆ. ಈ ಚಿತ್ರದ ಬಳಿಕ ಮತ್ತಷ್ಟು ಅವಕಾಶಗಳು ಸಿಗುವ ವಿಶ್ವಾಸದಲ್ಲಿದ್ದಾರೆ ಸೋನು. ಮದುವೆ ಬಳಿಕ ಸೋನು ಅವರು ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದರು. ಈ ಮೂರು ವರ್ಷಗಳ ಗ್ಯಾಪ್ ನಲ್ಲಿ ಒಂದಷ್ಟು ಜಾಹೀರಾತು ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಬಿಜಿಯಾಗಿದ್ದರು.

English summary
Inti Ninna Pritiya fame actress Sonu Gowda is returning back to Kannada movies with Half Mentlu. She has completed 90 percent of shooting. This Kannada film would give more offers in Kannada she feels.
Please Wait while comments are loading...

Kannada Photos

Go to : More Photos