»   » ಶಿವಣ್ಣ-ಸುದೀಪ್ ರವರ 'ಕಲಿ' ಚಿತ್ರದ ನಾಯಕಿ ಇವರೇನಾ?

ಶಿವಣ್ಣ-ಸುದೀಪ್ ರವರ 'ಕಲಿ' ಚಿತ್ರದ ನಾಯಕಿ ಇವರೇನಾ?

Posted by:
Subscribe to Filmibeat Kannada

'ಕಲಿ' ಇನ್ನೂ ಶುರು ಆಗಿಲ್ಲ. 'ಕಲಿ' ಸೆಟ್ಟೇರ್ಬೇಕು ಅಂದ್ರೆ, ಏನಿಲ್ಲ ಅಂದ್ರೂ ಇನ್ನೂ ಒಂದು ವರ್ಷ ಬೇಕು. ನಿಜ ಹೇಳ್ಬೇಕಂದ್ರೆ, 'ಕಲಿ' ಚಿತ್ರಕಥೆ ಬರೆಯುವುದಕ್ಕೆ 'ಜೋಗಿ' ಪ್ರೇಮ್ ಕೈಲಿ ಪೆನ್ ಹಿಡಿದುಕೊಂಡಿರುವುದೇ ಇವಾಗ.!

ಹೀಗಿದ್ದರೂ, 'ಕಲಿ' ಚಿತ್ರ ಸದ್ದು ಮಾಡುವುದರಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಎಷ್ಟೇ ಆಗ್ಲಿ, 'ಕಲಿ' ಯಾರ ಸಿನಿಮಾ ಹೇಳಿ.?!

'ಕಲಿ' ಚಿತ್ರಕ್ಕಾಗಿ ಮೊಟ್ಟ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ತೆರೆ ಹಂಚಿಕೊಳ್ಳಲಿದ್ದಾರೆ. ಅಂದ್ಮೇಲೆ, ಅವರೊಂದಿಗೆ ಡ್ಯುಯೆಟ್ ಹಾಡುವ ನಾಯಕಿಯರ ಬಗ್ಗೆ ಕೂಡ ಸ್ವಲ್ಪ ಯೋಚಿಸಬೇಕು ಅಲ್ವಾ? [ಶಿವಣ್ಣ-ಸುದೀಪ್ 'ಕಲಿ' ಚಿತ್ರದ ಬಗ್ಗೆ ಹೊಸ ಗಾಸಿಪ್!]

ಈಗಾಗಲೇ 'ಕಲಿ' ಚಿತ್ರಕ್ಕೆ ಬಾಲಿವುಡ್ ನಿಂದ ದೀಪಿಕಾ ಪಡುಕೋಣೆ ಬರ್ತಾರೆ, ಟಾಲಿವುಡ್ ನಿಂದ ಅನುಶ್ಕಾ ಶೆಟ್ಟಿ ಸ್ಯಾಂಡಲ್ ವುಡ್ ಗೆ ಕಾಲಿಡ್ತಾರೆ ಅಂತೆಲ್ಲಾ ಯಾರೋ ಪುಂಗಿ ಊದಿದ್ರು. ಈಗ 'ಕಲಿ' ಚಿತ್ರದ ನಾಯಕಿ 'ಇವರೇ' ಅಂತ ಎಲ್ಲೆಡೆ ವರದಿ ಆಗ್ತಿದೆ. ಮುಂದೆ ಓದಿ....

'ಕಲಿ' ಚಿತ್ರದ ನಾಯಕಿ ಯಾರು?

'ಕಲಿ' ಚಿತ್ರದ ನಾಯಕಿ ಯಾರು?

'ಕಲಿ' ಚಿತ್ರಕ್ಕೆ ಟಾಲಿವುಡ್ ಮತ್ತು ಬಾಲಿವುಡ್ ನಿಂದ ಟಾಪ್ ನಟಿಯರನ್ನ ಕರೆದುತಾರದೇ ಇದ್ದರೂ, ಮಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಮಿಂಚುತ್ತಿರುವ ಸುಂದರಿಯೊಬ್ಬರನ್ನ ಬರಮಾಡಿಕೊಳ್ಳುವುದಕ್ಕೆ ನಿರ್ದೇಶಕ 'ಜೋಗಿ' ಪ್ರೇಮ್ ಮನಸ್ಸು ಮಾಡಿದ್ದಾರೆ. [ಶಿವಣ್ಣ-ಸುದೀಪ್ ರವರ 'ಕಲಿ' ಚಿತ್ರದ ನಾಯಕಿಯರು ಯಾರು?]

'ಕಲಿ' ನಾಯಕಿ 'ಇವರೇ'..!

'ಕಲಿ' ನಾಯಕಿ 'ಇವರೇ'..!

ವರದಿಗಳ ಪ್ರಕಾರ, ಮಲೆಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ವಿದ್ಯಾ ಪ್ರದೀಪ್ 'ಕಲಿ' ಚಿತ್ರದ ನಾಯಕಿ ಪಾತ್ರಕ್ಕೆ ಓಕೆ ಅಂದಿದ್ದಾರೆ.

ಯಾರು ಈ ವಿದ್ಯಾ ಪ್ರದೀಪ್?

ಯಾರು ಈ ವಿದ್ಯಾ ಪ್ರದೀಪ್?

'ಸೈವಂ', 'ಪಸಂಗ-2' ಸೇರಿದಂತೆ ಅನೇಕ ತಮಿಳು ಹಾಗೂ ಮಲೆಯಾಳಂ ಚಿತ್ರಗಳಲ್ಲಿ ವಿದ್ಯಾ ಪ್ರದೀಪ್ ನಾಯಕಿ ಆಗಿ ಅಭಿನಯಿಸಿದ್ದಾರೆ.

ಕನ್ನಡಕ್ಕೆ ವಿದ್ಯಾ ಪ್ರದೀಪ್ ಬಂದಿದ್ದಾಗಿದೆ!

ಕನ್ನಡಕ್ಕೆ ವಿದ್ಯಾ ಪ್ರದೀಪ್ ಬಂದಿದ್ದಾಗಿದೆ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ಬಂಗಾರ S/O ಬಂಗಾರದ ಮನುಷ್ಯ' ಚಿತ್ರದಲ್ಲಿ ನಾಯಕಿ ಆಗುವ ಮೂಲಕ ವಿದ್ಯಾ ಪ್ರದೀಪ್ ಈಗಾಗಲೇ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ.

ಎರಡನೇ ಚಿತ್ರ 'ಕಲಿ'

ಎರಡನೇ ಚಿತ್ರ 'ಕಲಿ'

ಮೂಲಗಳ ಪ್ರಕಾರ, ಈಗಾಗಲೇ ವಿದ್ಯಾ ಪ್ರದೀಪ್ 'ಕಲಿ' ಚಿತ್ರದಲ್ಲಿ ಅಭಿನಯಿಸಲು ಅಡ್ವಾನ್ಸ್ ಪಡೆದದ್ದಾಗಿದೆ. ಹೀಗಾಗಿ, ವಿದ್ಯಾ ಪ್ರದೀಪ್ ಅಭಿನಯಿಸುವ ಎರಡನೇ ಕನ್ನಡ ಚಿತ್ರ 'ಕಲಿ' ಎನ್ನಲಾಗಿದೆ.

ಅನುಶ್ಕಾ ಶೆಟ್ಟಿ - ನಯನತಾರ ಬಂದರೂ ಬರಬಹುದು!

ಅನುಶ್ಕಾ ಶೆಟ್ಟಿ - ನಯನತಾರ ಬಂದರೂ ಬರಬಹುದು!

ಅನುಶ್ಕಾ ಶೆಟ್ಟಿ, ನಯನತಾರ ಜೊತೆ ನಿರ್ದೇಶಕ 'ಜೋಗಿ' ಪ್ರೇಮ್ ಮಾತುಕತೆ ನಡೆಸುತ್ತಿದ್ದಾರೆ. ಎಲ್ಲವೂ ಸರಿ ಹೊಂದಿದರೆ, ಇಬ್ಬರಲ್ಲಿ ಒಬ್ಬರು 'ಕಲಿ' ಚಿತ್ರದಲ್ಲಿ ಮಿನುಗಬಹುದು.

100 ಕೋಟಿ ರೂಪಾಯಿ ಬಜೆಟ್

100 ಕೋಟಿ ರೂಪಾಯಿ ಬಜೆಟ್

ಬರೋಬ್ಬರಿ 100 ಕೋಟಿ ರೂಪಾಯಿ ಬಜೆಟ್ ನಲ್ಲಿ ಸಿ.ಆರ್.ಮನೋಹರ್ 'ಕಲಿ' ಚಿತ್ರವನ್ನ ನಿರ್ಮಿಸಲು ಸಜ್ಜಾಗಿದ್ದಾರೆ.

English summary
According to the Reports, Actress Vidya Pradeep to star in Shiva Rajkumar and Sudeep starrer 'Kali'. Prem is directing this movie.
Please Wait while comments are loading...

Kannada Photos

Go to : More Photos