»   » 'ಕೋಟಿಗೊಬ್ಬ-2' ಆಯ್ತು: 'ಸಿಂಹಾದ್ರಿಯ ಸಿಂಹ-2' ಬರುವ ಟೈಮ್ ಆಯ್ತು!

'ಕೋಟಿಗೊಬ್ಬ-2' ಆಯ್ತು: 'ಸಿಂಹಾದ್ರಿಯ ಸಿಂಹ-2' ಬರುವ ಟೈಮ್ ಆಯ್ತು!

Posted by:
Subscribe to Filmibeat Kannada

ಚಿತ್ರಕಥೆಗೂ-ಶೀರ್ಷಿಕೆಗೂ ಅಷ್ಟಾಗಿ ಹೊಂದಾಣಿಕೆ ಆಗದೇ ಇದ್ದರೂ, 2001 ರಲ್ಲಿ ತೆರೆಕಂಡಿದ್ದ ಡಾ.ವಿಷ್ಣುವರ್ಧನ್ ಅಭಿನಯದ ಬ್ಲಾಕ್ ಬಸ್ಟರ್ 'ಕೋಟಿಗೊಬ್ಬ' ಸಿನಿಮಾದ ಮುಂದುವರಿದ ಭಾಗ ಅಲ್ಲದೇಯಿದ್ದರೂ, ಸುದೀಪ್ ಅಭಿನಯದ ಕೆ.ಎಸ್.ರವಿಕುಮಾರ್ ನಿರ್ದೇಶನದ ಈ ವರ್ಷ ಬಿಡುಗಡೆ ಆದ ಚಿತ್ರಕ್ಕೆ 'ಕೋಟಿಗೊಬ್ಬ-2' ಅಂತ ಹೆಸರಿಡಲಾಗಿತ್ತು.

''ಶೀರ್ಷಿಕೆಯಲ್ಲಿ ಪವರ್ ಇದೆ. ಅದಕ್ಕಾಗಿ ಅದೇ ಟೈಟಲ್ ಇಡಲಾಗಿದೆ'' ಅಂತ ಸ್ವತಃ ಕಿಚ್ಚ ಸುದೀಪ್ ಕೂಡ ಒಪ್ಪಿಕೊಂಡಿದ್ದರು. ಈಗ ಇದೇ ಟ್ರೆಂಡ್ ನಲ್ಲಿ ಸುದೀಪ್ ಸಿನಿಮಾಗಳು ಸೆಟ್ಟೇರುವ ಸೂಚನೆ ಸಿಕ್ಕಿದೆ. [ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]

ಸಾಹಸಸಿಂಹ ಡಾ.ವಿಷ್ಣುವರ್ಧನ್ ನಟನೆಯ ಮತ್ತೊಂದು ಸೂಪರ್ ಡ್ಯೂಪರ್ ಹಿಟ್ ಚಿತ್ರದ ಶೀರ್ಷಿಕೆ ಇದೀಗ ಸುದೀಪ್ ಸಿನಿಮಾ ಆಗುವ ಸುದ್ದಿ ಸ್ಯಾಂಡಲ್ ವುಡ್ ಅಂಗಳದಿಂದ ಹೊರಬಿದ್ದಿದೆ. ಮುಂದೆ ಓದಿ....

ಆ ಚಿತ್ರ ಯಾವುದು ಗೊತ್ತೇ?

ಆ ಚಿತ್ರ ಯಾವುದು ಗೊತ್ತೇ?

ಹದಿನಾಲ್ಕು ವರ್ಷಗಳ ಹಿಂದೆ, ಅಂದ್ರೆ 2002ರಲ್ಲಿ ತೆರೆಕಂಡಿದ್ದ, ಡಾ.ವಿಷ್ಣುವರ್ಧನ್ ಅಭಿನಯಿಸಿದ್ದ, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದ ಸಿನಿಮಾ 'ಸಿಂಹಾದ್ರಿಯ ಸಿಂಹ'. ಈಗ ಇದೇ ಶೀರ್ಷಿಕೆ ಎರಡನೇ ಬಾರಿ ಬಳಕೆ ಆಗುವ ಕ್ಲೂ ಸಿಕ್ಕಿದೆ.

'ಸಿಂಹಾದ್ರಿಯ ಸಿಂಹ-2' ಬರಲಿದೆ.!

'ಸಿಂಹಾದ್ರಿಯ ಸಿಂಹ-2' ಬರಲಿದೆ.!

ಪ್ರಭಾವತಿ ವಿಜಯ್ ಕುಮಾರ್ ನಿರ್ಮಿಸಿದ್ದ 'ಕಲಾಸಾಮ್ರಾಟ್' ಎಸ್.ನಾರಾಯಣ್ ನಿರ್ದೇಶಿಸಿದ್ದ 'ಸಿಂಹಾದ್ರಿಯ ಸಿಂಹ' ಚಿತ್ರದ ಎರಡನೇ ಸರಣಿ ಅರ್ಥಾತ್ 'ಸಿಂಹಾದ್ರಿಯ ಸಿಂಹ-2' ಬರಲು ಸಜ್ಜಾಗಿದೆ.

ಸುದೀಪ್ ನಟಿಸಿದರೆ ಚೆನ್ನ.!

ಸುದೀಪ್ ನಟಿಸಿದರೆ ಚೆನ್ನ.!

'ಸಿಂಹಾದ್ರಿಯ ಸಿಂಹ-2' ಚಿತ್ರದಲ್ಲಿ ನಾಯಕರಾಗಿ ನಟಿಸುವ ಅವಕಾಶ ಈಗ ಸುದೀಪ್ ಪಾಲಾಗಿದೆ.

ಹಳೇ ಟೀಮ್, ಹೊಸ ಸಿನಿಮಾ

ಹಳೇ ಟೀಮ್, ಹೊಸ ಸಿನಿಮಾ

'ಸಿಂಹಾದ್ರಿಯ ಸಿಂಹ-2' ಚಿತ್ರ ಕೂಡ ಪ್ರಭಾವತಿ ವಿಜಯ್ ಕುಮಾರ್ ಮತ್ತು ಎಸ್.ನಾರಾಯಣ್ ಕಾಂಬಿನೇಷನ್ ನಲ್ಲೇ ಮೂಡಿಬರಲಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಬಹುತೇಕ ಮುಗಿದಿದೆ.

'ಸಿಂಹಾದ್ರಿಯ ಸಿಂಹ-2' ಟೈಟಲ್ ರಿಜಿಸ್ಟರ್ ಆಗಿದೆ.!

'ಸಿಂಹಾದ್ರಿಯ ಸಿಂಹ-2' ಟೈಟಲ್ ರಿಜಿಸ್ಟರ್ ಆಗಿದೆ.!

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ 'ಸಿಂಹಾದ್ರಿಯ ಸಿಂಹ-2' ಎಂಬ ಟೈಟಲ್ ಈಗಾಗಲೇ ರಿಜಿಸ್ಟರ್ ಆಗಿದೆ.

ಸುದೀಪ್ ಒಪ್ಪಿಕೊಳ್ಳುವುದು ಬಾಕಿ.!

ಸುದೀಪ್ ಒಪ್ಪಿಕೊಳ್ಳುವುದು ಬಾಕಿ.!

ಸುದೀಪ್ ಇಮೇಜ್ ಗೆ ಸೂಟ್ ಆಗುವ ಕಥೆಯನ್ನ ನಿರ್ದೇಶಕ ಎಸ್.ನಾರಾಯಣ್ ಬರೆದಿದ್ದಾರಂತೆ. ಈಗಾಗಲೇ ಸುದೀಪ್ ಜೊತೆ ಒಂದು ಸುತ್ತಿನ ಮಾತುಕತೆ ಮುಗಿದದ್ದು, ಇನ್ನೆರಡು ದಿನಗಳಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಕಥೆ ಕೇಳಿ ಸುದೀಪ್ ಒಪ್ಪಿಗೆ ನೀಡಬೇಕು ಅಷ್ಟೆ.

ಜವಾಬ್ದಾರಿ ಇದೆ

ಜವಾಬ್ದಾರಿ ಇದೆ

''ವಿಷ್ಣುವರ್ಧನ್ ರವರ ಸಿನಿಮಾದ ಹೆಸರಿನಲ್ಲಿ ಚಿತ್ರ ಮಾಡಲು ಮುಂದಾಗಿದ್ದೇವೆ. ಹೀಗಾಗಿ ನಮಗೂ ಜವಾಬ್ದಾರಿ ಇದೆ. ವಿಷ್ಣುವರ್ಧನ್ ಅವರಿಗೆ ಗೌರವ ತರುವ ಕೆಲಸ ನಮ್ಮ ತಂಡದಿಂದ ಆಗುತ್ತದೆ'' ಎನ್ನುತ್ತಾರೆ ನಿರ್ಮಾಪಕರಾದ ಪ್ರಭಾವತಿ ವಿಜಯ್ ಕುಮಾರ್.

ಇದೂ ಹಿಟ್ ಆಗುವುದರಲ್ಲಿ ಡೌಟ್ ಬೇಡ.!

ಇದೂ ಹಿಟ್ ಆಗುವುದರಲ್ಲಿ ಡೌಟ್ ಬೇಡ.!

ತಮಿಳಿನ 'ನಟ್ಟಾಮೈ' ಚಿತ್ರದ ರೀಮೇಕ್ ಆಗಿದ್ದ 'ಸಿಂಹಾದ್ರಿಯ ಸಿಂಹ' 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿತು. ದೇವ ಸಂಗೀತ ನಿರ್ದೇಶನದ ಎಲ್ಲಾ ಹಾಡುಗಳು ಹಿಟ್ ಲಿಸ್ಟ್ ಸೇರಿತ್ತು. ಈಗ ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಮಾಡುತ್ತಿರುವುದರಿಂದ, ಇದೂ ಕೂಡ ಹಿಟ್ ಆಗುವ ನಂಬಿಕೆ ನಿರ್ಮಾಪಕರಲ್ಲಿದೆ.

ಹ್ಯಾಟ್ರಿಕ್ ಸಿನಿಮಾ...

ಹ್ಯಾಟ್ರಿಕ್ ಸಿನಿಮಾ...

ಒಂದ್ವೇಳೆ ಸುದೀಪ್ 'ಸಿಂಹಾದ್ರಿಯ ಸಿಂಹ-2' ಚಿತ್ರಕ್ಕೆ ಓಕೆ ಅಂದ್ರೆ, 'ವಿಷ್ಣುವರ್ಧನ', 'ಕೋಟಿಗೊಬ್ಬ-2' ನಂತರ ವಿಷ್ಣುವರ್ಧನ್ ರವರ ಹೆಸರಲ್ಲಿ ಸುದೀಪ್ ಹ್ಯಾಟ್ರಿಕ್ ಬಾರಿಸಲು ಮುಂದಾದ ಹಾಗೆ.!

English summary
According to the latest buzz, Director S.Narayan has come forward to direct Kiccha Sudeep in 'Simhadriya Simha-2'.
Please Wait while comments are loading...

Kannada Photos

Go to : More Photos