»   » ನಟಿ ಐಂದ್ರಿತಾ ರೇ, 'ಮೇಲುಕೋಟೆ ಮಂಜ' ಮತ್ತು ಸಂಭಾವನೆ ಕಿರಿಕ್

ನಟಿ ಐಂದ್ರಿತಾ ರೇ, 'ಮೇಲುಕೋಟೆ ಮಂಜ' ಮತ್ತು ಸಂಭಾವನೆ ಕಿರಿಕ್

Posted by:
Subscribe to Filmibeat Kannada

'ನಿರುತ್ತರ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ''ಕನ್ನಡ ಚಿತ್ರರಂಗದಲ್ಲಿ ನಾಯಕಿಯರ ಸಂಭಾವನೆ ಹಾಗೂ ಸ್ಥಾನಮಾನ'' ಕುರಿತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ನಟಿ ಐಂದ್ರಿತಾ ರೇ ಈಗ ಮತ್ತೊಮ್ಮೆ ಸಂಭಾವನೆ ವಿಚಾರದಲ್ಲಿಯೇ ವಿವಾದದ ಕೇಂದ್ರಬಿಂದು ಆಗಿದ್ದಾರೆ.

ನಟ ಜಗ್ಗೇಶ್ ಹಾಗೂ ನಟಿ ಐಂದ್ರಿತಾ ರೇ ಅಭಿನಯದ 'ಮೇಲುಕೋಟೆ ಮಂಜ' ಚಿತ್ರದ ಬಿಡುಗಡೆಗೆ ದಿನಗಣನೆ ಶುರು ಆಗಿದೆ. ಹೀಗಿದ್ದರೂ, ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಐಂದ್ರಿತಾ ರೇ ಭಾಗಿ ಆಗುತ್ತಿಲ್ಲ.[ಜಗ್ಗೇಶ್ ಸಾರಥ್ಯದ 'ಮೇಲುಕೋಟೆ ಮಂಜ' ಬರ್ತಾವ್ನೆ !]

ಪ್ರಚಾರಕ್ಕೆ ಬರಲು 5 ಲಕ್ಷ ರೂಪಾಯಿ ಕೊಡುವಂತೆ ನಿರ್ಮಾಪಕರ ಬಳಿ ನಟಿ ಐಂದ್ರಿತಾ ರೇ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಐಂದ್ರಿತಾ ಸ್ಪಷ್ಟನೆ ನೀಡಿರುವುದು ಹೀಗೆ....

ಸುಳ್ಳು ಸುದ್ದಿ.!

''ಪ್ರಚಾರ ಕಾರ್ಯಕ್ಕೆ ಪ್ರತ್ಯೇಕ 5 ಲಕ್ಷ ರೂಪಾಯಿ ಕೇಳಿದ್ದೇನೆ'' ಎಂಬ ಸುದ್ದಿ ಶುದ್ಧ ಸುಳ್ಳು ಅಂತ ನಟಿ ಐಂದ್ರಿತಾ ರೇ ಟ್ವೀಟ್ ಮಾಡಿದ್ದಾರೆ.

5 ಲಕ್ಷ ಬಾಕಿ ಇತ್ತು.!

5 ಲಕ್ಷ ಬಾಕಿ ಇತ್ತು.!

''ಸಂಭಾವನೆಯಲ್ಲಿ ನನಗೆ ಬರಬೇಕಾದ 5 ಲಕ್ಷ ರೂಪಾಯಿ ಇನ್ನೂ ಬಂದಿಲ್ಲ. ಅದನ್ನ ಬಿಟ್ಟು ಎಕ್ಸ್ ಟ್ರಾ ಕೇಳಿಲ್ಲ'' ಅಂತ ನಟಿ ಐಂದ್ರಿತಾ ರೇ ಸ್ಪಷ್ಟ ಪಡಿಸಿದ್ದಾರೆ.[ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]

ವಾಟ್ಸ್ ಆಪ್ ಸಂಭಾಷಣೆ

ವಾಟ್ಸ್ ಆಪ್ ಸಂಭಾಷಣೆ

2014, ಡಿಸೆಂಬರ್ 23 ರಂದು ನಟ, ನಿರ್ದೇಶಕ ಜಗ್ಗೇಶ್ ಜೊತೆ ನಟಿ ಐಂದ್ರಿತಾ ರೇ ನಡೆಸಿರುವ ವಾಟ್ಸ್ ಆಪ್ ಸಂಭಾಷಣೆ ಕೂಡ ಈಗ ಜಗಜ್ಜಾಹೀರಾಗಿದೆ.

5 ಲಕ್ಷ ಕೊಡುವವರೆಗೂ ಚಿತ್ರ ಬಿಡುಗಡೆಗೆ ಬಿಡುವುದಿಲ್ಲ

5 ಲಕ್ಷ ಕೊಡುವವರೆಗೂ ಚಿತ್ರ ಬಿಡುಗಡೆಗೆ ಬಿಡುವುದಿಲ್ಲ

''5 ಲಕ್ಷ ಸ್ಮಾಲ್ ಅಮೌಂಟ್ ಅಲ್ಲ. ಅದನ್ನ ಕೊಡುವವರೆಗೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ'' ಅಂತ ಅಂದೇ ಜಗ್ಗೇಶ್ ರವರ ಬಳಿ ಐಂದ್ರಿತಾ ರೇ ಹೇಳಿದ್ದರು. ಅದಕ್ಕೆ ಸಾಕ್ಷಿ ಈ ವಾಟ್ಸ್ ಆಪ್ ಸಂಭಾಷಣೆ.

'ಮೇಲುಕೋಟೆ ಮಂಜ'ನ ಕುರಿತು....

'ಮೇಲುಕೋಟೆ ಮಂಜ'ನ ಕುರಿತು....

ನವರಸ ನಾಯಕ ಜಗ್ಗೇಶ್ ನಟಿಸಿ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಸಿನಿಮಾ 'ಮೇಲುಕೋಟೆ ಮಂಜ'. ಇದೇ ಮೊದಲ ಬಾರಿಗೆ ಐಂದ್ರಿತಾ ರೇ-ಜಗ್ಗೇಶ್ ಕಾಂಬಿನೇಷನ್ ಇರುವ ಚಿತ್ರ ಇದು. ಫೆಬ್ರವರಿ 10 ರಂದು 'ಮೇಲುಕೋಟೆ ಮಂಜ' ಬಿಡುಗಡೆ ಆಗಲಿದೆ.

English summary
Kannada Actress Aindritha Ray has taken her twitter account to clariy on 'Melukote Manja' remuneration controversy.
Please Wait while comments are loading...

Kannada Photos

Go to : More Photos