»   » ಡಬ್ಬಿಂಗ್; 'ಸತ್ಯದೇವ್ ಐಪಿಎಸ್' ಮೊದಲ ದಿನವೇ ಠುಸ್

ಡಬ್ಬಿಂಗ್; 'ಸತ್ಯದೇವ್ ಐಪಿಎಸ್' ಮೊದಲ ದಿನವೇ ಠುಸ್

Posted by:
Subscribe to Filmibeat Kannada

ಕನ್ನಡಕ್ಕೆ ಇತರೆ ಭಾಷೆ ಚಿತ್ರಗಳ ಡಬ್ಬಿಂಗ್ ಗೆ ಡಾ. ರಾಜ್ ಕುಮಾರ್ ಅವರ ಕಾಲದಿಂದ ಈಗಿನ ವರೆಗೂ ವಿರೋಧವಿದೆ. ಅಲ್ಲದೇ ಆಗಾಗ ಬೆಳ್ಳಿತೆರೆಯಲ್ಲಿ ಡಬ್ಬಿಂಗ್ ವಿಚಾರ ಬಂದಾಗ ಪ್ರತಿಭಟನೆಗಳು ನಡೆಯುತ್ತಲೇ ಇವೆ.['ಮಾರ್ಚ್ 3' ರಂದೇ 'ಡಬ್ಬಿಂಗ್' ಚಿತ್ರ ಬಿಡುಗಡೆ ಯಾಕೆ? ಹಿಂದಿರುವ ಸತ್ಯವೇನು?]

ಇಂತಹ ಸಂದರ್ಭದಲ್ಲೂ ತಮಿಳು ನಟ ಅಜಿತ್ ಅಭಿನಯದ 'ಎನ್ನೈ ಅರಿಂಧಾಲ್' ಚಿತ್ರ ಕನ್ನಡದಲ್ಲಿ 'ಸತ್ಯದೇವ್ ಐಪಿಎಸ್' ಹೆಸರಿನಲ್ಲಿ ಇಂದು (ಮಾರ್ಚ್ 3) ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿತ್ತು. ಆದರೆ 'ಸತ್ಯದೇವ್ ಐಪಿಎಸ್' ಮತ್ತು ಡಬ್ಬಿಂಗ್ ಚಿತ್ರಗಳನ್ನು ವಿರೋಧಿಸಿ ರಾಜ್ಯದ ಹಲವು ಕಡೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನೆಡೆಸಿರುವುದರಿಂದ 'ಸತ್ಯದೇವ್ ಐಪಿಎಸ್' ಸಿನಿಮಾ ಪ್ರದರ್ಶನ ಮೊದಲ ದಿನವೇ ಠುಸ್ ಆಗಿದೆ.

ಚಿತ್ರ ಪ್ರದರ್ಶನ ವಿರೋಧಿಸಿ ಪ್ರತಿಭಟನೆ

ಚಿತ್ರ ಪ್ರದರ್ಶನ ವಿರೋಧಿಸಿ ಪ್ರತಿಭಟನೆ

ಕೊನೆಗೂ ಕನ್ನಡಿಗರು ತಮ್ಮ ತನವನ್ನು ಮೆರೆದಿದ್ದಾರೆ. ಕನ್ನಡಪರ ಸಂಘಟನೆಗಳು 'ಸತ್ಯದೇವ್ ಐಪಿಎಸ್' ಪ್ರದರ್ಶನ ಮಾಡುತ್ತಿದ್ದ ಥಿಯೇಟರ್ ಮುಂದಿನ ಪೋಸ್ಟರ್ ಗಳನ್ನು ಹರಿದುಹಾಕಿದ್ದು, ಪ್ರತಿಭಟನೆ ನಡೆಸಿದ್ದಾರೆ.[ಮಾರ್ಚ್ 11 ರಂದು 'ಕನ್ನಡ ಚಿತ್ರೋದ್ಯಮ ಬಂದ್'!]

ಹಲವು ಚಿತ್ರಮಂದಿರಗಳಲ್ಲಿ ಶೋ ಕ್ಯಾನ್ಸಲ್

ಹಲವು ಚಿತ್ರಮಂದಿರಗಳಲ್ಲಿ ಶೋ ಕ್ಯಾನ್ಸಲ್

'ಸತ್ಯದೇವ್ ಐಪಿಎಸ್' ಸಿನಿಮಾ ಪ್ರದರ್ಶನ ಮಾಡಲು ಮುಂದಾಗಿದ್ದ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಮೊದಲ ದಿನವೇ ಶೋ ಕ್ಯಾನ್ಸಲ್ ಆಗಿದೆ.[ಡಬ್ಬಿಂಗ್ ವ್ಯಾವಹಾರಿಕ ಸಮಸ್ಯೆ ಮಾತ್ರವಲ್ಲ, ಭಾವನಾತ್ಮಕ ಸಮಸ್ಯೆ ಕೂಡ!]

ಮೊದಲ ದಿನವೇ ಖಾಲಿ ಹೊಡೆದ ಥಿಯೇಟರ್ ಗಳು

ಮೊದಲ ದಿನವೇ ಖಾಲಿ ಹೊಡೆದ ಥಿಯೇಟರ್ ಗಳು

ಕನ್ನಡ ಚಿತ್ರಗಳ ಬದಲಾಗಿ ತಮಿಳಿನ ಕನ್ನಡ ಡಬ್ಬಿಂಗ್ 'ಸತ್ಯದೇವ್ ಐಪಿಎಸ್' ಚಿತ್ರ ಪ್ರದರ್ಶನ ಮಾಡುತ್ತಿದ್ದ, ಆಲ್ ಮೋಸ್ಟ್ ಥಿಯೇಟರ್ ಗಳು ಮೊದಲ ದಿನವೇ ಖಾಲಿ ಖಾಲಿ ಹೊಡೆದಿವೆ.

ಹುಬ್ಬಳಿಯಲ್ಲಿ ಪ್ರತಿಭಟನೆ

ಹುಬ್ಬಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿಯಲ್ಲೂ 'ಸತ್ಯದೇವ್ ಐಪಿಎಸ್' ಗೆ ಬಾರಿ ವಿರೋಧ ವ್ಯಕ್ತವಾಗಿದ್ದು, ಕನ್ನಡಪರ ಸಂಘಟನೆಗಳು ಚಿತ್ರದ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಾರೆ.

ರಾಜ್ಯದ ಹಲವು ಕಡೆ ಚಿತ್ರ ಪ್ರದರ್ಶನಕ್ಕೆ ತಡೆ

ರಾಜ್ಯದ ಹಲವು ಕಡೆ ಚಿತ್ರ ಪ್ರದರ್ಶನಕ್ಕೆ ತಡೆ

ಮಂಗಳೂರು, ಮೈಸೂರು, ಚಿತ್ರದುರ್ಗದಲ್ಲಿಯೂ ಸಿನಿಮಾ ಪ್ರದರ್ಶನಕ್ಕೆ ತಡೆಹಿಡಿಯಲಾಗಿದೆ.

ಬೆಂಗಳೂರಿನಲ್ಲಿ ಚಿತ್ರ ಪ್ರದರ್ಶನಕ್ಕೆ ವಿರೋಧ

ಬೆಂಗಳೂರಿನಲ್ಲಿ ಚಿತ್ರ ಪ್ರದರ್ಶನಕ್ಕೆ ವಿರೋಧ

ಬೆಂಗಳೂರಿನಲ್ಲಿ ವಾಟಾಳ್ ನಾಗ್ ರಾಜ್ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವುದರಿಂದ, ಚಿತ್ರ ಪ್ರದರ್ಶನಕ್ಕೆ ತಡೆಹಿಡಿಯಲಾಯಿತು. ಅಲ್ಲದೇ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭದ್ರತೆ ಒದಗಿಸಲು 50 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

English summary
Ajith Starrer Dubbed Kannada Cinema 'Sathyadev IPS' release canceled all most Karnataka Theaters.
Please Wait while comments are loading...

Kannada Photos

Go to : More Photos