»   » ಅಣ್ಣಾವ್ರು ಮತ್ತು ಅಕ್ಕಿನೇನಿ ಅಣ್ಣ ತಮ್ಮ ಥರ ಇದ್ರು

ಅಣ್ಣಾವ್ರು ಮತ್ತು ಅಕ್ಕಿನೇನಿ ಅಣ್ಣ ತಮ್ಮ ಥರ ಇದ್ರು

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ತೆಲುಗು ಚಿತ್ರರಂಗದ ಅದ್ಭುತ ಕಲಾವಿದ ಅಕ್ಕಿನೇನಿ ನಾಗೇಶ್ವರ ರಾವ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿಗೆರೆದಿದೆ. ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಮೇರು ನಟ ನಾಗೇಶ್ವರ ರಾವ್ ಅವರು ಇಹಲೋಹ ಯಾತ್ರೆಯನ್ನು ಮುಗಿಸಿದ್ದಾರೆ. ತೆಲುಗು ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ.

ಕನ್ನಡ ಚಿತ್ರರಂಗದ ಅನೇಕ ಗಣ್ಯರು ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ನಟ ನಾಗೇಶ್ವರ ರಾವ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಟ ಶಿವರಾಜ್ ಕುಮಾರ್, ದ್ವಾರಕೀಶ್, ದೊಡ್ಡಣ್ಣ, ಹೇಮ ಚೌಧರಿ,ಪ್ರಿಯಾಮಣಿ ತಮ್ಮ ಶೋಕ ಸಂತಾಪ ಸೂಚಿಸಿದ್ದಾರೆ. ಅಕ್ಕಿನೇನಿ ಕುಟುಂಬಕ್ಕೆ ಮೃತರ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಪುನೀತ್ ರಾಜಕುಮಾರ್ ಹೊರತಂದ 'ಡಾ. ರಾಜ್ ಕುಮಾರ್ ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ' ಪುಸ್ತಕದಲ್ಲಿ ಡಾ. ರಾಜಕುಮಾರ್ ಮತ್ತು ಅಕ್ಕಿನೇನಿ ನಾಗೇಶ್ವರ ರಾವ್ ನಡುವಣ ಸಂಬಂಧದ ಬಗ್ಗೆ ವಿವರಿಸಲಾಗಿದೆ. ಅಕ್ಕಿನೇನಿ ಅವರು ಅಪ್ಪಾಜಿಯ ಸರಳತೆ ಹಾಗೂ ಅವರಿಗೆ ಅಚ್ಚ ಬಿಳಿ ಬಣ್ಣದ ಮೇಲಿದ್ದ ಒಲವಿಗಾಗಿ ಬಹಳ ಮೆಚ್ಚುತ್ತಿದ್ದರು. ಇದೇ ಕಾರಣಕ್ಕೆ ಅವರು ಅಪ್ಪಾಜಿಯವರನ್ನು ಅಕ್ಕಿನೇನಿ 'ಪೆಳ್ಳಿ ಕೊಡಕು' ಎನ್ನುತ್ತಿದ್ದರು. ಅಪ್ಪಾಜಿ ತರ ನಾಗೇಶ್ವರ ರಾವ್ ಸಹ ಕ್ರಮವಾಗಿ ಹನ್ನೆರಡು ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಒಂದನ್ನೊಂದು ಪ್ರತಿಬಿಂಬಿಸುವ ಪಾತ್ರಗಳನ್ನು ಮಾಡಿದ್ದಾರೆ ಎಂದು ಶಿವರಾಜ್ ಕುಮಾರ್ ನೆನಪಿಸಿಕೊಂಡಿದ್ದಾರೆ.

ಡಾ. ರಾಜ್ ಜತೆ ಎನ್ಟಿಆರ್, ಎಎನ್ ಆರ್ ಚಿತ್ರ

ಕನ್ನಡ ಹಾಗೂ ತೆಲುಗು ಚಿತ್ರರಂಗದ ಮೇರು ನಟರಾದ ಡಾ. ರಾಜ್ ಕುಮಾರ್, ಎನ್ ಟಿ ರಾಮರಾವ್ ಜತೆ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಅಪರೂಪದ ಚಿತ್ರ

ನಾಗೇಶ್ವರರಾವ್ ನಿಧನಕ್ಕೆ ಶಿವರಾಜ್ ಕಂಬನಿ

ನಾಗೇಶ್ವರರಾವ್ ಹಾಗೂ ಅವರ ಕುಟುಂಬದೊಡನೆ ಅಪ್ಪಾಜಿ ಒಳ್ಳೆ ಸಂಬಂಧ ಹೊಂದಿದ್ದರು. ಅಣ್ಣ ತಮ್ಮಂದಿರಂತೆ ನಾವು ಪರಸ್ಪರ ಬೆರೆಯುತ್ತಿದ್ದೆವು. ಈಗಲೂ ಅಕ್ಕಿನೇನಿ ಕುಟುಂಬದೊಡನೆ ಅದೇ ಒಡನಾಟವಿದೆ ಇದಕ್ಕೆಲ್ಲ ನಾಗೇಶ್ವರ ರಾವ್ ಅವರ ಸರಳತೆ ಕಾರಣ. ಅವರನ್ನು ಕಳೆದುಕೊಂಡಿದ್ದು ದುಃಖ ತರಿಸಿದೆ-ಶಿವರಾಜ್ ಕುಮಾರ್

ರಾಜ್ ಕುಟುಂಬದೊಡನೆ ಅಕ್ಕಿನೇನಿ ಒಡನಾಟ

ಅಕ್ಕಿನೇನಿ ಕುಟುಂಬದವರು ಬೆಂಗಳೂರಿಗೆ ಬಂದರೆ ನಮ್ಮ ಮನೆಗೆ ಭೇಟಿ ನೀಡುತ್ತ್ತಾರೆ. ಅಪ್ಪಾಜಿ ಇದ್ದಾಗ ಹೈದರಾಬಾದಿಗೆ ಹೋದರೆ ನಾಗೇಶ್ವರರಾವ್ ಅವರನ್ನು ಕಾಣದೆ ಬರುತ್ತಿರಲಿಲ್ಲ. ನಮ್ಮ ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡ ದುಃಖದಲ್ಲಿದ್ದೇವೆ -ಶಿವರಾಜ್ ಕುಮಾರ್

ನಾಗೇಶ್ವರರಾವ್ ನಿಧನ: ನಿರ್ಮಾಪಕ ದ್ವಾರಕೀಶ್ ಕಂಬನಿ

ನಾಗೇಶ್ವರರಾವ್ ಅವರ ಅನಾರೋಗ್ಯದ ಬಗ್ಗೆ ಮುಂಚಿತವಾಗಿ ತಿಳಿದಿತ್ತು. ಆದರೆ, ಅವರ ಜೀವನ ಉತ್ಸಾಹ ನಮಗೆಲ್ಲ ಆದರ್ಶಪ್ರಾಯ. ಅವರು ಕಾಯಿಲೆ ನಡುವೆಯೂ ನಗುನಗುತ್ತಾ ಎಲ್ಲರೊಡನೆ ಬೆರೆತು ಮಾತನಾಡುತ್ತಿದ್ದರು

ಅಕ್ಕಿನೇನಿ ಸಾವು ಚಿತ್ರರಂಗಕ್ಕೆ ದೊಡ್ಡ ನಷ್ಟ : ದೊಡ್ಡಣ್ಣ

ಇದು ಕೇವಲ ತೆಲುಗು ಚಿತ್ರರಂಗಕ್ಕೆ ಮಾತ್ರವಲ್ಲ. ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ. ನಾಗೇಶ್ವರರಾವ್ ಇಲ್ಲದ ತೆಲುಗು ಚಿತ್ರರಂಗ ಊಹಿಸಲು ಸಾಧ್ಯವಾಗುತ್ತಿಲ್ಲ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಸಿಗಲಿ. ಇನ್ನಷ್ಟು ಪ್ರತಿಕ್ರಿಯೆಗಳನ್ನು ನಿರೀಕ್ಷಿಸಿ

ನಾಗೇಶ್ವರರಾವ್ ಕೊಡುಗೆ ಸ್ಮರಿಸಿದ ಹೇಮಾ ಚೌಧುರಿ

ನಟಿ ಹೇಮಾ ಚೌಧುರಿ ಅವರು ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಕುಟುಂಬದಿಂದ ದೊರೆತ ನೆರವು, ಸಹ ಕಲಾವಿದರಿಗೆ ನಾಗೇಶ್ವರರಾವ್ ಅವರು ನೀಡುತ್ತಿದ್ದ ಸ್ಫೂರ್ತಿ ಬಗ್ಗೆ ಸ್ಮರಿಸಿದರು. ಚಿತ್ರರಂಗ ಇಂದು ದಿಗ್ಗಜರೊಬ್ಬರನ್ನು ಕಳೆದುಕೊಂಡಿದೆ ಎಂದರು

ನಾಗೇಶ್ವರರಾವ್ ನಿಧನದ ಬಗ್ಗೆ ಪ್ರಿಯಾಮಣಿ

ನಾಗೇಶ್ವರರಾವ್ ನಿಧನದ ಬಗ್ಗೆ ಸಂತಾಪ ವ್ಯಕ್ತ ಪಡಿಸಿ ಬಹುಭಾಷಾ ನಟಿ ಪ್ರಿಯಾಮಣಿ ಟ್ವೀಟ್ ಮಾಡಿದ್ದಾರೆ. ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.

ಅಕ್ಕಿನೇನಿ ಅವರ ನಿಧನ ಶಾಕಿಂಗ್ ಆಗಿದೆ : ಪ್ರಣೀತಾ

ಅಕ್ಕಿನೇನಿ ನಾಗೇಶ್ವರರಾವ್ ಅವರ ನಿಧನ ಶಾಕಿಂಗ್ ಸುದ್ದಿಯಾಗಿದೆ ಎಂದಿರುವ ಬಹುಭಾಷಾ ನಟಿ ಪ್ರಣೀತಾ

ನಾಗೇಶ್ವರರಾವ್ ನಮ್ಮ ಹೃದಯದಲ್ಲಿ ನೆಲೆಸಿದ್ದೀರಿ: ಅಕುಲ್

ಅಕ್ಕಿನೇನಿ ನಾಗೇಶ್ವರರಾವ್ ನಿಮ್ಮ ಪಾತ್ರಗಳು ಸದಾಕಾಲ ನಮ್ಮ ಹೃದಯದಲ್ಲಿ ಚಿರಸ್ಮರಣೀಯವಾಗಿ ನೆಲೆಸಿರುತ್ತದೆ ಎಂದಿರುವ ನಿರೂಪಕ, ನಟ ಅಕುಲ್ ಬಾಲಾಜಿ

ನಾಗೇಶ್ವರರಾವ್ ಜತೆ ಭೇಟಿ ಮರೆಯಲಾರೆ: ವಿಮಲಾ

ಮೇರು ನಟ ಅಕ್ಕಿನೇನಿ ನಾಗೇಶ್ವರರಾವ್ ಜತೆ ಭೇಟಿ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ. ಅವರ ಜತೆ ಇದ್ದ ಕ್ಷಣ ಮರೆಯಲಾರೆ ಎಂದಿರುವ ವಿಮಲಾ ರಾಮನ್

English summary
Legendary Telugu actor Akkineni Nageswara Rao, who was recently admitted to hospital, lost his battle with cancer on Wednesday (January 22, 2014). Kannada film industry has expressed shock to the death of Telugu ace actor Akkineni Nageswara Rao.
Please Wait while comments are loading...

Kannada Photos

Go to : More Photos