»   » '2.0' ಚಿತ್ರದಲ್ಲಿ ರಜನಿ ಹೀರೋ ಅಲ್ಲ, ಅಕ್ಷಯ್ ಹೀರೋ ಅಂತೆ

'2.0' ಚಿತ್ರದಲ್ಲಿ ರಜನಿ ಹೀರೋ ಅಲ್ಲ, ಅಕ್ಷಯ್ ಹೀರೋ ಅಂತೆ

Posted by:
Subscribe to Filmibeat Kannada

ಸದ್ಯ, ಚಿತ್ರಜಗತ್ತಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ '2.0' ಚಿತ್ರ ಸಖತ್ ಸೌಂಡ್ ಮಾಡ್ತಿದೆ. ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಮತ್ತಷ್ಟು ಕ್ಯೂರಿಯಸಿಟಿ ಹೆಚ್ಚಾಗಿದೆ.

ಈ ನಿರೀಕ್ಷೆಯ ಜೊತೆಗೆ ಸೂಪರ್ ಸ್ಟಾರ್ ರಜನಿಕಾಂತ್ ಮತ್ತಷ್ಟು ಕುತೂಹಲವನ್ನ ಹೆಚ್ಚಿಸಿದ್ದಾರೆ. ಹೌದು, ಎಲ್ಲರಿಗೂ ಗೊತ್ತಿರುವ ಹಾಗೆ, '2.0' ಚಿತ್ರದಲ್ಲಿ ರಜನಿ ಹೀರೋ ಮತ್ತು ಅಕ್ಷಯ್ ಕುಮಾರ್ ವಿಲನ್. ಆದ್ರೆ, ಯಾರಿಗೂ ಗೊತ್ತಿರದ ಮತ್ತೊಂದು ಇಂಟ್ರಸ್ಟಿಂಗ್ ವಿಷ್ಯ ಅಂದ್ರೆ, ರೋಬೋ ಸೀಕ್ವೆಲ್ ನಲ್ಲಿ ರಜನಿಕಾಂತ್ ಹೀರೋ ಅಲ್ಲ ವಂತೆ, ಅಕ್ಷಯ್ ಕುಮಾರ್ ರಿಯಲ್ ಹೀರೋ ಅಂತೆ.[ರಜನಿಕಾಂತ್ '2.0' ಚಿತ್ರದ ಫಸ್ಟ್ ಲುಕ್ ರಿಲೀಸ್]

ಹೀಗಂತ, ಯಾರೋ ಬೇರೆಯವರು ಹೇಳಿಲ್ಲ. ಈ ಸತ್ಯ ಸಂಗಂತಿಯನ್ನ ಸ್ವತಃ ತಲೈವಾನೇ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ...

ಅಕ್ಷಯ್ ರಿಯಲ್ ಹೀರೋ

ಅಕ್ಷಯ್ ರಿಯಲ್ ಹೀರೋ

ರಜನಿಕಾಂತ್ ನಾಯಕನಾಗಿ ಅಭಿನಯಿಸುತ್ತಿರುವ '2.0' ಚಿತ್ರದಲ್ಲಿ ಅಕ್ಷಯ್ ಕುಮಾರ್ ಪಾತ್ರವೇ ಹೀರೋ ಅಂತಾ ರಜನಿಕಾಂತ್ ಹೇಳಿದ್ದಾರೆ.

ರಜನಿಕಾಂತ್ ಹೇಳಿದ್ದೇನು?

ರಜನಿಕಾಂತ್ ಹೇಳಿದ್ದೇನು?

''ಅಕ್ಷಯ್ ಕುಮಾರ್ '2.0' ಚಿತ್ರದ ಹೀರೋ. ಒಂದು ವೇಳೆ ನನಗೆ ಈ ಚಿತ್ರದಲ್ಲಿ ಪಾತ್ರವನ್ನ ಆಯ್ಕೆ ಮಾಡುವ ಅವಕಾಶವಿದ್ದಿದ್ದರೇ ನಾನು ಅಕ್ಷಯ್ ಕುಮಾರ್ ಅವರ ಪಾತ್ರವನ್ನೇ ಮಾಡುತ್ತಿದೆ''-ರಜನಿಕಾಂತ್

ಅಕ್ಷಯ್ ಪಾತ್ರವೇನು?

ಅಕ್ಷಯ್ ಪಾತ್ರವೇನು?

ನಿರ್ದೇಶಕ ಶಂಕರ್ ಹೇಳಿರುವಂತೆ, '2.0' ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರದ್ದು ನೆಗಿಟೀವ್ ಪಾತ್ರ. ಅದಕ್ಕೆ ತಕ್ಕಂತೆ ಅಕ್ಷಯ್ ಅವರ ಗೆಟಪ್ ಕೂಡ ಬಹಿರಂಗವಾಗಿತ್ತು.

3 ಗಂಟೆ ಮೇಕಪ್

3 ಗಂಟೆ ಮೇಕಪ್

'2.0' ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಸುಮಾರು 3 ಗಂಟೆಗಳ ಕಾಲ ಮೇಕಪ್ ಹಾಕುತ್ತಿದ್ದರಂತೆ. ಹಾಗೇ ಆ ಮೇಕಪ್ ತೆಗೆಯಲು 1 ಗಂಟೆ ಸಮಯ ಬೇಕಾಗಿತ್ತಂತೆ. ''ನನ್ನ 25 ವರ್ಷದ ವೃತ್ತಿ ಜೀವನದಲ್ಲಿ, ಮೇಕಪ್ ಬಳಸಿದ್ದು ತುಂಬಾ ಕಮ್ಮಿ, ಆದರೆ, ಆ 25 ವರ್ಷಗಳ ಮೇಕಪ್ ನ್ನ ಒಂದೇ ಚಿತ್ರದಲ್ಲಿ ಬಳಸಲಾಗಿದೆ'' ಎಂದು ಅಕ್ಕಿ ತಮ್ಮ ಅನುಭವವನ್ನ ಹಂಚಿಕೊಂಡರು.

ರಜನಿ ಬಗ್ಗೆ ಅಕ್ಕಿ ಮಾತು

ರಜನಿ ಬಗ್ಗೆ ಅಕ್ಕಿ ಮಾತು

'' ರಜನಿಕಾಂತ್ ಸೂಪರ್ ಸ್ಟಾರ್ ಮಾತ್ರವಲ್ಲ, ಅವರೊಬ್ಬರು ಗ್ಯಾಲೆಕ್ಸಿ ಇದ್ದ ಹಾಗೆ. 'ಬಾಬಾ' ಚಿತ್ರದಿಂದ ವಿತರಕರಿಗೆ ನಷ್ಟವಾದಾಗ, ಅವರ ಹಣವನ್ನ ವಾಪಸ್ ಕೊಟ್ಟು ಅವರ ನೆರವಿಗೆ ನಿಂತರು. ಇದು ನಿಜವಾದ ಸೂಪರ್ ಸ್ಟಾರ್ ಗೆ ಇರಬೇಕಾದ ಗುಣ'' ಎಂದು ರಜನಿಯ ಬಗ್ಗೆ ಅಕ್ಷಯ್ ಮೆಚ್ಚುಗೆ ವ್ಯಕ್ತಪಡಿಸಿದರು.

ಯಾರು ಹೀರೋ? ಯಾರು ವಿಲನ್?

ಯಾರು ಹೀರೋ? ಯಾರು ವಿಲನ್?

'2.0' ಚಿತ್ರದಲ್ಲಿ ತಲೈವಾನೇ ಹೀರೋ. ಆದ್ರೆ, ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಪಾತ್ರ ತುಂಬಾ ಮುಖ್ಯವಾಗಿರುತ್ತೆ ಎಂಬುದರ ಅರ್ಥವಾಗಿ ರಜನಿ ಹೀಗೆ ಹೇಳಿದ್ದಾರೆ. ಹೀಗಾಗಿ ಸಿನಿಮಾನ ನೋಡಿದ್ಮೇಲೆ ರಿಯಲ್ ಹೀರೋ ಯಾರು, ವಿಲನ್ ಯಾರು ಅಂತಾ ನಿರ್ಧರಿಸಬಹುದು.

English summary
Rajinikanth was so impressed by Akshay and he said, “Akshay is the hero of the film, if I was given a choice I would have done Akki’s role.”
Please Wait while comments are loading...

Kannada Photos

Go to : More Photos