»   » ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡ ಸಿನಿಮಾ 'ರಿಸರ್ವೇಶನ್' ಬಗ್ಗೆ ನಿಮಗೆಷ್ಟು ಗೊತ್ತು.?

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡ ಸಿನಿಮಾ 'ರಿಸರ್ವೇಶನ್' ಬಗ್ಗೆ ನಿಮಗೆಷ್ಟು ಗೊತ್ತು.?

Posted by:
Subscribe to Filmibeat Kannada

2016 ನೇ ಸಾಲಿನ ಪ್ರತಿಷ್ಟಿತ 64ನೇ ರಾಷ್ಟ್ರೀಯ ಪ್ರಶಸ್ತಿ ಇಂದು ಪ್ರಕಟವಾಗಿದೆ. ಅದರಲ್ಲಿ ಅತ್ಯುತ್ತಮ ಕನ್ನಡ ಚಿತ್ರ (ಪ್ರಾದೇಶಿಕ) ಪ್ರಶಸ್ತಿ ಗಿಟ್ಟಿಸಿಕೊಂಡಿರುವ ಸಿನಿಮಾ 'ರಿಸರ್ವೇಶನ್'.

ನಿಖಿಲ್ ಮಂಜೂ ನಿರ್ದೇಶನ ಮಾಡಿರುವ 'ರಿಸರ್ವೇಶನ್' ಚಿತ್ರ ಇಲ್ಲಿಯವರೆಗೂ ಗಾಂಧಿನಗರದಲ್ಲಿ ಸದ್ದು ಮಾಡಿಲ್ಲ. ಹೀಗಾಗಿ 'ರಿಸರ್ವೇಶನ್' ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ.[ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ]

ಸಿನಿ ಪ್ರಿಯರ ಗಮನಕ್ಕೆ ಬಾರದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ 'ರಿಸರ್ವೇಶನ್' ಚಿತ್ರದ ಕುರಿತು ನಮಗೆ ಗೊತ್ತಿರುವ ಮಾಹಿತಿ ಇಲ್ಲಿದೆ ಓದಿರಿ....

'ರಿಸರ್ವೇಶನ್' ದುಷ್ಪರಿಣಾಮಗಳು

'ರಿಸರ್ವೇಶನ್' ದುಷ್ಪರಿಣಾಮಗಳು

ಶೀರ್ಷಿಕೆಯೇ ಹೇಳುವಂತೆ ಮೀಸಲಾತಿ ಸುತ್ತ ಹೆಣೆದಿರುವ ಕಥೆಯೇ 'ರಿಸರ್ವೇಶನ್' ಚಿತ್ರದ ಕಥಾಹಂದರ. ಮೀಸಲಾತಿಯಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಕುರಿತು ಬೆಳಕು ಚೆಲ್ಲುವ ಚಿತ್ರ ಇದು. ಈ ಚಿತ್ರ ಯಾವುದೇ ನೈಜ ಘಟನೆಯಿಂದ ಆಧರಿಸಿದ್ದಲ್ಲ. ಆದ್ರೆ, ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನೇ ಇಟ್ಟುಕೊಂಡು ಕಾಲ್ಪನಿಕವಾಗಿ ಚಿತ್ರಕಥೆ ರಚಿಸಲಾಗಿದೆ. ['ಅಲ್ಲಮ' ಚಿತ್ರಕ್ಕೆ ರಾಷ್ಟ್ರ ಮನ್ನಣೆ: ಕನ್ನಡಕ್ಕೆ 4 ರಾಷ್ಟ್ರ ಪ್ರಶಸ್ತಿ]

'ರಿಸರ್ವೇಶನ್' ಚಿತ್ರತಂಡದ ಕುರಿತು

'ರಿಸರ್ವೇಶನ್' ಚಿತ್ರತಂಡದ ಕುರಿತು

'ರಿಸರ್ವೇಶನ್' ಚಿತ್ರಕ್ಕೆ ಶ್ರೀಲಲಿತೆ ಕಥೆ ರಚಿಸಿದ್ರೆ, ಪ್ರದೀಪ್ ಶೆಟ್ಟಿ ಕೆಂಚನೂರು, ನಿಖಿಲ್ ಮಂಜೂ ಲಿಂಗೇಗೌಡ, ಬಿ.ಶಿವಾನಂದ ಚಿತ್ರಕಥೆ ಬರೆದಿದ್ದಾರೆ. ಸಮೀರ್ ಸಂಗೀತ ನೀಡಿರುವ ಈ ಚಿತ್ರಕ್ಕೆ ನಿಖಿಲ್ ಮಂಜೂ ಲಿಂಗೇಗೌಡ ಆಕ್ಷನ್ ಕಟ್ ಹೇಳಿದ್ದಾರೆ.

ಪ್ರಶಸ್ತಿ ಸಿಗುವ ಬಗ್ಗೆ ನಂಬಿಕೆ ಇತ್ತು

ಪ್ರಶಸ್ತಿ ಸಿಗುವ ಬಗ್ಗೆ ನಂಬಿಕೆ ಇತ್ತು

ಮೀಸಲಾತಿ ಅಂತಹ ಸಬ್ಜೆಕ್ಟ್ ಇಟ್ಟುಕೊಂಡು ಸಿನಿಮಾ ಮಾಡಿದ್ರಿಂದ ಪ್ರಶಸ್ತಿ ಸಿಗುವ ಕುರಿತು ವಿಶ್ವಾಸ ಇತ್ತು ಎನ್ನುತ್ತಾರೆ ನಿರ್ದೇಶಕ ನಿಖಿಲ್ ಮಂಜೂ.

ಚಿತ್ರ ಇನ್ನೂ ರಿಲೀಸ್ ಆಗಿಲ್ಲ.!

ಚಿತ್ರ ಇನ್ನೂ ರಿಲೀಸ್ ಆಗಿಲ್ಲ.!

ಅಂದ್ಹಾಗೆ, 'ರಿಸರ್ವೇಶನ್' ಚಿತ್ರ ಇನ್ನೂ ರಿಲೀಸ್ ಆಗಿಲ್ಲ. ಆದಷ್ಟು 'ರಿಸರ್ವೇಶನ್' ಚಿತ್ರವನ್ನ ಬಿಡುಗಡೆ ಮಾಡುವ ಕುರಿತ ಆಲೋಚನೆ ನಿಖಿಲ್ ಮಂಜೂ ರವರಿಗಿದೆ.

2013ರಲ್ಲಿ ರಾಜ್ಯ ಪ್ರಶಸ್ತಿ

2013ರಲ್ಲಿ ರಾಜ್ಯ ಪ್ರಶಸ್ತಿ

ನಿಖಿಲ್ ಮಂಜೂ ನಿರ್ದೇಶನದ ಹಜ್ ಚಿತ್ರ 'ಪ್ರಥಮ ಅತ್ಯುತ್ತಮ ಚಿತ್ರ 'ರಾಜ್ಯ ಪ್ರಶಸ್ತಿ' ಲಭಿಸಿತ್ತು. [2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ]

English summary
Nikhil Manjoo directorial Kannada Film 'Reservation' has bagged 'Best Film' (Kannada) in 64th National Film Awards. Here is the detailed report about the movie 'Reservation'
Please Wait while comments are loading...

Kannada Photos

Go to : More Photos