»   » ಅಂಬರೀಶ್-ಸುಮಲತಾ ದಂಪತಿಗಿಂದು 25ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ

ಅಂಬರೀಶ್-ಸುಮಲತಾ ದಂಪತಿಗಿಂದು 25ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ

Posted by:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್-ಸುಮಲತಾ ಕುಟುಂಬದಲ್ಲಿ ಇಂದು ಸಡಗರ ಸಂಭ್ರಮ. ಅವರ ಮನೆಯಲ್ಲಿ ಇವತ್ತು ಅಕ್ಷರಶಃ ಹಬ್ಬದ ವಾತಾವರಣ.

ದಿನ ಬೆಳಗ್ಗೆ ಆಯ್ತು ಅಂದ್ರೆ, ಚಿತ್ರರಂಗ, ರಾಜಕಾರಣ ಅಂತ ಬಿಜಿಯಾಗಿರುವ ಅಂಬರೀಶ್, ಇಂದು ಬಿಡುವು ಮಾಡಿಕೊಂಡು ಮುದ್ದು ಮಡದಿ ಸುಮಲತಾ ಹಾಗೂ ಪುತ್ರನ ಜೊತೆ ಖುಷಿ ಖುಷಿಯಾಗಿದ್ದಾರೆ. ಅದಕ್ಕೆಲ್ಲಾ ಕಾರಣ ಅವರ 25ನೇ ವಿವಾಹ ವಾರ್ಷಿಕೋತ್ಸವ.!

ಸಿಲ್ವರ್ ಜ್ಯುಬಿಲಿ ಸಂಭ್ರಮ

ನಟ ಅಂಬರೀಶ್ - ನಟಿ ಸುಮಲತಾ ಮದುವೆ ಆಗಿ ಇಂದಿಗೆ 25 ವರ್ಷ. 1992 ಡಿಸೆಂಬರ್ 8 ರಂದು ಸಪ್ತಪದಿ ತುಳಿದ ಈ ಜೋಡಿ, ಕಷ್ಟ-ಸುಖಗಳನ್ನ ಸಮನಾಗಿ ಸ್ವೀಕರಿಸಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. [ಅಂಬರೀಶ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಸ್ಟಾರ್ಸ್]

ಸ್ಯಾಂಡಲ್ ವುಡ್ ಮಾದರಿ ಜೋಡಿ

ವಾದ-ವಿವಾದಗಳಿಂದ ಸದಾ ದೂರ ಇದ್ದು, ಒಂದಾಗಿ ಒಗ್ಗಟ್ಟಾಗಿ ಇರುವ ಅಂಬರೀಶ್-ಸುಮಲತಾ ಸ್ಯಾಂಡಲ್ ವುಡ್ ನ ಮಾದರಿ ಜೋಡಿ ಅಂದ್ರೆ ಖಂಡಿತ ಅತಿಶಯೋಕ್ತಿ ಅಲ್ಲ. [NTR ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಅಂಬರೀಶ್ ದಂಪತಿ]

ಟ್ವಿಟ್ಟರ್ ನಲ್ಲಿ ಸುಮಲತಾ ಸಂತಸ

25ನೇ ವರ್ಷದ ಮದುವೆ ವಾರ್ಷಿಕೋತ್ಸವದ ಖುಷಿಯನ್ನ ತಮ್ಮ ಅಭಿಮಾನಿಗಳ ಜೊತೆ ಸುಮಲತಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವುದು ಹೀಗೆ....

ಶುಭಾಶಯ ತಿಳಿಸಿದ ದರ್ಶನ್

''ನಿಮ್ಮ ವಾರ್ಷಿಕೋತ್ಸವ ಸಿಲ್ವರ್ ಇರಬಹುದು. ಆದ್ರೆ, ನಿಮ್ಮ ಪ್ರೀತಿ ಬಂಗಾರಕ್ಕಿಂತಲೂ ಅತ್ಯಮೂಲ್ಯ. ಹ್ಯಾಪಿ ಆನಿವರ್ಸರಿ ಅಪ್ಪಾಜಿ, ಅಮ್ಮ'' ಅಂತ ಸುಮಲತಾ-ಅಂಬರೀಶ್ ದಂಪತಿಗೆ ನಟ ದರ್ಶನ್ ಶುಭಾಶಯ ತಿಳಿಸಿದ್ದಾರೆ.

English summary
Kannada Actor, Congress Politician Ambareesh and Wife Sumalatha celebrates their 25th Wedding Anniversary today (December 8th).
Please Wait while comments are loading...

Kannada Photos

Go to : More Photos