»   » ಮತ್ತೆ ಮಂಡ್ಯದ ಗಂಡಾಗಿ ರೆಬೆಲ್ ಸ್ಟಾರ್ ಅಂಬರೀಶ್

ಮತ್ತೆ ಮಂಡ್ಯದ ಗಂಡಾಗಿ ರೆಬೆಲ್ ಸ್ಟಾರ್ ಅಂಬರೀಶ್

Written by: ಜೀವನರಸಿಕ
Subscribe to Filmibeat Kannada

ಅಂಬಿಯನ್ನ ಯಾವ ಪಾತ್ರದಲ್ಲಿ ನೋಡಿದ್ರೂ ಮಂಡ್ಯದ ಗಂಡಾಗಿ ನೋಡಿದಷ್ಟು ಮಜಾ ಅಭಿಮಾನಿಗಳಿಗೆ ಸಿಕ್ಕೋದಿಲ್ಲ. ರೆಬೆಲ್ ಸ್ಟಾರ್ ಅಂಬಿಯನ್ನ ಮತ್ತೊಮ್ಮೆ ಮಂಡ್ಯದ ಗಂಡಾಗಿ ಸಿನಿಪ್ರೇಮಿಗಳು ನೋಡೋ ಕಾಲ ದೂರವಿಲ್ಲ. ಅದು ಅವ್ರ ಮುಂದಿನ ಚಿತ್ರ ದೊಡ್ಮನೆಯಲ್ಲಿ.

ಪವರ್ ಸ್ಟಾರ್ ಪುನೀತ್ಗೆ ತಂದೆಯಾಗಿ ಅಂಬಿ ಅಭಿನಯಿಸ್ತಿರೋ ಚಿತ್ರ 'ದೊಡ್ಮನೆ'ಯಲ್ಲಿ ರೆಬೆಲ್ ಸ್ಟಾರ್ ಮಂಡ್ಯದ ಗಂಡಾಗಿ ಮಿಂಚು ಹರಿಸಲಿದ್ದಾರೆ. ಚಿತ್ರದಲ್ಲಿ ಅಂಬಿಯ ಪವರ್ಫುಲ್ ಡೈಲಾಗ್ಗಳು ಮೋಡಿ ಮಾಡಲಿವೆಯಂತೆ. ಮಂಡ್ಯದ ಡೈಲಾಗುಗಳು ಅಂಬಿ ಬಾಯಲ್ಲಿ ಹೇಗೆ ಬರಲಿವೆ ಎಂಬುದನ್ನ ವಿವರಿಸಿ ಹೇಳಬೇಕಾಗಿಲ್ಲ. ಅದನ್ನು ಚಿತ್ರ ನೋಡಿಯೇ ಸವಿಯಬೇಕು. [ಅಂಬರೀಶ್ ಗೆ ಏನಾಗಿಲ್ಲ.! ಸುಮ್ನೆ ಗಾಳಿ ಸುದ್ದಿ ಹಬ್ಬಿಸ್ಬೇಡಿ..!]


Ambareesh to shine as Mandyada Gandu in Dodmane Huduga

ಅಂಬಿಯನ್ನ ಮತ್ತೊಮ್ಮೆ ಮಂಡ್ಯದ ಗಂಡಾಗಿ ತೋರಿಸೋಕೆ ಸ್ಕ್ರಿಪ್ಟ್ ತಯಾರಿಸಿದಂತಿರೋ ನಿರ್ದೇಶಕ ಸೂರಿ ಮಂಡ್ಯ ಹಿನ್ನೆಲೆಯಲ್ಲಿ ನಡೆಯೋ ಕಥೆಯನ್ನ ದೊಡ್ಮನೆಯಲ್ಲಿಟ್ಟಿದ್ದಾರೆ. ಮಂಡ್ಯದ ದೊಡ್ಡಗೌಡರೊಬ್ಬರ ಮನೆಯಲ್ಲಿ ನಡೆಯೋ ಕಥೆ ಇದಾಗಿದ್ದು, ಇಲ್ಲಿ ಚಿತ್ರಕ್ಕೆ ಹುಬ್ಬಳ್ಳಿಯ ಸಂಬಂಧ ಕೂಡ ಇರಲಿದೆ.


ಕರ್ನಾಟಕದ ಎರಡು ಭಾಗಗಳನ್ನ ಸಿನಿಮಾ ಮೂಲಕ ತೋರಿಸೋಕೆ ಹೊರಟಿರುವ ಸೂರಿ. ಮಂಡ್ಯದ ಗೌಡನಾಗಿ ಅಂಬಿಯಿಂದ ಎಂತಹಾ ಡೈಲಾಗ್ಸ್ ಹೇಳಿಸಿದ್ದಾರೆ ಅನ್ನೋ ಕ್ಯೂರಿಯಾಸಿಟಿಗೆ ಈ ವರ್ಷದ ಕೊನೆಯಲ್ಲಿ ಉತ್ತರ ಸಿಗಲಿದೆ.

English summary
Rebel Star Ambareesh to shine as Mandyada Gandu in Duniya Soori's Dodmane Huduga, in which Puneeth Rajkumar is playing lead role. No surprise, Ambi will be telling lot of Mandya dialogues much to the amusement of his fans.
Please Wait while comments are loading...
Best of 2016

Kannada Photos

Go to : More Photos