twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಷ್ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು

    By Rajendra
    |

    ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಮಂಗಳವಾರ (ಮೇ 29) ಹುಟ್ಟುಹಬ್ಬ ಸಂಭ್ರಮ. ಬೆಂಗಳೂರು ಜೆಪಿ ನಗರದ ಅವರ ನಿವಾಸದ ಮುಂದೆ ಇಂದು ಅಭಿಮಾನಿಗಳ ಸಾಗರವೇ ಹರಿದುಬರುತ್ತಿದೆ. ಆದರೆ ಅಂಬಿ ಇದುವರೆಗೂ ಅಭಿಮಾನಿಗಳಿಗೆ ದರ್ಶನ ನೀಡಿಲ್ಲ. ಅವರ ಬರುವಿಕೆಗಾಗಿ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.

    "ರೆಬೆಲ್ ಸ್ಟಾರ್ ಅಂಬರೀಷ್ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಲಿ. ಅವರು ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಹೆಚ್ಚು ಕೆಲಸ ಮಾಡಲಿ" ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ. ಜೆಪಿ ನಗರದ ನಿವಾಸದ ಮುಂದೆ ನೆರೆದಿರುವ ಬಹುತೇಕ ಅಭಿಮಾನಿಗಳ ಬಾಯಿಂದ ಇದೇ ಮಾತು ಕೇಳಿಬರುತ್ತಿದೆ.

    ಅಂಬರೀಷ್ ಅವರು ರಾಜಕೀಯದಲ್ಲಿ ಇನ್ನೂ ದೊಡ್ಡ ಹೆಸರು ಮಾಡಬೇಕು. ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆಗಳು ಅವರಿಗಿವೆ ಎಂದು ಅಭಿಮಾನಿಗಳು ತಮ್ಮ ಅಭಿಮಾನವನ್ನು ಹೊರಹಾಕಿದ್ದಾರೆ. ಅಂಬರೀಷ್ ಮನಸ್ಸು ಮಾಡಿದ್ದರೆ ಇಷ್ಟೊತ್ತಿಗಾಗಲೆ ಕರ್ನಾಟಕದ ಮುಖ್ಯಮಂತ್ರಿ ಆಗಬಹುದಿತ್ತು.

    ಆದರೆ ಅವರು ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಲಿಲ್ಲ ಎಂಬುದು ಇತಿಹಾಸ. ಎರಡು ಬಾರಿ ಸಂಸದರಾಗಿ, ಕೆಲಕಾಲ ಕೇಂದ್ರ ಸಚಿವರಾಗಿ ರಾಜಕೀಯ ರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಆದರೆ ಅಂಬರೀಷ್ ಎಂದೂ ರಾಜಕೀಯಕ್ಕೆ ಜೋತು ಬೀಳಲಿಲ್ಲ.

    ನಾಗಹಾವು ಚಿತ್ರದಿಂದ ಬಣ್ಣದ ಬದುಕು ಆರಂಭಿಸಿದ ಅಂಬರೀಷ್ ತಮ್ಮ ಸುದೀರ್ಘ 40 ವರ್ಷಗಳ ಚಿತ್ರರಂಗದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪಡುವಾರಳ್ಳಿ ಪಾಂಡವರು, ರಂಗನಾಯಕಿ, ಶುಭಮಂಗಳ, ಒಲವಿನ ಉಡುಗೊರೆ ಮುಂತಾದ ಚಿತ್ರಗಳಲ್ಲಿನ ಅಭಿನಯದ ಮೂಲಕ ಪರಿಪೂರ್ಣ ಕಲಾವಿದ ಎಂದು ಗುರುತಿಸಿಕೊಂಡವರು.

    ಮೇ 29ರಿಂದ ಮೂರು ದಿನಗಳ ಕಾಲ ಅಂಬರೀಷ್ ಅವರ ಹುಟ್ಟುಹಬ್ಬ ಕಾರ್ಯಕ್ರಮ ಆಚರಿಸಲು ಕನ್ನಡ ಚಿತ್ರರಂಗ ತೀರ್ಮಾನಿಸಿದೆ. ಮಂಗಳವಾರ ಸಂಜೆ (ಮೇ 29) ಅರಮನೆ ಮೈದಾನದಲ್ಲಿ ನಡೆಯಲಿರುವ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

    ಈಗಾಗಲೆ ಅಂಬರೀಷ್ ಅವರ ಜೆಪಿ ನಗರ ನಿವಾಸದ ಮುಂದೆ ಅಭಿಮಾನಿಗಳ ಸಾಗರವೇ ನೆರೆದಿದೆ. ದೊಡ್ಡ ದೊಡ್ಡ ಕಟೌಟ್‌ಗಳು, ಬ್ಯಾನರ್‌ಗಳನ್ನು ನಿಲ್ಲಿಸಲಾಗಿದೆ. ಬೆಂಗಳೂರಿನ ಬಹುತೇಕ ಕಡೆಗಳಲ್ಲೂ ಅಂಬಿಗೆ ಹುಟ್ಟುಹಬ್ಬ ಶುಭಾಶಯಗಳನ್ನು ಹೇಳುವ ಕಟೌಟ್‌ಗಳು ರಾರಾಜಿಸುತ್ತಿವೆ.

    ಹುಟ್ಟುಹಬ್ಬದ ಅಂಗವಾಗಿ ಚಲನಚಿತ್ರ ಛಾಯಾಗ್ರಾಹಕ ವೀರೇಶ್ ಸೆರೆಹಿಡಿದಿರುವ ಅಂಬರೀಷ್ ಬದುಕಿನ ಅಮೂಲ್ಯ ಕ್ಷಣಗಳನ್ನು ಪ್ರತಿಬಿಂಬಿಸುವ 600 ಫೋಟೋಗಳನ್ನು ಜೆಪಿ ನಗರ ಒಂದನೇ ಹಂತದಲ್ಲಿರುವ ದುರ್ಗಾಪರಮೇಶ್ವರಿ ಮೈದಾನದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಇದಕ್ಕೆ ಅಂಬಿ ಬಿಂಬ, ಇದು ಚಕ್ರವ್ಯೂಹ ಎಂದು ಹೆಸರನ್ನು ಆಕರ್ಷಕವಾಗಿ ಇಡಲಾಗಿದೆ. (ಒನ್‌ಇಂಡಿಯಾ ಕನ್ನಡ)

    English summary
    Kannada matinee idol Ambarish fans are eager to see him as the next chief minister of Karnataka. Thousands of fans clamored to take close glimpse of their favorite hero in his JP Nagar Residence on Monday night. Vice-president of KPCC, Rebel Star Ambarish turned 60 on 29th May 2012. On this occasion Kannada movie industry and his fan club have arranged colorful felicitation in Bangalore on 27-29. Bangalore Palace will witness two day Ambi Fun-da which will be attended by movie magnets across India and all sections of Karnataka film industry.
    Tuesday, May 29, 2012, 11:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X