twitter
    For Quick Alerts
    ALLOW NOTIFICATIONS  
    For Daily Alerts

    'AMR ರಮೇಶ್'ಗೆ ಜೀವ ಬೆದರಿಕೆ: ಶಿವಣ್ಣ ಅಭಿಮಾನಿಗಳು ಹೀಗೂ ಮಾಡ್ತಾರ?

    By Bk
    |

    ಸ್ಯಾಂಡಲ್ ವುಡ್ ನಲ್ಲಿ 'ಲೀಡರ್' ಚಿತ್ರದ ಟೈಟಲ್ ವಿವಾದ ಮತ್ತೆ ಮುಂದುವರೆದಿದ್ದು, ನಿರ್ದೇಶಕದ ಎಎಂಆರ್ ರಮೇಶ್ ಪೊಲೀಸರ ಮೊರೆ ಹೋಗಿದ್ದಾರೆ. 'ಲೀಡರ್' ಟೈಟಲ್ ವಿಚಾರಕ್ಕೆ ಸಂಬಂಧಿಸಿದಂತೆ ಎಎಂಆರ್ ರಮೇಶ್ ಗೆ ಶಿವಣ್ಣ ಅಭಿಮಾನಿಗಳ ಹೆಸರಿನಲ್ಲಿ ಬೆದರಿಕೆ ಕರೆಗಳು ಬರುತ್ತಿದ್ದು, ಈ ವಿಚಾರವಾಗಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.[ನಿಲ್ಲದ 'ಲೀಡರ್' ಟೈಟಲ್ ವಿವಾದ: ಫಿಲ್ಮ್ ಚೇಂಬರ್ ವಿರುದ್ಧ AMR ರಮೇಶ್ ಕೆಂಡಾಮಂಡಲ]

    ಶಿವರಾಜ್ ಕುಮಾರ್ ಅಭಿನಯದ 'ಲೀಡರ್' ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ಹಾಗೂ ಎಎಂಆರ್ ರಮೇಶ್ ಅವರ ಮಧ್ಯೆ ಹಲವು ದಿನಗಳಿಂದ 'ಲೀಡರ್' ಚಿತ್ರಕ್ಕೆ ಸಂಬಂಧಿದಂತೆ ಜಗಳ ನಡೆಯುತ್ತಲೇ ಇದೆ. ಈಗ ಈ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಷ್ಟಕ್ಕೂ, ನಿರ್ದೇಶಕ ಎಎಂಆರ್ ರಮೇಶ್ ಅವರು ನೀಡಿರುವ ದೂರುನಲ್ಲಿ ಏನಿದೆ? ಮುಂದೆ ಓದಿ....

    ಡಿಸೆಂಬರ್ 12 ರಿಂದ ಬೆದರಿಕೆ ಕರೆ!

    ಡಿಸೆಂಬರ್ 12 ರಿಂದ ಬೆದರಿಕೆ ಕರೆ!

    ''ಅನಾಮದೇಯ ದೂರವಾಣಿ ಮತ್ತು ವಾಟ್ಸಪ್ ಮೂಲಕ ನನಗೆ ಬೆದರಿಕೆಗಳು ಬರುತ್ತಿವೆ. ಈ ಬೆದರಿಕೆಗಳು 'ಲೀಡರ್' ಟೈಟಲ್ ವಿವಾದದ ನಂತರ ಬರುತ್ತಿವೆ. ಅಲ್ಲದೇ ವಾಟ್ಸಪ್ ಗ್ರೂಪ್ ಗೆ ನನ್ನ ನಂಬರ್ ಸೇರಿಸಿ ಅವಾಚ್ಯ ಪದಗಳಿಂದ ನಿಂದನೆ ಮಾಡಲಾಗುತ್ತಿದೆ'' -ಎಎಂಆರ್ ರಮೇಶ್, ನಿರ್ದೇಶಕ ['ಮಾಸ್ ಲೀಡರ್' ನಮ್ಮದು.! ನೀವ್ಯಾರ್ರೀ ಪರ್ಮಿಷನ್ ಕೊಡೋಕೆ.?]

    ಶಿವಣ್ಣನ ಅಭಿಮಾನಿಗಳ ಹೆಸರು ಬಳಕೆ

    ಶಿವಣ್ಣನ ಅಭಿಮಾನಿಗಳ ಹೆಸರು ಬಳಕೆ

    ''ಫೋನ್ ಮಾಡಿದವರು ನಾವು ಶಿವಣ್ಣನ ಅಭಿಮಾನಿಗಳು ಎಂದು ಹೇಳುತ್ತಾರೆ. ವಾಟ್ಸ್ ಗ್ರೂಪ್ ನಲ್ಲಿ ಸುಮಾರು 200 ಜನರು ಇದ್ದಾರೆ. ಬಹುತೇಕರು ಶಿವಣ್ಣ ಅವರ ಫೋಟೋಗಳನ್ನ ಡಿ.ಪಿ ಹಾಕಿದ್ದಾರೆ'' -ಎಎಂಆರ್ ರಮೇಶ್, ನಿರ್ದೇಶಕ [ಶಿವಣ್ಣನ 'ಲೀಡರ್' ಚಿತ್ರಕ್ಕೆ ಮಗದೊಂದು ಬಾರಿ ಶೀರ್ಷಿಕೆ ಕಂಟಕ.!]

    ವಾಣಿಜ್ಯ ಮಂಡಳಿ ಹಿಂದೇಟು ಹಾಕುತ್ತಿದೆ

    ವಾಣಿಜ್ಯ ಮಂಡಳಿ ಹಿಂದೇಟು ಹಾಕುತ್ತಿದೆ

    ''ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ಈ ಹಿಂದೆ ದೂರು ನೀಡಿದ್ದೇನೆ. ಆದ್ರೆ, ಇದುವರೆಗೂ ಯಾವುದೇ ಕ್ರಮ ತಗೊಂಡಿಲ್ಲ. ಕ್ರಮ ಕೈಗೊಳ್ಳಲು ಚಲನಚಿತ್ರ ವಾಣಿಜ್ಯ ಮಂಡಳಿ ಹಿಂದೇಟು ಹಾಕುತ್ತಿದೆ'' - ಎಎಂಆರ್ ರಮೇಶ್, ನಿರ್ದೇಶಕ

    ಶ್ರೀಕಾಂತ್ ಕ್ಷಮೆ ಕೇಳಿದ್ದರು

    ಶ್ರೀಕಾಂತ್ ಕ್ಷಮೆ ಕೇಳಿದ್ದರು

    ''ಈ ಹಿಂದೆ ಈ ವಿಷಯದ ಬಗ್ಗೆ ನಿರ್ಮಾಪಕ ಹಾಗೂ ಶಿವರಾಜ್ ಕುಮಾರ್ ಅವರ ಆಪ್ತರಾಗಿರುವ ಶ್ರೀಕಾಂತ್ ಅವರ ಬಳಿ ಹೇಳಿದ್ದೆ. ಅವರು ಫಿಲ್ಮ್ ಚೆಂಬರ್ ನಲ್ಲಿ ಸಾರಿ ಕೇಳಿದ್ದರು. ಯಾರು ಹೀಗೆ ಮಾಡ್ತಿದ್ದಾರೆ ಅಂತ ನಾವೆ ಪತ್ತೆ ಮಾಡಿ ಹೇಳ್ತಿವಿ ಎಂದಿದ್ದರು'' - ಎಎಂಆರ್ ರಮೇಶ್, ನಿರ್ದೇಶಕ

    ನನಗೆ ರಕ್ಷಣೆ ಕೊಡಿ

    ನನಗೆ ರಕ್ಷಣೆ ಕೊಡಿ

    ಇಂತಹವರ ಬಗ್ಗೆ ಕ್ರಮಕೈಗೊಂಡು ರಕ್ಷಣೆ ನೀಡುವಂತೆ ನಗರ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ನಿರ್ದೇಶಕ ಎಎಂಆರ್ ರಮೇಶ್ ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ.

    ಲೀಡರ್ ಟೈಟಲ್ ವಿವಾದವೇನು?

    ಲೀಡರ್ ಟೈಟಲ್ ವಿವಾದವೇನು?

    'ಲೀಡರ್' ಚಿತ್ರಕ್ಕೆ ಸಂಬಂಧಪಟ್ಟಂತೆ ನಿರ್ಮಾಪಕ ತರುಣ್ ಶಿವಪ್ಪ ಹಾಗೂ ನಿರ್ದೇಶಕ ಎಎಂಆರ್ ರಮೇಶ್ ಅವರ ಮಧ್ಯೆ ಹಲವು ದಿನಗಳಿಂದ ಭಿನ್ನಾಭಿಪ್ರಾಯವಿದೆ. ಸದ್ಯ, ಶಿವರಾಜ್ ಕುಮಾರ್ ಅವರ ಅಭಿನಯದಲ್ಲಿ 'ಲೀಡರ್' ಚಿತ್ರ ಸಿದ್ದವಾಗಿದ್ದು, ಬಿಡುಗಡೆಗೆ ಸಿದ್ದವಾಗಿದೆ. ಆದ್ರೆ, ಎಎಂಆರ್ ರಮೇಶ್ ಅವರು 2010 ರಲ್ಲೇ ಲೀಡರ್ ಟೈಟಲ್ ನೊಂದಣಿ ಮಾಡಿಸಿದ್ದಾರೆ. ಈಗ ಶಿವರಾಜ್ ಕುಮಾರ್ ಸಿನಿಮಾ 'ಮಾಸ್ ಲೀಡರ್' ಆಗಲು ನಿರ್ಧರಿಸಿದೆ. ಆದರೂ, ಪೋಸ್ಟರ್ ಗಳಲ್ಲಿ 'ಲೀಡರ್' ಎಂದೆ ಇದೆ.

    English summary
    AMR Ramesh has filed a complaint with the Bengaluru city commissioner after receiving death threats from anonymous callers in the Name of Shivarajkumar Fans.
    Thursday, April 20, 2017, 17:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X