twitter
    For Quick Alerts
    ALLOW NOTIFICATIONS  
    For Daily Alerts

    ಕೈಗೆಟುಕುವ ಬೆಲೆಯಲ್ಲಿ ಸಿನಿಮಾ ಅನಿಮೇಷನ್

    By Rajendra
    |
    <ul id="pagination-digg"><li class="previous"><a href="/news/vedatma-animation-studios-bangalore-cg-vfx-for-sandalwood-082272.html">« Previous</a>

    ನಮ್ಮಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಮಾಡಿಸಿದರೆ ಸ್ಪೆಷಲ್ ಎಫೆಕ್ಟ್ ಅಷ್ಟೇ ಅಲ್ಲ ಆ ನಾಯಕ ನಟನನ್ನು ಇನ್ನಷ್ಟು ಅದ್ಭುತವಾಗಿ ತೋರಿಸುವ ಚಾಕಚಕ್ಯತೆ ಇದೆ ಎನ್ನುತ್ತಾರೆ. ನಮ್ಮ ಸಂಸ್ಥೆಯಲ್ಲಿ ಟೈಟಲ್ ಕಾರ್ಡ್ ನಿಂದ ಹಿಡಿದು, ಒಂದು ಚಿತ್ರಕ್ಕೆ ಏನೆಲ್ಲಾ ಸ್ಪೆಷಲ್ ಎಫೆಕ್ಟ್ಸ್, ಗ್ರಾಫಿಕ್ಸ್, ಅನಿಮೇಷನ್ (2D, 3D) ಬೇಕಾಗುತ್ತವೋ ಅವೆಲ್ಲವನ್ನೂ ನಿಗದಿತ ಸಮಯದಲ್ಲಿ, ಕೈಗೆಟುಕುವ ಬಜೆಟ್ ನಲ್ಲಿ ಅತ್ಯುತ್ತಮವಾಗಿ ಮಾಡಿಕೊಡುತ್ತೇವೆ.

    ಚೆನ್ನೈ ಹಾಗೂ ಹೈದರಾಬಾದಿಗಿಂತಲೂ ಕಡಿಮೆ ಬಜೆಟ್ ನಲ್ಲಿ ಕಡಿಮೆ ಕಾಲಾವಧಿಯಲ್ಲಿ ಮಾಡಿಕೊಡುತ್ತೇವೆ ಎನ್ನುತ್ತಾರೆ ಶ್ರೀನಿವಾಸ್. ತಮ್ಮಲ್ಲಿ ಡಿಐ ತಂತ್ರಜ್ಞಾನ ಒಂದು ಬಿಟ್ಟರೆ ಒಂದು ಸಿನಿಮಾಗೆ ಏನು ಬೇಕೋ ಅವೆಲ್ಲವೂ ಇವೆ. ಆದರೆ ನಿರ್ಮಾಪಕರು, ನಿರ್ದೇಶಕರು ಅದ್ಯಾಕೋ ಏನೋ ಬೆಂಗಳೂರು ಎಂದರೆ ಮೂಗುಮುರಿಯುತ್ತಾರೆ ಎಂದು ಅವರು ಕೊಂಚ ಬೇಸರದಿಂದಲೇ ಹೇಳಿದರು.

    ಇಂದು ತೆಲುಗು, ತಮಿಳಿನಲ್ಲಿ ಬರುತ್ತಿರುವ ಗ್ರಾಫಿಕ್ಸ್, ಅನಿಮೇಷನ್ ಓರಿಯಂಟೆಡ್ ಸಿನಿಮಾಗಳಿಗಿಂತಲೂ ಅತ್ಯದ್ಭುತ ಗ್ರಾಫಿಕ್ಸ್ ಹಾಗೂ ಅನಿಮೇಷನ್ ನಾವು ಮಾಡಿಕೊಡುತ್ತೇವೆ. ಅದಕ್ಕೆ ತಕ್ಕಂತಹ ಎಲ್ಲಾ ಸಲಕರಣೆ, ಸಾಫ್ಟ್ ವೇರ್, ತಾಂತ್ರಿಕ ಬಳಗ ನಮ್ಮ ಸಂಸ್ಥೆಯಲ್ಲಿದೆ ಎನ್ನುತ್ತಾರೆ ಶ್ರೀನಿವಾಸ್.

    ಇತ್ತೀಚೆಗೆ ಅವರ ಸಂಸ್ಥೆಯಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಮಾಡಿಸಿದ ಲೂಸ್ ಮಾದ ಯೋಗಿ ಅಭಿನಯದ 'ಡಾರ್ಲಿಂಗ್' ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲಿನ ಕಂಪ್ಯೂಟರ್ ಗ್ರಾಫಿಕ್ಸ್ ಸಹಜ ಎಂಬಷ್ಟು ಸೊಗಸಾಗಿ ಮೂಡಿಬಂದಿರುವುದೇ ಇದಕ್ಕೆ ಕಾರಣ.

    ಒಂದು ಚಿತ್ರಕ್ಕೆ ಅತ್ಯದ್ಭುತ ಸ್ಪೆಷಲ್ ಎಫೆಕ್ಟ್ಸ್ ಬೇಕಾದರೆ ಆ ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ತಂತ್ರಜ್ಞನೂ ಇರಬೇಕಾಗುತ್ತದೆ. ಅವರ ಸೂಚನೆಯನ್ನು ನಿರ್ದೇಶಕರು ಪಾಲಿಸಿದರೆ ಪ್ರೇಕ್ಷಕರನ್ನು ರೋಮಾಂಚನಗೊಳಿಸುವ ಗ್ರಾಫಿಕ್ಸ್ ಕೊಡಬಹುದು ಎನ್ನುತ್ತಾರೆ ವೇದಾತ್ಮ ಸ್ಟುಡಿಯೋ ಹೆಡ್ ಜಗದೀಶ್ ಗೋಖಲೆ.

    ಅತ್ಯದ್ಭುತ ಅನಿಮೇಷನ್ ಹಾಗೂ ಸ್ಪೆಷಲ್ ಎಫೆಕ್ಟ್ಸ್ ವುಳ್ಳ ಚಿತ್ರಗಳನ್ನು ಆಯ್ಕೆ ಮಾಡಿ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸವನ್ನು ಅನಿಮೇಷನ್ ಬಾಸ್ ಡಾಟ್ ಕಾಮ್ ಎಂಬ ವೆಬ್ ಸೈಟ್ ಮಾಡುತ್ತದೆ. ಸಾಮಾನ್ಯವಾಗಿ ಈ ಸಂಸ್ಥೆ ಹಾಲಿವುಡ್ ಚಿತ್ರಗಳನ್ನೇ ಆಯ್ಕೆ ಮಾಡುತ್ತದೆ. ಆದರೆ ಇದೇ ಮೊದಲ ಬಾರಿಗೆ ವೇದಾತ್ಮ ಅನಿಮೇಷನ್ ಸ್ಟುಡಿಯೋ ಗ್ರಾಫಿಕ್ಸ್ ಮಾಡಿರುವ ಯೋಗಿ ಅವರ 'ಡಾರ್ಲಿಂಗ್' ಚಿತ್ರವನ್ನು ಆಯ್ಕೆ ಮಾಡಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೆಮ್ಮೆಯ ಸಂಗತಿ.

    ನಮ್ಮ ಕನ್ನಡ ಚಿತ್ರೋದ್ಯಮದ ನಿರ್ಮಾಪಕರು, ನಿರ್ದೇಶಕರು ಮಧ್ಯವರ್ತಿಗಳ ಮಾತಿಗೆ ಬೆರಗಾಗಿ ದೂರದ ಚೆನ್ನೈ, ಹೈದರಾಬಾದಿಗೆ ಹೋಗುತ್ತಿದ್ದಾರೆ. ಇಲ್ಲೇ ಇರುವ ವೇದಾತ್ಮ ಅನಿಮೇಷನ್ ಸ್ಟುಡಿಯೋಗಳಿಗೆ ದಾರಿ ಕಾಣದಂತಾಗಿರುವುದು ವಿಪರ್ಯಾಸದ ಸಂಗತಿ. ವೇದಾತ್ಮ ಅನಿಮೇಷನ್ ಸ್ಟುಡಿಯೋ ವಿಳಾಸ: #60, 4th Main, B/w 7th & 8th Cross, Malleswaram, Bangalore 560003, Karnataka, E-mail - [email protected]

    <ul id="pagination-digg"><li class="previous"><a href="/news/vedatma-animation-studios-bangalore-cg-vfx-for-sandalwood-082272.html">« Previous</a>

    English summary
    VEDATMA ANIMATION STUDIOS, Bangalore focusing on creating a new path in the realms of animation film making. It delivers CG and VFX in affordable price to cmpard to Chenni and Hyderabad based studios.
    Friday, March 7, 2014, 16:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X