»   » ಯಶ್-ರಾಧಿಕಾ 'ಲಗ್ನ ಪತ್ರಿಕೆ'ಗೆ ಕವನ ಬರೆದ್ದಿದ್ದು ಇವರೇ!

ಯಶ್-ರಾಧಿಕಾ 'ಲಗ್ನ ಪತ್ರಿಕೆ'ಗೆ ಕವನ ಬರೆದ್ದಿದ್ದು ಇವರೇ!

Posted by:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆಗೆ ನಟ ಯಶ್, 'ಲಗ್ನಪತ್ರಿಕೆ' ಹಂಚುತ್ತಿದ್ದಾರೆ. ಈ 'ಲಗ್ನಪತ್ರಿಕೆ' ತುಂಬಾ ಸರಳವಾಗಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ. ಯಾವುದೇ ಆಡಂಬರ, ವೈಭವ, ಅದ್ದೂರಿತನವಿಲ್ಲದ 'ಆಮಂತ್ರಣ ಪತ್ರಿಕೆ'ಯಿಂದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಗಮನ ಸೆಳೆಯುತ್ತಿದ್ದಾರೆ.

ಈ 'ಲಗ್ನಪತ್ರಿಕೆ'ಯ ಮತ್ತೊಂದು ವಿಶೇಷ ಅಂದ್ರೆ ಅದರಲ್ಲಿರುವ 'ನುಡಿಮುತ್ತು'ಗಳು. ಈ ಕವನ ಭಾವನಾತ್ಮಕವಾಗಿದ್ದು, ಬಹುಶಃ ಯಶ್ ಹಾಗೂ ರಾಧಿಕಾ ಪಂಡಿತ್ ಅವರೇ ಬರೆದಿರಬಹುದು ಎಂಬ ಅನುಮಾನ ಅನೇಕರಿಗೆ ಕಾಡಿತ್ತು. ಆದ್ರೆ, ಅದನ್ನ ಬರೆದವರೇ ಬೇರೆ.[ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು ? ]

ಎಪಿ ಅರ್ಜುನ್ ಬರೆದ ಪ್ರೀತಿಯ ಕವನ

ಎಪಿ ಅರ್ಜುನ್ ಬರೆದ ಪ್ರೀತಿಯ ಕವನ

ಗಣ್ಯರಿಗೆ ನೀಡಲಾಗುತ್ತಿರುವ ಇನ್ವಿಟೇಷನ್ ನಲ್ಲಿರುವ ಸೊಗಸಾದ ಕವನ ಎಲ್ಲರ ಕೇಂದ್ರಬಿಂದುವಾಗಿದೆ. ಈ ಕವನವನ್ನ ರಚಿಸಿದ್ದು ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್ ಎಪಿ ಅರ್ಜುನ್ ಎನ್ನುವುದು ವಿಶೇಷ.['ಪರಿಸರ ಪ್ರೀತಿ' ಜೊತೆಗೆ 'ಪುಸ್ತಕ ಪ್ರೀತಿ' ಮೆರೆದ ಮದುಮಗ ಯಶ್]

ಆಸೆಯಿಂದ ಬರೆಸಿದರು

ಆಸೆಯಿಂದ ಬರೆಸಿದರು

ಯಶ್-ರಾಧಿಕಾ ಮದುವೆಯ ಆಮಂತ್ರಣ ಪತ್ರಿಕೆಯನ್ನ ಮಾಡಿಸಿದ್ದು, ಕುಟುಂಬಸ್ಥರೇ. ಆದರೆ, ಅದರಲ್ಲಿರುವ ಕವನವನ್ನ ಬರೆಸಿದ್ದು, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'. ಎಪಿ ಅರ್ಜುನ್ ಕೈಬರಹದಲ್ಲಿ ಮೂಡಿರುವ ಈ ಸಾಲುಗಳು ಇಬ್ಬರಿಗೂ ತುಂಬಾ ಮೆಚ್ಚುಗೆಯಾಗಿದೆ.[ಆಡಂಬರ, ವೈಭವ ಇಲ್ಲದೇ ಸಂಪಿಗೆ ಸಸಿ ಕೊಟ್ಟು 'ಮದುವೆಗೆ ಬನ್ನಿ' ಎಂದ ಯಶ್]

ಯಶ್-ರಾಧಿಕಾ ಮದುವೆಗಾಗಿ ಬರೆದ ಸಾಲು

ಯಶ್-ರಾಧಿಕಾ ಮದುವೆಗಾಗಿ ಬರೆದ ಸಾಲು

ನಮಸ್ತೆ, ''ಇಲ್ಲಿ ಎಲ್ಲರೂ ಸಂಬಂಧಿಕರೇ...ಇಲ್ಲಿ ಎಲ್ಲವೂ ಅನುಬಂಧವೇ....ಸಹನೆ ಮರವನು ತಬ್ಬಿದ ಜೀವಲತೆಯಲಿ. ನಲುಮೆ ಹೂ ಅರಳಿದೆ....! ಹಸನ ಬಾಳ ನಂದನವನಕಿಂದು ನಿತ್ಯನೂತನ ಚಿರವಸಂತ ಬಂದಿದೆ...! ನಮ್ಮ ಈ ಸಂತಸವೆಲ್ಲ ಯಾವತ್ತಿಗೂ ಖಂಡಿತಾ ನಿಮ್ಮದೇ....ತಾಳಿ ಬಿಗಿಯುವುದಾದರೂ ಹೇಗೆ ಹೇಳಿ ನೀವೆಲ್ಲ ಬಾರದೇ?!!.[ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ' ]

ಸರ್ವರಿಗೂ ಪ್ರೀತಿಯ ಸ್ವಾಗತ

ಸರ್ವರಿಗೂ ಪ್ರೀತಿಯ ಸ್ವಾಗತ

''ಸಂಬಂಧಕ್ಕಿಂತ ಕುಟುಂಬಕ್ಕಿಂತ ದೊಡ್ಡದು ಯಾವುದೂ ಇಲ್ಲ. ನೀವೆಲ್ಲ ನಮ್ಮ ಕುಟುಂಬದವರೆಂಬ ಹೆಮ್ಮೆಗಿಂತ ಬೇರಾವ ಹೆಮ್ಮೆ ಬೇಕಿಲ್ಲ. ನಿಮ್ಮ ಪ್ರೀತ್ಯಾದರಗಳಿಗಿಂತ ಮಿಗಿಲಾದದ್ದು ಬೇರಾವುದು ಇಲ್ಲ. ಇಲ್ಲಿ ಬರೆದುದಕ್ಕಿಂತ ಬರೆಯದ ಪದಗಳೇ ಜಾಸ್ತಿ..! ನಿಮ್ಮ ಆಗಮನವೇ ನಮ್ಮಿಬ್ಬರ ಜೋಡಿ ಜೀವಗಳಿಗೆ ಸ್ಪೂರ್ತಿ....! ದಯಮಾಡಿ ಸಕಲರೂ ನಮ್ಮ ಮದುವೆಗೆ ತಪ್ಪದೇ ಬನ್ನಿ ನಮ್ಮನ್ನ ಹರಿಸಿ ಅಷ್ಟೇ'' -ಯಶ್, ರಾಧಿಕಾ ಪಂಡಿತ್

ಹೃದಯಾಕಾರದ ಬೆರೆಳಚ್ಚು

ಹೃದಯಾಕಾರದ ಬೆರೆಳಚ್ಚು

'ಆಹ್ವಾನ ಪತ್ರಿಕೆ' ಕೊನೆಯಲ್ಲಿ, ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರು, ತಮ್ಮ ಹೆಬ್ಬೆಟ್ಟಿನ ಬೆರಳಚ್ಚನ್ನ ಹೃದಯಾಕಾರವಾಗಿ ಮುದ್ರಿಸಿದ್ದಾರೆ. ಇದು ಲಗ್ನಪತ್ರಿಕೆಗೆ ಹೊಸ ಮೆರುಗು ನೀಡಿದೆ.

English summary
Kannada Director AP Arjun has written special quotes in Kannada Actor Yash-Radhika Pandit Wedding Invitation Card
Please Wait while comments are loading...

Kannada Photos

Go to : More Photos