»   » 'ಅಪ್ಪು ಡ್ಯಾನ್ಸ್'ಗೆ ಸ್ಯಾಂಡಲ್ ವುಡ್ ದಾಖಲೆಗಳೆಲ್ಲ ಧೂಳಿಪಟ!

'ಅಪ್ಪು ಡ್ಯಾನ್ಸ್'ಗೆ ಸ್ಯಾಂಡಲ್ ವುಡ್ ದಾಖಲೆಗಳೆಲ್ಲ ಧೂಳಿಪಟ!

Posted by:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಸಿನಿ ದುನಿಯಾದಲ್ಲಿ ಕ್ರೇಜ್ ಹೆಚ್ಚಿಸಿದೆ. ಈ ಮಧ್ಯೆ ಪುನೀತ್ ಅವರ 'ಅಪ್ಪು ಡ್ಯಾನ್ಸ್' ಸಖತ್ ವೈರಲ್ ಆಗಿದ್ದು, ಸ್ಯಾಂಡಲ್ ವುಡ್ ನ ಎಲ್ಲ ಹಳೆ ದಾಖಲೆಗಳನ್ನ ಬ್ರೇಕ್ ಮಾಡಿದೆ.[ಪುನೀತ್ 'ರಾಜಕುಮಾರ' ಹುಟ್ಟುಹಬ್ಬಕ್ಕೆ ಟಪ್ಪಾಂಗುಚ್ಚಿ ಗಿಫ್ಟ್: ಕುಣಿದು ಕುಪ್ಪಳಿಸಿ..]

ಅಷ್ಟೇ ಅಲ್ಲ, ಯ್ಯೂಟ್ಯೂಬ್ ನಲ್ಲಿ 'ಬಾಹುಬಲಿ' ಚಿತ್ರವನ್ನ ಬಿಟ್ಟರೇ, ಪುನೀತ್ ಅಭಿನಯದ 'ರಾಜಕುಮಾರ' ಚಿತ್ರವೇ ಅತಿ ಹೆಚ್ಚು ಸೌಂಡ್ ಮಾಡ್ತಿದೆ. ಅಷ್ಟಕ್ಕೂ 'ರಾಜಕುಮಾರ' ಬ್ರೇಕ್ ಮಾಡಿದ ದಾಖಲೆಗಳೇನು ಎಂಬುದನ್ನ ಮುಂದೆ ಓದಿ.....

ಅಪ್ಪು 'ಬರ್ತ್ ಡೇ'ಗೆ 'ಅಪ್ಪು ಡ್ಯಾನ್ಸ್'!

ಅಪ್ಪು 'ಬರ್ತ್ ಡೇ'ಗೆ 'ಅಪ್ಪು ಡ್ಯಾನ್ಸ್'!

ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 16 ರಂದು ರಾತ್ರಿ 9 ಗಂಟೆಗೆ, ಯ್ಯೂಟ್ಯೂಬ್ ನಲ್ಲಿ 'ರಾಜಕುಮಾರ' ಚಿತ್ರದ 'ಅಪ್ಪು ಡ್ಯಾನ್ಸ್' ವಿಡಿಯೋ ಬಿಡುಗಡೆಯಾಗಿತ್ತು.

6 ಗಂಟೆಯಲ್ಲಿ 1 ಲಕ್ಷ ಜನ ವೀಕ್ಷಣೆ

6 ಗಂಟೆಯಲ್ಲಿ 1 ಲಕ್ಷ ಜನ ವೀಕ್ಷಣೆ

'ಅಪ್ಪು ಡ್ಯಾನ್ಸ್' ವಿಡಿಯೋವನ್ನ ಬಿಡುಗಡೆಯಾದ 6 ಗಂಟೆಗಳಲ್ಲಿ ಸುಮಾರು 1 ಲಕ್ಷ ಜನ ನೋಡಿದ್ದಾರೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆ.

1 ದಿನದಲ್ಲಿ 7 ಲಕ್ಷ ಜನ ವೀಕ್ಷಣೆ

1 ದಿನದಲ್ಲಿ 7 ಲಕ್ಷ ಜನ ವೀಕ್ಷಣೆ

ಒಂದೇ ದಿನದಲ್ಲಿ ಅತಿ ಹೆಚ್ಚು ವೀಕ್ಷಕರು ನೋಡಿದ ಕನ್ನಡದ ಮೊದಲು ಹಾಡು ಎಂಬ ದಾಖಲೆ ಕೂಡ 'ಅಪ್ಪು ಡ್ಯಾನ್ಸ್' ಪಾಲಾಗಿದೆ. ಅಂದ್ರೆ, 1 ದಿನದಲ್ಲಿ 7 ಲಕ್ಷ ಜನ 'ಅಪ್ಪು ಡ್ಯಾನ್ಸ್' ನೋಡಿದ್ದಾರೆ. ಇಲ್ಲಿಯವರೆಗೂ, ಕನ್ನಡದ ಬೇರೆ ಯಾವ ವಿಡಿಯೋವನ್ನ ಕೂಡ ಒಂದು ದಿನದಲ್ಲಿ 7 ಲಕ್ಷ ಜನರು ನೋಡಿಲ್ಲ.

'ಅಲ್ಲಾಡ್ಸು ಅಲ್ಲಾಡ್ಸು' ದಾಖಲೆಯಾಗಿತ್ತು

'ಅಲ್ಲಾಡ್ಸು ಅಲ್ಲಾಡ್ಸು' ದಾಖಲೆಯಾಗಿತ್ತು

ಇದುವರೆಗೂ ಕನ್ನಡದಲ್ಲಿ ಒಂದೇ ದಿನ ಅತಿ ಹೆಚ್ಚು ಜನರು ನೋಡಿದ ವಿಡಿಯೋ 'ಚೌಕ' ಚಿತ್ರದ 'ಅಲ್ಲಾಡ್ಸು ಅಲ್ಲಾಡ್ಸು' ಹಾಡಾಗಿತ್ತು. ಒಂದು ದಿನದಲ್ಲಿ 4 ಲಕ್ಷ ವ್ಯೂವರ್ಸ್ ಈ ಹಾಡನ್ನ ಮೊದಲ ದಿನವೇ ನೋಡಿದ್ದರು.

'ಬಾಹುಬಲಿ' ಫಸ್ಟ್ 'ರಾಜಕುಮಾರ' ನೆಕ್ಸ್ಟ್!

'ಬಾಹುಬಲಿ' ಫಸ್ಟ್ 'ರಾಜಕುಮಾರ' ನೆಕ್ಸ್ಟ್!

ವಿಶೇಷ ಅಂದ್ರೆ ಯ್ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಮೊದಲ ಸ್ಥಾನದಲ್ಲಿದೆ. 'ಬಾಹುಬಲಿ' ಬಿಟ್ಟರೇ, ರಾಜಕುಮಾರನೇ ಟಾಪ್ ಟ್ರೆಂಡಿಂಗ್ ನಲ್ಲಿದೆ.

24ಕ್ಕೆ 'ರಾಜಕುಮಾರ' ಬಿಡುಗಡೆ

24ಕ್ಕೆ 'ರಾಜಕುಮಾರ' ಬಿಡುಗಡೆ

ಅಂದ್ಹಾಗೆ, ಪುನೀತ್ ಅಭಿನಯದ 'ರಾಜಕುಮಾರ' ಇದೇ ತಿಂಗಳು 24 ರಂದು ರಾಜ್ಯಾದ್ಯಂತ ಸುಮಾರು 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಸಂತೋಷ್ ಆನಂದ್ ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ. ಪ್ರಕಾಶ್ ರೈ, ಶರತ್ ಕುಮಾರ್, ಚಿಕ್ಕಣ್ಣ, ಸಾಧುಕೋಕಿಲಾ, ರಂಗಾಯಣ ರಘು ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

English summary
The 'Appu Dance' video from the film Raajkumara that was released for Puneeth Rajkumar's birthday has become a viral hit. In just one day the song has been watched more than six Lakhs times online.
Please Wait while comments are loading...

Kannada Photos

Go to : More Photos