»   » ಅಪ್ಪನ ಲವ್ ಸ್ಟೋರಿಗೆ, ಮಗಳು ನಾಯಕಿ..!

ಅಪ್ಪನ ಲವ್ ಸ್ಟೋರಿಗೆ, ಮಗಳು ನಾಯಕಿ..!

Posted by:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ನಟ ಕಮ್ ನಿರ್ದೇಶಕ ಅರ್ಜುನ್ ಸರ್ಜಾ ಅವರು ಇದೀಗ ಒಬ್ಬ ಸ್ಪೆಷಲ್ ಪರ್ಸನ್ ಗೆ ಹೊಸ ಸಿನಿಮಾ ನಿರ್ದೇಶನ ಮಾಡಲು ಹೊರಟಿದ್ದಾರೆ.

ಅದು ಬೇರಾರು ಅಲ್ಲ ತಮ್ಮ ಸ್ವಂತ ಮಗಳು ನಟಿ ಐಶ್ವರ್ಯ ಅರ್ಜುನ್ ಅವರಿಗೆ ಈ ಬಾರಿ ಕನ್ನಡ ಚಿತ್ರವೊಂದಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಮಗಳಿಗೆ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದ ಸರ್ಜಾ ಅವರು ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ಮಗಳ ಸಿನಿಮಾ ಅಲ್ಲಿಗೆ ನಿಂತುಹೋಗಿತ್ತು.

ಇದೀಗ ಮತ್ತೆ ಮಗಳ ಸಕ್ಸಸ್ ಕಡೆ ಗಮನ ಹರಿಸಿರುವ ಅರ್ಜುನ್ ಸರ್ಜಾ ಅವರು ಮಗಳಿಗಾಗಿ ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಈ ಸುದ್ದಿ ಪಕ್ಕಾ ಆಗಿದ್ದು, ಇನ್ನೇನು ಸದ್ಯದಲ್ಲೇ ಹೊಸ ಪ್ರಾಜೆಕ್ಟ್ ಸೆಟ್ಟೇರಲಿದೆ.

ಫೈಟ್, ಸಸ್ಪೆನ್ಸ್, ಆಕ್ಷನ್ ಬಿಟ್ಟು ಈ ಬಾರಿ ಸರ್ಜಾ ಅವರು ವಿಶೇಷವಾಗಿ ತಮ್ಮ ಮಗಳಿಗಾಗಿ ಒಂದು ರೊಮ್ಯಾಂಟಿಕ್ ಸ್ಕ್ರಿಪ್ಟ್ ಬರೆದಿದ್ದಾರಂತೆ. ಜೊತೆಗೆ ಈ ಹೊಸ ಸಿನಿಮಾಗೆ ತಾವೇ ನಿರ್ದೇಶನ ಮಾಡುವ ಜೊತೆಗೆ ತಾವೇ ಬಂಡವಾಳ ಕೂಡ ಹೂಡುತ್ತಿರುವುದು ವಿಶೇಷ.

ಅಂದಹಾಗೆ ಸರ್ಜಾ ಕುಟುಂಬದ ಮಗಳು ನಟಿ ಐಶ್ವರ್ಯ ಅರ್ಜುನ್ ಅವರು ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ಎಲ್ಲರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ಇವರಿಗೆ ನಾಯಕನಾಗಿ 'ಆ ದಿನಗಳು' ಖ್ಯಾತಿಯ ನಟ ಚೇತನ್ ಅವರು ಕಾಣಿಸಿಕೊಳ್ಳಲಿದ್ದಾರೆ.

ನಟಿ ಐಶ್ವರ್ಯ ಅರ್ಜುನ್ ಅವರು ಈ ಮೊದಲು ತಮಿಳು ಸಿನಿಮಾ 'ಪಟ್ಟತ್ತಿ ಯಾನೈ' ಯಲ್ಲಿ ನಟ ವಿಶಾಲ್ ಅವರ ಜೊತೆ ಕಾಣಿಸಿಕೊಂಡಿದ್ದರು.

English summary
Actor-director Arjun Sarja might direct his daughter Aishwarya in Kannada film. Now the news is all set to come to a reality with the film being launched soon.
Please Wait while comments are loading...

Kannada Photos

Go to : More Photos