»   » ಶೆಟ್ರ 'ರಿಕ್ಕಿ'ಯಲ್ಲಿ ಕಿಚ್ಚ ಸುದೀಪ್ ಅವರ ಮಸ್ತ್ ಮ್ಯಾಜಿಕ್

ಶೆಟ್ರ 'ರಿಕ್ಕಿ'ಯಲ್ಲಿ ಕಿಚ್ಚ ಸುದೀಪ್ ಅವರ ಮಸ್ತ್ ಮ್ಯಾಜಿಕ್

Posted by:
Subscribe to Filmibeat Kannada

ನಟನಾಗಿದ್ದ ರಿಶಬ್ ಶೆಟ್ಟಿ ಅವರು ಮೊಟ್ಟ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳಿರುವ 'ರಿಕ್ಕಿ' ಸಿನಿಮಾ ಇಡೀ ಕರ್ನಾಟಕದಾದ್ಯಂತ ಇಂದು (ಜನವರಿ 22) ಭರ್ಜರಿಯಾಗಿ ತೆರೆ ಕಂಡಿದ್ದು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.

ಇನ್ನು ಈ ಚಿತ್ರ ಆರಂಭವಾಗುವುದೇ ಕಿಚ್ಚ ಸುದೀಪ್ ಅವರ ಖಡಕ್ ಧ್ವನಿಯಿಂದ. ಸಿನಿಮಾ ನೋಡಲು ನೀವು ಥಿಯೇಟರ್ ಗೆ ಕಾಲಿಟ್ಟ ತಕ್ಷಣ ಸುದೀಪ್ ಅವರ ಧ್ವನಿ ನಿಮ್ಮನ್ನು ಸ್ವಾಗತಿಸುತ್ತದೆ.[ಪ್ರೀತಿ ಸಂಘರ್ಷಗಳ ನಡುವೆ ಸಿಕ್ಕಿಕೊಂಡ 'ರಿಕ್ಕಿ'ಗೆ ಲಾಲ್ ಸಲಾಂ]"ನೆತ್ತರ ಹನಿ ಮಣ್ಣಿಗೆ ಬಿದ್ದು ಆಕಾಶ ಕೆಂಪಾಗಿ ನೋವಿಗೆ ಹೊಸ ಅರ್ಥ ಬಂದು ಮನದಲ್ಲಿ ಈಗ ಕ್ರಾಂತಿಯ ಬೆಂಕಿ, ಸೂರಿನ ಸುಖವಿಲ್ಲ, ನಿದ್ದೆಯ ಕನಸಿಲ್ಲ, ಭಾಷಾತೀ ಈಗ ಗುರಿಯೊಂದೇ, ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ". ಅನ್ನೋ ಡೈಲಾಗ್ ಕಿಚ್ಚ ಸುದೀಪ್ ಅವರ ಖಡಕ್ ಧ್ವನಿಯಲ್ಲಿ ಸಖತ್ ಆಗಿ ಡೈಲಾಗ್ ಗಳು ಟ್ರೈಲರ್ ನಲ್ಲೂ ಮೂಡಿಬಂದಿದ್ದು, ಮಾತ್ರವಲ್ಲದೇ ಅದು ಸಿನಿಮಾ ಆರಂಭ ಆಗುವಾಗ 'ನಕ್ಸಲಿಸಂ' ಎಂಬ ಕಮ್ಯುನಿಸಂನ ಪರಿಚಯವನ್ನು ಕೂಡ ಸುದೀಪ್ ಅವರು ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ.


ಇನ್ನು ಸುದೀಪ್ ಅವರ ಧ್ವನಿ ಹಿನ್ನಲೆಯಲ್ಲಿ ಕೇಳಿಬರುತ್ತಿದ್ದರೆ, ಚಿತ್ರಮಂದಿರದಲ್ಲಿದ್ದ ಅಭಿಮಾನಿಗಳು ಶಿಳ್ಳೆ ಹೊಡೆದಿದ್ದಾರೆ. ಇದನ್ನು ಕಂಡರೆ ತಿಳಿಯುತ್ತದೆ, ಸುದೀಪ್ ಅವರ ನಟನೆ ಮತ್ತು ಸ್ಟೈಲ್ ಗೆ ಮಾತ್ರವಲ್ಲದೇ ಅವರ ದ್ವನಿಗೆ ಕೂಡ ಅಭಿಮಾನಿಗಳಿದ್ದಾರೆ ಎಂಬುದು.[ರಿಕ್ಕಿ ಮೇನಿಯಾ ಶುರು, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಗುರೂ]ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತು 'ಉಗ್ರಂ' ಬೆಡಗಿ ಹರಿಪ್ರಿಯಾ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ರಿಕ್ಕಿ' ಸಿನಿಮಾ ನಿಜಾಯಿತಿಗೆ ಕೊಂಚ ಹತ್ತಿರವಿದ್ದು, ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ 'ನಕ್ಸಲರ' ಹೋರಾಟದ ಕಥೆಯನ್ನು ಆಧರಿಸಿದೆ.


ಚಿತ್ರದಲ್ಲಿ ನಟಿ ಹರಿಪ್ರಿಯಾ ಅವರು ಎರಡು ಶೇಡ್ ನಲ್ಲಿ ಮಿಂಚಿದ್ದು ಫಸ್ಟ್ ಶೇಡ್ ನಲ್ಲಿ ರಾಧೆಯಾಗಿ ಮುಗ್ದ ಪ್ರಿಯತಮೆಯಾದರೆ, ಸೆಕೆಂಡ್ ಶೇಡ್ ನಲ್ಲಿ 'ಕಾಮ್ರೆಡ್' ಸೀತಾ ಆಗಿ ಖಡಕ್ ಆಗಿ ಮಿಂಚಿದ್ದಾರೆ.ಮೊಟ್ಟ ಮೊದಲ ಬಾರಿಗೆ ನೈಜತೆಗೆ ಹತ್ತಿರವಿರುವ ಸಿನಿಮಾ ಮಾಡಿರುವ ನಿರ್ದೇಶಕ ರಿಶಬ್ ಶೆಟ್ಟಿ ಅವರು ಗೆಲ್ಲುವ ಎಲ್ಲಾ ಲಕ್ಷಣಗಳು ಈಗಲೇ ಕಂಡುಬರುತ್ತಿದ್ದು, 'ರಂಗಿತರಂಗ' ಖ್ಯಾತಿಯ ನಿರ್ದೇಶಕ ಅನುಪ್ ಭಂಡಾರಿ ಅವರ ಸಾಲಿಗೆ ಸೇರುವ ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

English summary
Rakshit Shetty's Ricky is making rounds in Gandhinagara. According to the early FDFS (first day first show) reports of the movie, the audiences have gone crazy over Sudeep's magical voice over in the movie.
Please Wait while comments are loading...

Kannada Photos

Go to : More Photos