»   » ಕನ್ನಡಿಗರನ್ನ ಹೀಯಾಳಿಸುತ್ತಿರುವ ತಮಿಳರು: ಟ್ವಿಟ್ಟರ್ ನಲ್ಲಿ ಘೋರ ಯುದ್ಧ.!

ಕನ್ನಡಿಗರನ್ನ ಹೀಯಾಳಿಸುತ್ತಿರುವ ತಮಿಳರು: ಟ್ವಿಟ್ಟರ್ ನಲ್ಲಿ ಘೋರ ಯುದ್ಧ.!

Written by: ಒನ್ಇಂಡಿಯಾ ಕನ್ನಡ ವಾರ್ತೆ
Subscribe to Filmibeat Kannada

'ಬಾಹುಬಲಿ-2' ಬಿಡುಗಡೆ ದಿನಾಂಕ ಸಮೀಪಿಸುತ್ತಿರುವಾಗಲೇ, ಕರ್ನಾಟಕದಲ್ಲಿ 'ಬಾಹುಬಲಿ-2' ರಿಲೀಸ್ ವಿರೋಧಿಸಿ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ. ಇದು ಒಂದುಕಡೆಯಾದರೆ, ಮತ್ತೊಂದು ಕಡೆ ಕನ್ನಡಿಗರ ನಡೆಯನ್ನ ಸಾಮಾಜಿಕ ಜಾಲತಾಣಗಳಲ್ಲಿ ತಮಿಳರು ಖಂಡಿಸುತ್ತಿದ್ದಾರೆ... ಹೀಯಾಳಿಸುತ್ತಿದ್ದಾರೆ.

''ಒಂಬತ್ತು ವರ್ಷಗಳ ಹಿಂದೆ ಸತ್ಯರಾಜ್ ಆಡಿರುವ ಮಾತುಗಳಿಗೆ ಈಗ ಪ್ರತಿಭಟನೆಯ ಅವಶ್ಯಕತೆ ಏನಿದೆ.? 'ಬಾಹುಬಲಿ' ನಿರ್ಮಾಪಕರಿಂದ ದುಡ್ಡು ಪೀಕಲು ಕನ್ನಡಿಗರು ಹೀಗೆ ವಿನಾಕಾರಣ ವಿವಾದ ಸೃಷ್ಟಿಸುತ್ತಿದ್ದಾರೆ'' ಅಂತ ತಮಿಳರು ಟ್ವಿಟ್ಟರ್ ನಲ್ಲಿ ಕನ್ನಡಿಗರನ್ನ ಕೇವಲವಾಗಿ ಅಳೆಯುತ್ತಿದ್ದಾರೆ.['ಕನ್ನಡಿಗರು ಮುಚ್ಕೊಂಡ್ ಕೂತ್ಕೊಳ್ಳಿ': ಫೇಸ್ ಬುಕ್ನಲ್ಲಿ ತೆಲುಗು ಸಿನಿ'ಭಕ್ತ'ರ ಗೇಲಿ.!]

ಸತ್ಯರಾಜ್ ಪರ ಬ್ಯಾಟಿಂಗ್ ಶುರು ಮಾಡಿರುವ ತಮಿಳಗರು ಕನ್ನಡಿಗರ ಹೃದಯ ಸಮುದ್ರವನ್ನ ಕುಲುಕುತ್ತಿರುವುದು ಇಂತಹ ಟ್ವೀಟ್ ಗಳಿಂದ....

ಈ ಧಿಮಾಕಿಗೆ ಏನನ್ನಬೇಕು.?

ಈ ಧಿಮಾಕಿಗೆ ಏನನ್ನಬೇಕು.?

''ಬಾಹುಬಲಿ-2' ಚಿತ್ರ ನೋಡುವ ಯೋಗ್ಯತೆ ಕನ್ನಡಿಗರಿಗೆ ಇಲ್ಲ. ಅವರ ನಟರ ಚಿತ್ರಗಳನ್ನೇ ನೋಡಿಕೊಂಡು ಒದ್ದಾಡಿ ಸಾಯಲಿ'' ಎನ್ನುತ್ತಿರುವ ತಮಿಳರಿಗೆ ಏನನ್ನಬೇಕು.? [ಸುದೀಪ್ ಚಿತ್ರಗಳನ್ನ ಬ್ಯಾನ್ ಮಾಡಿ: ಕನ್ನಡಿಗರಿಗೆ 'ಟ್ರೋಲ್ ಟಾಲಿವುಡ್' ಲೇವಡಿ.!]

ಸತ್ಯರಾಜ್ ರಜನಿಕಾಂತ್ ತರಹ ಅಲ್ಲ.!

ಸತ್ಯರಾಜ್ ರಜನಿಕಾಂತ್ ತರಹ ಅಲ್ಲ.!

''ಸತ್ಯರಾಜ್ ಕ್ಷಮಾಪಣೆ ಕೇಳಲು ರಜನಿಕಾಂತ್ ತರಹ ಕನ್ನಡಿಗ ಅಲ್ಲ. ಅವರು ತಮಿಳಿಗ'' ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.['ಟಾಲಿವುಡ್ ಟ್ರೋಲ್'ಗಳ ವಿರುದ್ಧ ತೊಡೆ ತಟ್ಟಿ ನಿಂತ ಫಿಲ್ಮಿಬೀಟ್ ಕನ್ನಡ ಓದುಗರು]

ದುಡ್ಡಿಗಾಗಿ ಇದೆಲ್ಲ...

ದುಡ್ಡಿಗಾಗಿ ಇದೆಲ್ಲ...

''ಸತ್ಯರಾಜ್ ಬಗ್ಗೆ ನಿಜವಾಗಲೂ ಕೋಪ ಇದಿದ್ರೆ, 'ಬಾಹುಬಲಿ' ಮೊದಲ ಭಾಗ ಬಿಡುಗಡೆ ಆದಾಗಲೂ ಸಮಸ್ಯೆ ಆಗಬೇಕಿತ್ತು. ಪ್ರತಿಭಟನಾಕಾರರಿಗೆ ದುಡ್ಡು ಬೇಕು. ಅದು ಸಿಗುವವರೆಗೂ ಹಿಂದಕ್ಕೆ ಸರಿಯಲ್ಲ'' ಅಂತ ಕನ್ನಡಿಗರ ಬಗ್ಗೆ ತಮಿಳರು ಕೇವಲವಾಗಿ ಟ್ವೀಟ್ ಮಾಡುತ್ತಿದ್ದಾರೆ.[ಕನ್ನಡಿಗರೇ... ತೆಲುಗಿನವರ 'ವಿಶಾಲ ಹೃದಯ'ಕ್ಕೆ ನಿಮ್ಮ ಪ್ರತಿಕ್ರಿಯೆ ಏನು.?]

ಇಷ್ಟು ದಿನ ಕೋಮಾದಲ್ಲಿ ಇದ್ರಾ.?

ಇಷ್ಟು ದಿನ ಕೋಮಾದಲ್ಲಿ ಇದ್ರಾ.?

''ಎಂಟು ವರ್ಷಗಳ ಬಳಿಕ ನಿಮಗೆ ಕ್ಷಮಾಪಣೆ ಬೇಕಾ.? ಇಷ್ಟು ದಿನ ನೀವೆಲ್ಲಾ ಕೋಮಾದಲ್ಲಿ ಇದ್ರಾ.? ಕನ್ನಡಿಗರು ಪ್ರಬುದ್ಧರಾಗಬೇಕು'' ಎಂದು ತಮಿಳರು ಲೇವಡಿ ಮಾಡುತ್ತಿದ್ದಾರೆ.

ತುರ್ತು ಪರಿಸ್ಥಿತಿ ನಿರ್ಮಾಣ

ತುರ್ತು ಪರಿಸ್ಥಿತಿ ನಿರ್ಮಾಣ

''ಸತ್ಯರಾಜ್ ಗೆ ನ್ಯಾಯ ಸಿಗಬೇಕು. ಇದು ತುರ್ತು ಪರಿಸ್ಥಿತಿ ಆಗಿರುವುದರಿಂದ ನಿರ್ಮಾಪಕರ ಹಿತದೃಷ್ಟಿಯಿಂದ ಸತ್ಯರಾಜ್ ಕ್ಷಮೆ ಕೇಳುತ್ತಾರೆ'' ಎಂಬುದು ತಮಿಳರ ಅಭಿಪ್ರಾಯ.

ಸತ್ಯರಾಜ್ ಗೆ ನಷ್ಟ ಏನಿಲ್ಲ

ಸತ್ಯರಾಜ್ ಗೆ ನಷ್ಟ ಏನಿಲ್ಲ

ಸತ್ಯರಾಜ್ ಗೆ ಆಗುವ ನಷ್ಟ ಏನಿಲ್ಲ. ಅವರಿಗೆ ಬರಬೇಕಾದ ಸಂಭಾವನೆ ಸಿಕ್ಕಿರುವುದರಿಂದ ತಮಿಳರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ರಜನಿಕಾಂತ್ ಚಿತ್ರ ಬ್ಯಾನ್ ಮಾಡುತ್ತೇವೆ

ರಜನಿಕಾಂತ್ ಚಿತ್ರ ಬ್ಯಾನ್ ಮಾಡುತ್ತೇವೆ

''ನಾವೆಲ್ಲ ಸೇರಿ ರಜನಿಕಾಂತ್ ರವರ 2.0 ಚಿತ್ರವನ್ನ ತಮಿಳುನಾಡಿನಲ್ಲಿ ಬ್ಯಾನ್ ಮಾಡೋಣ. ಯಾಕಂದ್ರೆ, ಕನ್ನಡಿಗ ರಜನಿ ತಮಿಳರಿಗಾಗಿ ಏನನ್ನೂ ಮಾಡಿಲ್ಲ. ತಮಿಳರ ಪರ ದನಿ ಕೂಡ ಎತ್ತಿಲ್ಲ'' ಎನ್ನುವವರೂ ಇದ್ದಾರೆ.

ಸತ್ಯರಾಜ್ ತಮಿಳಿಗ

ಸತ್ಯರಾಜ್ ತಮಿಳಿಗ

''ನಿನ್ನ ಸಪೋರ್ಟ್ ಕೇಳಲು ನಾನೇನು ಬಾಷಾನಾ.? (ರಜನಿಕಾಂತ್) ನಾನು ತಮಿಳಿಗ''

ಹಲವರ ಪ್ರಶ್ನೆ ಒಂದೇ

ಹಲವರ ಪ್ರಶ್ನೆ ಒಂದೇ

''ಸತ್ಯರಾಜ್ ಹಾಗೆ ಮಾತನಾಡಿರುವುದು ಒಂಬತ್ತು ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆಗೂ ಕರ್ನಾಟಕದಲ್ಲಿ ಅವರ 30 ಸಿನಿಮಾಗಳು ಬಿಡುಗಡೆ ಆಗಿದೆ. ಈಗ 'ಬಾಹುಬಲಿ-2' ವಿರುದ್ಧ ಮಾತ್ರ ಹೋರಾಟ ಯಾಕೆ.?'' ಎಂಬ ಪ್ರಶ್ನೆ ಹಲವರಿಗೆ ಇದೆ.

ಮಾನನಷ್ಟ ಮೊಕದ್ದಮೆ ಹಾಕಲಿ

ಮಾನನಷ್ಟ ಮೊಕದ್ದಮೆ ಹಾಕಲಿ

''ಅವಮಾನ ಆಗಿದ್ರೆ, ಮಾನನಷ್ಟ ಮೊಕದ್ದಮೆ ಹಾಕಿ, ಕೇಸ್ ಗೆಲ್ಲಿ. ಬ್ಲಾಕ್ ಮೇಲ್ ಮಾಡಿದರೆ ಯಾವ ಪ್ರಯೋಜನ ಇಲ್ಲ'' - ನಿರ್ಮಲ್ ಕುಮಾರ್

ಇಂಗ್ಲೀಷ್ ಚಿತ್ರಗಳನ್ನೂ ಬ್ಯಾನ್ ಮಾಡಿ

ಇಂಗ್ಲೀಷ್ ಚಿತ್ರಗಳನ್ನೂ ಬ್ಯಾನ್ ಮಾಡಿ

''ಒಂಬತ್ತು ವರ್ಷಗಳ ಹಿಂದೆ ಆಡಿದ ಮಾತಿಗೆ ಈಗ ಸತ್ಯರಾಜ್ ರವರ ಚಿತ್ರಗಳನ್ನ ಬ್ಯಾನ್ ಮಾಡುವ ಹಾಗಿದ್ರೆ, ಇಂಗ್ಲೀಷ್ ಚಿತ್ರಗಳನ್ನೆಲ್ಲ ನಾವು ಬ್ಯಾನ್ ಮಾಡಬೇಕು. ಯಾಕಂದ್ರೆ, ನೂರು ವರ್ಷಗಳ ಹಿಂದೆ ಬ್ರಿಟೀಷರು ನಮ್ಮನ್ನ ಕೇವಲವಾಗಿ ನೋಡ್ತಿದ್ರು'' ಎನ್ನುವ ಮೂಲಕ ಕನ್ನಡಿಗರ ಮನಃಸ್ಥಿತಿಯನ್ನ ತಮಿಳರು ಲೇವಡಿ ಮಾಡಿದ್ದಾರೆ.

ಕನ್ನಡಿಗರ ವಿರುದ್ಧ ಮನಬಂದಂತೆ ಟ್ವೀಟ್ ಗಳು

ಕನ್ನಡಿಗರ ವಿರುದ್ಧ ಮನಬಂದಂತೆ ಟ್ವೀಟ್ ಗಳು

''ಕನ್ನಡಿಗರಿಂದ ಏನನ್ನು ತಾನೆ ನಿರೀಕ್ಷೆ ಮಾಡಲು ಸಾಧ್ಯ. ನೀರನ್ನೂ ಕೊಡಲು ನಿರಾಕರಿಸುತ್ತಾರೆ ಅವರು'' ಎಂತೆಲ್ಲಾ ಕನ್ನಡಿಗರ ವಿರುದ್ಧ ತಮಿಳರು ಬಾಯಿಗೆ ಬಂದಂತೆ ಟ್ವೀಟ್ ಮಾಡುತ್ತಿದ್ದಾರೆ.

ಸತ್ಯರಾಜ್ ಕ್ಷಮೆ ಕೇಳಲೇಬೇಕು

ಸತ್ಯರಾಜ್ ಕ್ಷಮೆ ಕೇಳಲೇಬೇಕು

''ಕ್ಷಮಾಪಣೆ ಕೇಳಲೇಬೇಕು. ಯಾವುದೇ ಕಾರಣಕ್ಕೂ ನಮ್ಮ ಪಟ್ಟನ್ನ ಬಿಟ್ಟುಕೊಡುವುದಿಲ್ಲ'' ಎನ್ನುತ್ತಿದ್ದಾರೆ ಕನ್ನಡಿಗರು

ರೊಚ್ಚಿಗೆದ್ದ ಕನ್ನಡಿಗರು

ರೊಚ್ಚಿಗೆದ್ದ ಕನ್ನಡಿಗರು

''ಒಂದು ರಾಜ್ಯವನ್ನ ಗೌರವಿಸಲು ಬಾರದ ಸತ್ಯರಾಜ್ ರವರಿಗೆ ಸಪೋರ್ಟ್ ಮಾಡುವುದಾದರೂ ಯಾಕೆ'' ಅಂತ ಕನ್ನಡಿಗರು ಟ್ವಿಟ್ಟರ್ ನಲ್ಲಿ ದನಿಯೆತ್ತಿದ್ದಾರೆ.

'ಬಾಹುಬಲಿ-2' ಬ್ಯಾನ್ ಆಗ್ಬೇಕ್

'ಬಾಹುಬಲಿ-2' ಬ್ಯಾನ್ ಆಗ್ಬೇಕ್

''ಕನ್ನಡಿಗರ ವಿರುದ್ಧ ಬೇಜವಾಬ್ದಾರಿ ಹೇಳಿಕೆ ನೀಡಿರುವ ಸತ್ಯರಾಜ್ 'ಬಾಹುಬಲಿ'ಯನ್ನ ನಿಜವಾಗಲೂ ಕೊಂದಿದ್ದಾರೆ. 'ಬಾಹುಬಲಿ-2' ಬ್ಯಾನ್ ಆಗಲೇಬೇಕು'' ಎಂಬುದು ಕನ್ನಡಿಗರ ಪಟ್ಟು

ಕನ್ನಡಿಗರೇ ಇದಕ್ಕೆ ನಿಮ್ಮ ಅಭಿಪ್ರಾಯ ಏನು.?

ಕನ್ನಡಿಗರೇ ಇದಕ್ಕೆ ನಿಮ್ಮ ಅಭಿಪ್ರಾಯ ಏನು.?

ಟ್ವಿಟ್ಟರ್ ನಲ್ಲಿ #JusticeForSathyaraj ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಸತ್ಯರಾಜ್ ಪರ ಬ್ಯಾಟಿಂಗ್ ನಡೆಯುತ್ತಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು.? ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ....

English summary
'Baahubali-2' ban in Karnataka: Annoyed Tamilians tweets against Kannadigas
Please Wait while comments are loading...

Kannada Photos

Go to : More Photos