»   » 'ಬಾಹುಬಲಿ' ಚಿತ್ರಕ್ಕಿಂತ 'ಬಾಹುಬಲಿ-2' ಸೂಪರ್ ಆಗಿದ್ಯಂತೆ.! ಹೇಳಿದವರ್ಯಾರು ಗೊತ್ತೇ.?

'ಬಾಹುಬಲಿ' ಚಿತ್ರಕ್ಕಿಂತ 'ಬಾಹುಬಲಿ-2' ಸೂಪರ್ ಆಗಿದ್ಯಂತೆ.! ಹೇಳಿದವರ್ಯಾರು ಗೊತ್ತೇ.?

Posted by:
Subscribe to Filmibeat Kannada

ಇಡೀ ಭಾರತದಲ್ಲಿ ಬಹು ನಿರೀಕ್ಷೆ ಮೂಡಿಸಿರುವ 'ಬಾಹುಬಲಿ-2' ಚಿತ್ರ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಕರ್ನಾಟಕದಲ್ಲಿ 'ಬಾಹುಬಲಿ-2' ರಿಲೀಸ್ ಗೆ ಇದ್ದ ಅಡೆ-ತಡೆಗಳೆಲ್ಲವೂ ನಿವಾರಣೆ ಆಗಿದೆ. 'ಬಾಹುಬಲಿ-2' ಚಿತ್ರವನ್ನ ಕಣ್ತುಂಬಿಕೊಳ್ಳಲು ತೆಲುಗು ಸಿನಿ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ.[ಕರ್ನಾಟಕದಲ್ಲಿ 'ಬಾಹುಬಲಿ 2' ಬಿಡುಗಡೆ, ಬಂದ್ ವಾಪಸ್: ವಾಟಾಳ್ ನಾಗರಾಜ್ ಸ್ಪಷ್ಟನೆ]

ಎಲ್ಲರೂ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವ 'ಬಾಹುಬಲಿ-2' ಹೇಗಿರಬಹುದು.? ಈ ಪ್ರಶ್ನೆಗೆ ಒಬ್ಬರು ಉತ್ತರ ಕೊಟ್ಟಿದ್ದಾರೆ. ಅದರಲ್ಲೂ ಅವರು ಸೆನ್ಸಾರ್ ಮಂಡಳಿಯ ಸದಸ್ಯರು ಎನ್ನುವುದು ಇಂಟ್ರೆಸ್ಟಿಂಗ್ ವಿಷಯ.!

'ಬಾಹುಬಲಿ-2' ಸಿನಿಮಾ ಸೂಪರ್ ಆಗಿದ್ಯಂತೆ.!

'ಬಾಹುಬಲಿ' ಚಿತ್ರಕ್ಕಿಂತ 'ಬಾಹುಬಲಿ-2' ಸಿನಿಮಾ ಸೂಪರ್ ಆಗಿದ್ಯಂತೆ. ಹಾಗಂತ ಹೇಳಿರುವವರು ಬೇರೆ ಯಾರೂ ಅಲ್ಲ. ಸೌತ್ ಏಷಿಯನ್ ಸಿನಿಮಾ ಮ್ಯಾಗಝೀನ್ (ಯುಎಇ, ಯು.ಕೆ, ಭಾರತ) ವಿಮರ್ಶಕ ಹಾಗೂ ಸೆನ್ಸಾರ್ ಮಂಡಳಿ ಸದಸ್ಯ ಉಮೈರ್ ಸಂಧು.[ಕೊನೆಗೂ 'ಕಟ್ಟಪ್ಪ'ನನ್ನ ಕ್ಷಮಿಸಿದ ಕರುನಾಡು]

ಟ್ವೀಟ್ ಮಾಡಿದ್ದಾರೆ ಉಮೈರ್ ಸಂಧು

''ಬಾಹುಬಲಿ' ಚಿತ್ರಕ್ಕಿಂತ 'ಬಾಹುಬಲಿ-2' 100% ಉತ್ತಮವಾಗಿದೆ. ಬಲ್ಲ ಮೂಲಗಳ ಪ್ರಕಾರ, 'ಬಾಹುಬಲಿ-2' ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಟಾಲಿವುಡ್ ಮತ್ತು ಪ್ರಭಾಸ್ ಫ್ಯಾನ್ಸ್ ಸಂಭ್ರಮಿಸಲು ಅಡ್ಡಿಯಿಲ್ಲ'' ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ.

ಮೊಟ್ಟ ಮೊದಲ ವಿಮರ್ಶೆ ಕೊಡ್ತಾರಂತೆ.!

ಬಾಹುಬಲಿ-2' ಚಿತ್ರದ ಎಕ್ಸ್ ಕ್ಲೂಸಿವ್ ವಿಮರ್ಶೆಯನ್ನ ಬುಧವಾರವೇ ಪ್ರಕಟಿಸುವುದಾಗಿ ಉಮೈರ್ ಸಂಧು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಏಪ್ರಿಲ್ 28ಕ್ಕೆ ಬಿಡುಗಡೆ

ಏಪ್ರಿಲ್ 28 ರಂದು ಬಹುನಿರೀಕ್ಷಿತ 'ಬಾಹುಬಲಿ-2' ಚಿತ್ರ ಬಿಡುಗಡೆ ಆಗಲಿದೆ. ಎಸ್.ಎಸ್.ರಾಜಮೌಳಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪ್ರಭಾಸ್, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ, ರಾಣಾ ದಗ್ಗುಬಾಟಿ ಮುಂತಾದವರು ನಟಿಸಿದ್ದಾರೆ.

English summary
'Baahubali-2' is 100 percent better than 'Baahubali' says Umair Sandhu, Film and Fashion critic at South Asian Cinema Magazine UAE, UK and India.
Please Wait while comments are loading...

Kannada Photos

Go to : More Photos