»   » 'ಬಾಹುಬಲಿ-2'ಗೆ ಮೊದಲೇ ಮತ್ತೆ ದಾಖಲೆ ಬರೆದ 'ಬಾಹುಬಲಿ- ದಿ ಬಿಗಿನಿಂಗ್'

'ಬಾಹುಬಲಿ-2'ಗೆ ಮೊದಲೇ ಮತ್ತೆ ದಾಖಲೆ ಬರೆದ 'ಬಾಹುಬಲಿ- ದಿ ಬಿಗಿನಿಂಗ್'

Posted by:
Subscribe to Filmibeat Kannada

'ಬಾಹುಬಲಿ- ದಿ ಬಿಗಿನಿಂಗ್' ಚಿತ್ರದಲ್ಲಿ ಕಟ್ಟಪ್ಪ ಬಾಹುಬಲಿ ಕೊಂದಿದ್ದು ಏಕೆ? ಎಂಬ ಸಣ್ಣ ಪ್ರಶ್ನೆ ಸಿನಿಮಾ ನೋಡಿದ ಎಲ್ಲರ ತಲೆಯಲ್ಲಿ ದೊಡ್ಡ ಹುಳವಾಗಿ ಕೊರೆಯುತ್ತಿದೆ. ಈ ಪ್ರಶ್ನೆಗೆ ಉತ್ತರಿಸಲು ನಿರ್ದೇಶಕ ಎಸ್ ಎಸ್ ರಾಜಮೌಳಿ ತಮ್ಮ ಬತ್ತಳಿಕೆಯಲ್ಲಿ 'ಬಾಹುಬಲಿ ದಿ ಕನ್ ಕ್ಲೂಶನ್' ರೆಡಿಮಾಡಿಕೊಂಡಿದ್ದಾರೆ.[ಬಿಡುಗಡೆಗೂ ಮುನ್ನ ಕೋಟಿ ಕೋಟಿ ಲೂಟಿ ಮಾಡಿದ 'ಬಾಹುಬಲಿ-2']

ವಿಶೇಷ ಅಂದ್ರೆ ಈಗ 'ಬಾಹುಬಲಿ-2' ಚಿತ್ರ ಬಿಡುಗಡೆಗೂ ಮೊದಲೇ ಮತ್ತೆ ದಾಖಲೆ ಬರೆದಿದೆ 'ಬಾಹುಬಲಿ- ದಿ ಬಿಗಿನಿಂಗ್'. ಆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ಓದಿರಿ..

ರೀ- ರಿಲೀಸ್ ಆಗಲಿದೆ 'ಬಾಹುಬಲಿ'

ರೀ- ರಿಲೀಸ್ ಆಗಲಿದೆ 'ಬಾಹುಬಲಿ'

ಭಾರತೀಯ ಸಿನಿಮಾದಲ್ಲಿ ಸಂಚಲನ ಸೃಷ್ಟಿಸಿದ ಎಸ್ ಎಸ್ ರಾಜಮೌಳಿ ನಿರ್ದೇಶನದ ಐತಿಹಾಸಿಕ ಸಾಹಸಮಯ ಸಿನಿಮಾ 'ಬಾಹುಬಲಿ- ದಿ ಬಿಗಿನಿಂಗ್' ಸಿನಿಮಾ ರೀ-ರಿಲೀಸ್ ಆಗುತ್ತಿದೆ.[ಅದ್ಭುತಗಳ ಅನಾವರಣ ಮಾಡಿದ 'ಬಾಹುಬಲಿ 2' ಟ್ರೈಲರ್]

ದಾಖಲೆ ಚಿತ್ರ ಮಂದಿರಗಳಲ್ಲಿ ಬಿಡುಗಡೆ

ದಾಖಲೆ ಚಿತ್ರ ಮಂದಿರಗಳಲ್ಲಿ ಬಿಡುಗಡೆ

ಬಜೆಟ್ ಮತ್ತು ಮೇಕಿಂಗ್ ಮೂಲಕ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ 'ಬಾಹುಬಲಿ- ದಿ ಬಿಗಿನಿಂಗ್' ಚಿತ್ರ ಇದೇ ಏಪ್ರಿಲ್ 7 ರಂದು ರೀ-ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ ಚಿತ್ರ ಮರು ಬಿಡುಗಡೆ ಆಗುತ್ತಿದ್ದರು ಸಹ, ದೇಶದಾದ್ಯಂತ 800 ಥಿಯೇಟರ್ ಗಳಲ್ಲಿ ರೀ-ರಿಲೀಸ್ ಆಗಲು ಸಜ್ಜಾಗಿದ್ದು ಹೊಸ ದಾಖಲೆ ಸೃಷ್ಟಿಸಿದೆ.

'ಬಾಹುಬಲಿ' ರೆಕಾರ್ಡ್ ಬ್ರೇಕ್ ಕಲೆಕ್ಷನ್

'ಬಾಹುಬಲಿ' ರೆಕಾರ್ಡ್ ಬ್ರೇಕ್ ಕಲೆಕ್ಷನ್

2015 ರ ಜುಲೈ 10 ರಂದು ಬಿಡುಗಡೆ ಆಗಿದ್ದ 'ಬಾಹುಬಲಿ' ಭಾಗ 1 ಚಿತ್ರ, 650 ಕೋಟಿ ರೂ ಬಾಕ್ಸ್ ಆಫೀಸ್ ಗಳಿಸಿ ಭಾರತೀಯ ಚಿತ್ರರಂಗದ ಎಲ್ಲಾ ಸಿನಿಮಾಗಳ ಗಳಿಕೆಯನ್ನು ಬ್ರೇಕ್ ಮಾಡಿ ಹೊಸ ದಾಖಲೆ ಬರೆದಿತ್ತು.

ಯಶಸ್ವಿ ಚಿತ್ರದ ತಾರಾಬಳಗ

ಯಶಸ್ವಿ ಚಿತ್ರದ ತಾರಾಬಳಗ

ರೀ-ರಿಲೀಸ್ ಆಗಲಿರುವ 'ಬಾಹುಬಲಿ- ದಿ ಬಿಗಿನಿಂಗ್' ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ಬಹುಭಾಷಾ ನಟಿ ರಮ್ಯಾ ಕೃಷ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

'ಬಾಹುಬಲಿ 2' ಬಿಡುಗಡೆ ಯಾವಾಗ?

'ಬಾಹುಬಲಿ 2' ಬಿಡುಗಡೆ ಯಾವಾಗ?

ಸಿನಿ ಪ್ರಿಯರ ತಲೆಯೊಳಗೆ ಸಂಶಯವಾಗೇ ಉಳಿದಿರುವ ಕಟ್ಟಪ್ಪ ಬಾಹುಬಲಿ ಕೊಂದಿದ್ದು ಏಕೆ? ಎಂಬುದನ್ನು ರಿವೀಲ್ ಮಾಡಲಿರುವ 'ಬಾಹುಬಲಿ -ದಿ ಕನ್ ಕ್ಲೂಶನ್' ಚಿತ್ರ ಏಪ್ರಿಲ್ 28 ರಂದು ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ.

English summary
Producers of the 'Baahubali' franchise are re-releasing part 1 of SS Rajamouli’s historical action-adventure on approximately 800 screens in India on April 7.
Please Wait while comments are loading...

Kannada Photos

Go to : More Photos