»   » ಶಿವರಾತ್ರಿಗೆ 'ಬಾಹುಬಲಿ 2' ಚಿತ್ರದ ಉಡುಗೊರೆ ಇದು

ಶಿವರಾತ್ರಿಗೆ 'ಬಾಹುಬಲಿ 2' ಚಿತ್ರದ ಉಡುಗೊರೆ ಇದು

Posted by:
Subscribe to Filmibeat Kannada

ಭಾರತ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದ 'ಬಾಹುಬಲಿ' ಚಿತ್ರದ ಮುಂದುವರೆದ ಭಾಗ ಏಪ್ರಿಲ್ 28 ರಂದು ಬಿಡುಗಡೆ ಆಗಲಿದೆ. ಅಂತೂ ಕಟ್ಟಪ್ಪ ಬಾಹುಬಲಿ ಕೊಂದಿದ್ದು ಏಕೆ? ಎಂಬುದಕ್ಕೆ ಉತ್ತರ ಶೀಘ್ರದಲ್ಲೇ ಸಿಗಲಿದೆ.['ಬಾಹುಬಲಿ 2' ಕನ್ನಡದ ಡಬ್ಬಿಂಗ್ ಬೇಡಿಕೆಗೆ ಜನರ ಪ್ರತಿಕ್ರಿಯೆ..!]

ಸದ್ಯದ ವಿಶೇಷತೆ ಅಂದ್ರೆ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿನ್ನೆಯಷ್ಟೇ ಶಿವರಾತ್ರಿಗೆ ಹಬ್ಬಕ್ಕೆ ಸಿನಿ ಪ್ರಿಯರಿಗೆ ಶುಭಾಶಯಗಳನ್ನು ತಿಳಿಸಲು 'ಬಾಹುಬಲಿ- ದಿ ಕನ್ ಕ್ಲೂಶನ್' ಚಿತ್ರದ ಎರಡನೇ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್ ನಲ್ಲಿ ಬಾಹುಬಲಿ(ಪ್ರಭಾಸ್) ಆನೆ ಮೇಲೆ ನಿಂತಿದ್ದು, ನೋಡುಗರ ಮೈನವಿರೇಳೀಸುವಂತಿದೆ. ಇನ್ನೂ 'ಬಳಿ ಬಳಿ ಬಳಿ ರಾ... ಬಳಿ ಸಾಹೋರೆ ಬಾಹುಬಲಿ..' ಎಂಬ ಬ್ಯಾಗ್ರೌಂಡ್ ಹಾಡು ಈ ಹಿಂದೆ ನೀವೆಲ್ಲಾ ಚಿತ್ರದ ಬಗ್ಗೆ ಅಂದುಕೊಂಡಿದ್ದಕ್ಕಿಂತ ಹೈ ಎಕ್ಸ್ ಪೆಕ್ಟೇಶನ್ ಹೆಚ್ಚಿಸುವಂತಿದೆ.['ರಾಜಮೌಳಿ' ಅಪ್ಪ ವಿಜಯೇಂದ್ರ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ!]

'Baahubali -The Conclusion's Motion Poster 2

'ಬಾಹುಬಲಿ-ದಿ ಕನ್ ಕ್ಲೂಶನ್' ಚಿತ್ರದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯಿಸಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹರಿದಾಡಿತ್ತು. ಈ ಸುದ್ದಿಗೆ ಪ್ರತಿಕ್ರಿಯಿಸಿದ್ದ ಚಿತ್ರತಂಡ ಶಾರುಖ್ ನಟಿಸಿಲ್ಲ ಎಂದು ಹೇಳಿತ್ತು. 'ಬಾಹುಬಲಿ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದರು. 'ಬಾಹುಬಲಿ-ದಿ ಕನ್ ಕ್ಲೂಶನ್' ಚಿತ್ರದಲ್ಲಿ ಹಿಂದಿನ ಚಿತ್ರದಂತೆ ಯಾರಾದರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಾ ಎಂಬ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಕಿಚ್ಚ ಸುದೀಪ್ 'ಬಾಹುಬಲಿ 2' ನಲ್ಲೂ ಇದ್ದಾರೆ ಎಂದು ಹೇಳಲಾಗುತ್ತಿದೆ!. ಸುದೀಪ್ ಸ್ಕ್ರೀನ್ ಶೇರ್ ಮಾಡಿದ್ದಾರಾ? ಇಲ್ವಾ? ಅನ್ನೋದನ್ನ ಚಿತ್ರ ನೋಡಿಯೇ ತಿಳಿಯಬೇಕು.['ಬಾಹುಬಲಿ-2' ಚಿತ್ರೀಕರಣದಿಂದ ಪ್ರಭಾಸ್ ಔಟ್!]

'ಬಾಹುಬಲಿ-ದಿ ಕನ್ ಕ್ಲೂಶನ್' ಸಿನಿಮಾವನ್ನು 200 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ರಾಣಾ ದಗ್ಗುಬಾಟಿ, ನಟಿ ಅನುಷ್ಕಾ ಶೆಟ್ಟಿ, ನಟಿ ತಮನ್ನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಬಾಹುಬಲಿ-ದಿ ಕನ್ ಕ್ಲೂಶನ್' ಮೋಶನ್ ಪೋಸ್ಟರ್ 2 ಇಲ್ಲಿದೆ ನೋಡಿ.

English summary
S S Rajamouli Directorial 'Baahubali -The Conclusion' movie Motion Poster 2 released.
Please Wait while comments are loading...

Kannada Photos

Go to : More Photos