»   » ಅದ್ಭುತಗಳ ಅನಾವರಣ ಮಾಡಿದ 'ಬಾಹುಬಲಿ 2' ಟ್ರೈಲರ್

ಅದ್ಭುತಗಳ ಅನಾವರಣ ಮಾಡಿದ 'ಬಾಹುಬಲಿ 2' ಟ್ರೈಲರ್

Posted by:
Subscribe to Filmibeat Kannada

ಟಾಲಿವುಡ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಆಕ್ಷನ್ ಕಟ್ ಹೇಳಿರುವ,ಭಾರತದ ಬಹುನಿರೀಕ್ಷಿತ 'ಬಾಹುಬಲಿ-2' ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಚಿತ್ರದ ಟ್ರೈಲರ್ ನೋಡಿದ ಸಿನಿ ಪ್ರೇಮಿಗಳಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಕೆರಳಲಿದೆ. ಆದ್ರೆ ಒಂದು ಪ್ರಶ್ನೆಗೆ ಮಾತ್ರ ಯಾರಿಗೂ ಉತ್ತರ ಸಿಕ್ಕಿಲ್ಲ. ಅದೇನು ಅಂತಿರಾ? ಮುಂದೆ ಓದಿ.

ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ?ಎಂಬ ಸಸ್ಪೆನ್ಸ್ 'ಬಾಹುಬಲಿ-2' ಚಿತ್ರದ ಟ್ರೈಲರ್ ನೋಡಿದ ನಂತರವೂ ಮುಂದುವರೆಯಲಿದ್ದು, ಈ ಪ್ರಶ್ನೆಗೆ ಉತ್ತರ ಬೇಕಾದಲ್ಲಿ ಚಿತ್ರಮಂದಿರಕ್ಕೆ ಹೋಗಬೇಕು. ಪ್ರೇಕ್ಷಕರು ಹೊಂದಿದ್ದ ನಿರೀಕ್ಷೆಗಿಂತ ಚಿತ್ರದ ಶ್ರೀಮಂತಿಕೆ ಹೆಚ್ಚಾಗೆ ಇದ್ದು, ಟ್ರೈಲರ್ ನ ವಿಶೇಷತೆಗಳು ಇಲ್ಲಿವೆ ನೋಡಿ.

ಟ್ರೈಲರ್ ನಲ್ಲಿ ಬಾಹುಬಲಿಯನ್ನು ಕೊಲ್ಲುವ ದೃಶ್ಯ

ಟ್ರೈಲರ್ ನಲ್ಲಿ ಬಾಹುಬಲಿಯನ್ನು ಕೊಲ್ಲುವ ದೃಶ್ಯ

ಟ್ರೈಲರ್ ನಲ್ಲಿ ಅಮರೇಂದ್ರ ಬಾಹುಬಲಿ ಕಟ್ಟಪ್ಪ ನಿಗೆ, "ನೀನು ನನ್ನ ಪಕ್ಕದಲ್ಲಿ ಇರುವ ತನಕ ಯಾರು ಕೂಡ ನನ್ನನ್ನು ಕೊಲ್ಲಲು ಆಗುವುದಿಲ್ಲ' ಎಂದು ಹೇಳಿರುವ ದೃಶ್ಯವಿದೆ. ಜೊತೆಗೆ ಈಗಾಗಲೇ ಎಲ್ಲರಲ್ಲೂ ಉಳಿದಿರುವ ಪ್ರಶ್ನೆ ಕಟ್ಟಪ್ಪ ಬಾಹುಬಲಿಯನ್ನು ಕೊಲ್ಲುವ ದೃಶ್ಯವಿದೆ.[ಬಾಹುಬಲಿ ವಿಮರ್ಶೆ : ಓಕೆ, ಆದರೆ ಅಂಥ ನಿರೀಕ್ಷೆ ಬೇಡ]

ಅನುಷ್ಕಾ ಶೆಟ್ಟಿ ಭರ್ಜರಿ ಆಕ್ಷನ್

ಅನುಷ್ಕಾ ಶೆಟ್ಟಿ ಭರ್ಜರಿ ಆಕ್ಷನ್

'ಬಾಹುಬಲಿ' ಯಲ್ಲಿ ನಟಿ ತಮನ್ನಾ ಅವರನ್ನು ಚಿತ್ರದ ನಾಯಕಿ ಆಗಿ ನೋಡಿದ್ದ ಪ್ರೇಕ್ಷಕರು, 'ಬಾಹುಬಲಿ'-2' ಚಿತ್ರದಲ್ಲಿ ಅನುಷ್ಕಾ ಶೆಟ್ಟಿಯ ಭರ್ಜರಿ ಆಕ್ಷನ್ ಮತ್ತು ಫೈಟ್ ನೋಡಬಹುದು.['ಬಾಹುಬಲಿ' ಚಿತ್ರತಂಡದಿಂದ ಬ್ಯಾಡ್ ನ್ಯೂಸ್!]

ಮೈನವಿರೇಳಿಸುವ ಕಾಳಗ

ಮೈನವಿರೇಳಿಸುವ ಕಾಳಗ

ಈ ಹಿಂದೆ ಅಮರೇಂದ್ರ ಬಾಹುಬಲಿ ಮತ್ತು ಬಲ್ಲಾಳ ದೇವ ಇಬ್ಬರು ಸೇರಿ ಕಾಳಕೇಯನ ಜೊತೆ ಯುದ್ಧ ಮಾಡಿದ್ದರು. ಆದರೆ 'ಬಾಹುಬಲಿ-2' ಚಿತ್ರದಲ್ಲಿ ಅಮರೇಂದ್ರ ಬಾಹುಬಲಿ(ಪ್ರಭಾಸ್) ಮತ್ತು ಬಲ್ಲಾಳದೇವ(ರಾಣಾ ದಗ್ಗುಬಾಟಿ) ಅವರೇ ಕಾಳಗಕ್ಕೆ ಇಳಿದಿರುವ ಮೈನವಿರೇಳಿಸುವ ದೃಶ್ಯಗಳು ಟ್ರೈಲರ್ ನಲ್ಲಿವೆ.

ಟ್ರೈಲರ್ ನಲ್ಲಿ ಅದ್ಭುತ ಶ್ರೀಮಂತಿಕೆ

ಟ್ರೈಲರ್ ನಲ್ಲಿ ಅದ್ಭುತ ಶ್ರೀಮಂತಿಕೆ

'ಬಾಹುಬಲಿ' ಚಿತ್ರಕ್ಕಿಂತ ಎಸ್.ಎಸ್.ರಾಜಮೌಳಿ 'ಬಾಹುಬಲಿ-2' ಚಿತ್ರದಲ್ಲಿ ಅದ್ಭುತ ಛಾಯಾಗ್ರಹಣಕ್ಕೆ ಒತ್ತುಕೊಟ್ಟಿರುವುದು ಟ್ರೈಲರ್ ನಲ್ಲಿ ಕಂಡುಬಂದಿದ್ದು, ಪ್ರಭಾಸ್ ಅವರ ಆಕ್ಷನ್ ದೃಶ್ಯಗಳು ಸಿನಿ ಪ್ರೇಮಿಗಳಿಗೆ ಚಿತ್ರದ ಕ್ರೇಜ್ ಹೆಚ್ಚಿಸಲಿದೆ.

ನಾಲ್ಕು ಭಾಷೆಗಳಲ್ಲಿ ಟ್ರೈಲರ್

ನಾಲ್ಕು ಭಾಷೆಗಳಲ್ಲಿ ಟ್ರೈಲರ್

'ಬಾಹುಬಲಿ-ದಿ ಕನ್ ಕ್ಲೂಶನ್' ಚಿತ್ರದ ಟ್ರೈಲರ್ ತೆಲುಗು, ತಮಿಳು, ಹಿಂದಿ, ಮಲಯಾಳಂ ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಿದ್ದು, ನಿಮ್ಮ ಆಯ್ಕೆಯ ಭಾಷೆಯಲ್ಲಿ ಟ್ರೈಲರ್ ನೋಡಬಹುದು.

'ಬಾಹುಬಲಿ-2' ಚಿತ್ರದ ಟ್ರೈಲರ್ ಹೇಗಿದೆ ನೋಡಿ...

'ಬಾಹುಬಲಿ-2' ಚಿತ್ರದ ಟ್ರೈಲರ್ ಹೇಗಿದೆ ನೋಡಿ...

ತೆಲುಗು ಭಾಷೆಯಲ್ಲಿ 'ಬಾಹುಬಲಿ-ದಿ ಕನ್ ಕ್ಲೂಶನ್' ಟ್ರೈಲರ್ ನೋಡಲು ಕ್ಲಿಕ್ ಮಾಡಿ

English summary
S S Rajamouli Directorial 'Baahubali -The Conclusion' movie Trailer released.
Please Wait while comments are loading...

Kannada Photos

Go to : More Photos