Don't Miss!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- News ಗೃಹ ಸಚಿವ ಡಾ. ಜಿ ಪರಮೇಶ್ವರ್ ರಾಜೀನಾಮೆಗೆ ಆಗ್ರಹ: ಕಾರಣವೇನು?
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆನ್ಸಾರ್ ನಲ್ಲಿ ಪಾಸಾದ ಬಹುಪರಾಕ್, ಜು.25ಕ್ಕೆ ತೆರೆಗೆ
ಈ ವರ್ಷದ ಮತ್ತೊಂದು ಬಹುನಿರೀಕ್ಷಿತ ಚಿತ್ರ 'ಬಹುಪರಾಕ್'. ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ನಿರೀಕ್ಷೆಯಂತೆ ಸೆನ್ಸಾರ್ ನಲ್ಲಿ 'ಯು/ಎ' ಸರ್ಟಿಫಿಕೇಟ್ ಗೆ ಭಾಜನವಾಗಿದೆ. ಇದೇ ಜುಲೈ 25ಕ್ಕೆ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ.
ರಾಜ್ಯದಾದ್ಯಂತ ಚಿತ್ರವನ್ನು ಸರಿಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿರುವುವಾಗಿ ಸುನಿ ಹೇಳಿದ್ದಾರೆ. ಹೈದರಾಬಾದ್, ಮುಂಬೈ, ಪುಣೆಯಲ್ಲೂ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಸಾಗರೋತ್ತರ ಬಿಡುಗಡೆ ಬಗ್ಗೆ ಇನ್ನೂ ಏನೂ ಅಂದುಕೊಂಡಿಲ್ಲ. [ಸಿಂಪಲ್ಲಾಗಿ ಕಾಯ್ತಾ ಇರಿ 'ಬಹುಪರಾಕ್' ಬರ್ತಾ ಇದೆ]
ಕರ್ನಾಟಕ ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿ ಕೋರಂ ಕೊರತೆ ಕಾರಣ ಈ ಚಿತ್ರವನ್ನು ಮುಂಬೈನಲ್ಲಿ ಸೆನ್ಸಾರ್ ಮಾಡಿಸಲಾಯಿತು. ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿದ್ದ 99 ಸದಸ್ಯರ ಪೈಕಿ 92 ಮಂದಿ ಸೇವಾವಧಿ ಮುಗಿದ ಕಾರಣ ಜೂ.30ರಂದು ರಾಜೀನಾಮೆ ಸಲ್ಲಿಸಿದ್ದರು.
ಬೆಂಗಳೂರಿನಲ್ಲಿ ಯಾಕೆ ಸೆನ್ಸಾರ್ ಆಗಲಿಲ್ಲ
ಈಗಿರುವ ಏಳು ಮಂದಿ ಸದಸ್ಯರು ಕೋರಂ ಕೊರತೆ ಕಾರಣ ಸೆನ್ಸಾರ್ ಮಾಡುವಂತಿಲ್ಲ. ಏಳು ಮಂದಿ ಸದಸ್ಯರಲ್ಲಿ ಒಬ್ಬರೂ ಮಹಿಳೆ ಇಲ್ಲದಿರುವುದು ಇನ್ನೊಂದು ಸಮಸ್ಯೆ. ಸೆನ್ಸಾರ್ ನಿಯಮಗಳ ಪ್ರಕಾರ ಒಂದು ಚಿತ್ರಕ್ಕೆ ಪ್ರಮಾಣ ಪತ್ರ ಕೊಡಬೇಕಾದರೆ ಅಧ್ಯಕ್ಷರ ಜೊತೆಗೆ ನಾಲ್ಕು ಮಂದಿ ಸದಸ್ಯರು, ಕನಿಷ್ಠ ಇಬ್ಬರು ಮಹಿಳೆಯರು ಇರಲೇಬೇಕು.
ಮುಂಬೈನಲ್ಲಿ ಸೆನ್ಸಾರ್ ಆದ ಚಿತ್ರ
ಆದರೆ ಈಗ ಎಲ್ಲರೂ ರಾಜೀನಾಮೆ ನೀಡಿದ್ದು ಕೋರಂ ಕೊರತೆ ಎದುರಾಗಿದೆ. ಹಾಗಾಗಿ ಈಗಿನ ಹಾಲಿ ಮುಖ್ಯಸ್ಥರಾದ ನಾಗೇಂದ್ರ ಸ್ವಾಮಿ ಅವರು ಬಹುಪರಾಕ್ ಹಾಗೂ ಮಿಸ್ ಮಲ್ಲಿಗೆ ಚಿತ್ರಗಳನ್ನು ಮುಂಬೈನಲ್ಲಿ ಸೆನ್ಸಾರ್ ಮಾಡಿಸಲು ಸೂಚಿಸಿದ್ದರು. ಅದರಂತೆ ಬಹುಪರಾಕ್ ಚಿತ್ರಕ್ಕೆ ಸೆನ್ಸಾರ್ ಮಾಡಲಾಗಿದೆ.
ಆಡಿಯೋಗೆ ಭರ್ಜರಿ ಪ್ರತಿಕ್ರಿಯೆ
ಇನ್ನು ಬಹುಪರಾಕ್ ವಿಚಾರಕ್ಕೆ ಬರುವುದಾದರೆ ಡೈಮಂಡ್ ಸ್ಟಾರ್ ಶ್ರೀನಗರಕಿಟ್ಟಿ ಜೊತೆ ಮೇಘನಾ ರಾಜ್ ಹಾಗೂ ಮಾನಸಾ ಜೋಶಿ ಇಬ್ಬರು ಮುದ್ದಾದ ನಾಯಕಿಯರಿದ್ದಾರೆ. ಈಗಾಗಲೆ ಬಿಡುಗಡೆಯಾಗಿರುವ ಚಿತ್ರದ ಆಡಿಯೋಗೆ ಭರ್ಜರಿ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.
ತುದಿಗಾಲಲ್ಲಿ ನಿಂತು ನಿರೀಕ್ಷೆಸುವಂತೆ ಮಾಡಿವೆ
ಬಹುಪರಾಕ್ ಚಿತ್ರದ ಟ್ರೇಲರ್ ಗಳು, ವಿಡಿಯೋ ಹಾಡುಗಳು ಪ್ರೇಕ್ಷಕರಲ್ಲಿ ಚಿತ್ರವನ್ನು ತುದಿಗಾಲಲ್ಲಿ ನಿಂತು ನಿರೀಕ್ಷೆಸುವಂತೆ ಮಾಡಿವೆ. ಡೈಮಂಡ್ ಸ್ಟಾರ್ ಕಿಟ್ಟಿ ಅವರ ವೃತ್ತಿ ಬದುಕಿನಲ್ಲಿ 'ಬಹುಪರಾಕ್' ಚಿತ್ರ ಇನ್ನೊಂದು ಮೈಲುಗಲ್ಲಾಗಲಿದೆ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ.
ಶ್ರೀನಗಕಿಟ್ಟಿ ಅಭಿನಯದ 25ನೇ ಚಿತ್ರ
ಶ್ರೀನಗಕಿಟ್ಟಿ ಅಭಿನಯದ 25ನೇ ಚಿತ್ರ ಇದಾಗಿದೆ. ಬುಧವಾರ ನಡೆದ ಸೆನ್ಸಾರ್ ಪ್ರಕ್ರಿಯೆಯಲ್ಲಿ ಮರಾಠಿ ಸೆನ್ಸಾರ್ ಮಂಡಳಿ ಸದಸ್ಯರು ಹಾಗೂ ಅವರೊಂದಿಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮುಖ್ಯಸ್ಥ ನರೇಂದ್ರ ಸ್ವಾಮಿ ಮತ್ತಿತತರು ವೀಕ್ಷಿಸಿ ಪ್ರಮಾಣ ಪತ್ರ ನೀಡಿದ್ದಾರೆ.