twitter
    For Quick Alerts
    ALLOW NOTIFICATIONS  
    For Daily Alerts

    ಎನ್ ಟಿ ಆರ್ ಮೊಮ್ಮಗಳ ರಾಯಲ್ ಮದುವೆ ಚಿತ್ರಗಳು

    By ಅನಂತರಾಮು, ಹೈದರಾಬಾದ್
    |

    ಇಡೀ ಸೀಮಾಂಧ್ರ ಪ್ರದೇಶ ಎದುರು ನೋಡುತ್ತಿದ್ದ ರಾಯಲ್ ಮದುವೆ ಇದು. ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ತಾರಕ ರಾಮಾ ರಾವ್ (ಎನ್ ಟಿ ಆರ್) ಅವರ ಮೊಮ್ಮಗಳು ನಂದಮೂರಿ ತೇಜಸ್ವಿನಿ ಮದುವೆ ಬುಧವಾರ (ಆಗಸ್ಟ್ 21) ಬೆಳಗ್ಗೆ 8.52ರ ಶುಭಮುಹೂರ್ತದಲ್ಲಿ ನೆರವೇರಿತು.

    ಎನ್ ಟಿ ಆರ್ ಪುತ್ರ ನಂದಮೂರಿ ಬಾಲಕೃಷ್ಣ ಅವರ ಮಗಳು ತೇಜಸ್ವಿನಿ. ಈ ಮದುವೆಗಾಗಿ ಸಾಕಷ್ಟು ಖರ್ಚು ವೆಚ್ಚ ಮಾಡಿದ್ದಾರೆ ಬಾಲಕೃಷ್ಣ. ಇದಕ್ಕಾಗಿ ಚಿತ್ರರಂಗದ ಹಲವಾರು ತಂತ್ರಜ್ಞರನ್ನೂ ಬಳಸಿಕೊಂಡಿದ್ದಾರೆ. ಮಂಟಪದ ವಿನ್ಯಾಸದಿಂದ ಹಿಡಿದು ಮೇಕಪ್ ತನಕ ಹೀಗೇ ಇರಬೇಕೆಂಬ ಎನ್ಟಿಆರ್ ಕುಟುಂಬಿಕರ ಬಯಕೆಯಂತೆ ಮದುವೆ ನಡೆಯಿತು.

    ಅವರ ಅಭಿರುಚಿಗೆ ತಕ್ಕಂತೆ ಮಂಟಪವನ್ನು ಸಿದ್ಧಗೊಳಿಸಿದ್ದಾರೆ. ಅಲ್ಲಿನ ವರ್ಣರಂಜಿತ ಚಿತ್ರಗಳನ್ನು ನೋಡುತ್ತಿದ್ದರೆ ಒಂದಕ್ಕಿಂತ ಒಂದು ಸೂಪರ್. ತೇಜಸ್ವಿನಿ ಅವರನ್ನು ಶ್ರೀ ಭರತ್ ಅವರು ವರಿಸಿದರು. ಇಬರ ಮದುವೆ ಹೈದರಾಬಾದಿನ ಮಾಧಾಪುರ್ ಹೈಟೆಕ್ಸ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ಇಲ್ಲಿವೆ ನೋಡಿ ಅತ್ಯಾಕರ್ಷಕ ಶೈಲಿಯ ಮಂಟಪ ಹಾಗೂ ಮದುವೆ ಮನೆ ಚಿತ್ರಗಳು.

    ಧನಿಷ್ಠಾ ನಕ್ಷತ್ರ ಕನ್ಯಾ ಲಗ್ನದಲ್ಲಿ ಮದುವೆ

    ಧನಿಷ್ಠಾ ನಕ್ಷತ್ರ ಕನ್ಯಾ ಲಗ್ನದಲ್ಲಿ ಮದುವೆ

    ಬೆಳಗ್ಗೆ 8.45ಕ್ಕೆ ಧನಿಷ್ಠಾ ನಕ್ಷತ್ರ ಕನ್ಯಾಲಗ್ನದಲ್ಲಿ ಶುಭ ಪುಷ್ಕರಾಂಶದಲ್ಲಿ ನಡೆಯಿತು.

    ಕಲಾ ನಿರ್ದೇಶಕ ಆನಂದ್ ಸಾಯಿ ವಿನ್ಯಾಸ

    ಕಲಾ ನಿರ್ದೇಶಕ ಆನಂದ್ ಸಾಯಿ ವಿನ್ಯಾಸ

    ತೆಲುಗು ನಟ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ತೇಜ, ಅಲ್ಲು ಅರ್ಜುನ್ ಹಾಗೂ ಜೂನಿಯರ್ ಎನ್ಟಿಆರ್ ಅವರ ಮದುವೆಗೆ ಮಂಟಪದ ವಿನ್ಯಾಸ ಮಾಡಿದ್ದ ಕಲಾ ನಿರ್ದೇಶಕ ಆನಂದ್ ಸಾಯಿ ಅವರು ತೇಜಸ್ವಿನಿ ಮದುವೆಗೂ ಮಂಟಪದ ವಿನ್ಯಾಸ ಮಾಡಿದ್ದಾರೆ.

    ಗಾಳಿಯಲ್ಲಿ ತೇಲುವಂತೆ ನಿರ್ಮಾಣ

    ಗಾಳಿಯಲ್ಲಿ ತೇಲುವಂತೆ ನಿರ್ಮಾಣ

    ಮದುವೆ ಮಂಟಪವನ್ನು ಗಾಳಿಯಲ್ಲಿ ತೇಲುವಂತೆ ನಿರ್ಮಿಸಲಾಗಿದೆ. ಇದಕ್ಕಾಗಿ 120 ಅಡಿ ಕ್ರೇನ್ ಬಳಸಲಾಗಿದೆ. ಮಂಟಪದ ಅಗಲ 140 ಅಡಿ ಎಂಬ ವಿವರಗಳನ್ನು ನೀಡಿದ್ದಾರೆ ಆನಂದ್ ಸಾಯಿ.

    ವಿಭಿನ್ನ ಶೈಲಿಯ ಮಂಟಪ ವಿನ್ಯಾಸ

    ವಿಭಿನ್ನ ಶೈಲಿಯ ಮಂಟಪ ವಿನ್ಯಾಸ

    ಈ ರೀತಿಯ ವಿಭಿನ್ನ ಶೈಲಿಯ ಮಂಟಪವನ್ನು ನಿರ್ಮಿಸಿರುವುದು ಇದೇ ಮೊದಲು. ಬಾಲಕೃಷ್ಣ ಹಾಗೂ ಅವರ ಪತ್ನಿ ಸಹಕಾರದಿಂದ ಮಾತ್ರ ಇದು ಸಾಧ್ಯವಾಯಿತು ಎನ್ನುತ್ತಾರೆ ಆನಂದ್ ಸಾಯಿ.

    ಮಂಟಪ ನಿರ್ಮಾಣಕ್ಕೆ 350 ಮಂದಿ ಶ್ರಮ

    ಮಂಟಪ ನಿರ್ಮಾಣಕ್ಕೆ 350 ಮಂದಿ ಶ್ರಮ

    ಈ ಮಂಟಪ ನಿರ್ಮಾಣಕ್ಕಾಗಿ ಸುಮಾರು 350 ಮಂದಿ ಕೆಲಸ ಮಾಡಿದ್ದಾರೆ. ಒಂದು ತಿಂಗಳ ಕಾಲ ಶ್ರಮಿಸಿ ಈ ಮಂಟಪ ನಿರ್ಮಿಸಿರುವುದು ವಿಶೇಷ.

    ಅತ್ಯಾಧುನಿಕ ಲೈಟಿಂಗ್ ವ್ಯವಸ್ಥೆ

    ಅತ್ಯಾಧುನಿಕ ಲೈಟಿಂಗ್ ವ್ಯವಸ್ಥೆ

    ಬಂದ ಅತಿಥಿಗಳು ಮದುವೆಯನ್ನು ಕಣ್ತುಂಬಿಕೊಳ್ಳಲು, ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್ ಗೆ ಸಹಕಾರಿಯಾಗಲು ಲೈಟಿಂಗ್ ವ್ಯವಸ್ಥೆಯನ್ನು ಖ್ಯಾತ ಛಾಯಾಗ್ರಾಹಕ ರಾಮ್ ಪ್ರಸಾದ್ ಮಾಡಿದ್ದಾರೆ.

    ಮಂಟಪಕ್ಕೆ ಬ್ಯಾಂಕಾಕ್ ಹೂಗಳು

    ಮಂಟಪಕ್ಕೆ ಬ್ಯಾಂಕಾಕ್ ಹೂಗಳು

    ಮಂಟಪದ ನಿರ್ಮಾಣಕ್ಕೆ ಹೂಗಳನ್ನು ಬ್ಯಾಂಕಾಕ್ ನಿಂದ ತರಿಸಲಾಗಿದೆ. ಮುಂಜಾನೆ ಮತ್ತು ಸಂಜೆ ಹೊತ್ತಲ್ಲಿ ಸಹಜ ಬೆಳಕಿಗಿಂತ ಕೃತಕ ಬೆಳಕು ಮುಖ್ಯ ಅನ್ನಿಸಿದ ಕಾರಣ ಲೈಟಿಂಗ್ ವ್ಯವಸ್ಥೆ ಮಾಡಿದ್ದಾರೆ.

    ಅಭಿಮಾನಿಗಳಿಗೂ ಬಹಿರಂಗ ಆಹ್ವಾನ

    ಅಭಿಮಾನಿಗಳಿಗೂ ಬಹಿರಂಗ ಆಹ್ವಾನ

    ಬಾಲಕೃಷ್ಣ ತಮ್ಮ ಅಭಿಮಾನಿಗಳನ್ನೂ ಮದುವೆಗೆ ಆಹ್ವಾನಿಸಿದ್ದು ವಿಶೇಷ. ಎಲ್ಲರಿಗೂ ಬಹಿರಂಗ ಆಹ್ವಾನ ನೀಡಲಾಗಿತ್ತು.

    ತೇಜಸ್ವಿನಿ ಇಂಜಿನಿಯರಿಂಗ್ ಪದವೀಧರೆ

    ತೇಜಸ್ವಿನಿ ಇಂಜಿನಿಯರಿಂಗ್ ಪದವೀಧರೆ

    ಇನ್ನು ವಧು ತೇಜಸ್ವಿನಿ ಅವರು ಇಂಜಿನಿಯರಿಂಗ್ ಪದವೀಧರೆ. ಮದುವೆ ಗಂಡು ಶ್ರೀ ಭರತ್ ಅವರು ಶೀಘ್ರದಲ್ಲೇ ಯುಎಸ್ ನ ಮಾಸ್ಟರ್ ಡಿಗ್ರಿ ಪಡೆಯಲಿದ್ದಾರೆ.

    ಗೀತಂ ಸಂಸ್ಥಾಪಕ ಮೂರ್ತಿ ಮೊಮ್ಮಗ ಶ್ರೀ ಭರತ್

    ಗೀತಂ ಸಂಸ್ಥಾಪಕ ಮೂರ್ತಿ ಮೊಮ್ಮಗ ಶ್ರೀ ಭರತ್

    ಗಾಂಧಿ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ ಮೆಂಟ್ (GITAM) ಸಂಸ್ಥೆಯ ಸಂಸ್ಥಾಪಕ ಎಂವಿವಿಎಸ್ ಮೂರ್ತಿ ಅವರ ಮೊಮ್ಮಗ ಶ್ರೀ ಭರತ್.

    ನರೇಂದ್ರ ಮೋದಿ ಅವರಿಗೂ ಆಹ್ವಾನ

    ನರೇಂದ್ರ ಮೋದಿ ಅವರಿಗೂ ಆಹ್ವಾನ

    ಈ ಮದುವೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿತ್ತು. ಬಾಲಕೃಷ್ಣ ಅವರು ಸ್ವತಃ ಮೋದಿ ಅವರನ್ನು ಭೇಟಿ ಮಾಡಿ ಮದುವೆಗೆ ಆಹ್ವಾನಿಸಿದ್ದರು. ಆದರೆ ಅವರು ಬರಲು ಸಾಧ್ಯವಾಗಲಿಲ್ಲ.

    ರಜನಿಕಾಂತ್, ಅಮಿತಾಬ್, ಕಮಲ್ ಗೆ ಆಹ್ವಾನ

    ರಜನಿಕಾಂತ್, ಅಮಿತಾಬ್, ಕಮಲ್ ಗೆ ಆಹ್ವಾನ

    ಇನ್ನು ರಜನಿಕಾಂತ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಹಲವರಿಗೆ ವಿವಾಹ ಆಹ್ವಾನ ಪತ್ರಿಕೆ ನೀಡಿ ಮದುವೆಗೆ ಕರೆಯಲಾಗಿತ್ತು.

    ಭದ್ರತೆಗೆ ಸರಿಸುಮಾರು 500 ಮಂದಿ ಪೊಲೀಸ್

    ಭದ್ರತೆಗೆ ಸರಿಸುಮಾರು 500 ಮಂದಿ ಪೊಲೀಸ್

    ಮದುವೆಗೆ ಅಭಿಮಾನಿಗಳು ಸೇರಿದಂತೆ ಅತಿಥಿ ಅಭ್ಯಾಗತರು ಸೇರಿ ಸರಿಸುಮಾರು ಒಂದು ಸಾವಿರ ಮಂದಿ ಆಗಮಿಸಿದ್ದರು. ಭದ್ರತೆಗಾದಿ 500 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು.

    ಮದುವೆಗೆ ಚಿರಂಜೀವಿ ಸಹ ಆಗಮಿಸಿದ್ದರು

    ಮದುವೆಗೆ ಚಿರಂಜೀವಿ ಸಹ ಆಗಮಿಸಿದ್ದರು

    ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಮದುವೆ ಬಳಿಕ ಆಂಧ್ರದಲ್ಲಿ ನಡೆಯುತ್ತಿರುವ ಅದ್ದೂರಿ ಮದುವೆ ಇದಾಗಿದೆ. ತೆಲುಗು ಚಿತ್ರರಂಗದ ಹಲವಾರು ಗಣ್ಯರು ಆಗಮಿಸಿದ್ದರು. ಮದುವೆಗೆ ಚಿರಂಜೀವಿ ಸಹ ಆಗಮಿಸಿದ್ದದ್ದು ವಿಶೇಷ.

    English summary
    Nandamuri Balakrishna daughter Nandamuri Tejaswini's marriage takes place here on Wednesday (Aug 21), an affair to remember. Tejaswini entered wedlock with Sri Bharat at a ceremony held here at Hitex, Madhapur.
    Wednesday, August 21, 2013, 18:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X