»   » ಗಣಿ ನಾಡಿನ ನೈಜ ಘಟನೆಯ 'ಬಳ್ಳಾರಿ ದರ್ಬಾರ್' ಈ ವಾರ ತೆರೆಗೆ

ಗಣಿ ನಾಡಿನ ನೈಜ ಘಟನೆಯ 'ಬಳ್ಳಾರಿ ದರ್ಬಾರ್' ಈ ವಾರ ತೆರೆಗೆ

Posted by:
Subscribe to Filmibeat Kannada

ಸ್ಯಾಂಡಲ್‌ ವುಡ್‌ ನಲ್ಲಿ ಹೊಸಬರ ಸಿನಿಮಾಗಳು ಸಖತ್ತಾಗೆ ಸೌಂಡ್ ಮಾಡುತ್ತಿವೆ. 'ಕರ್ವ', 'ಯೂ ಟರ್ನ್', 'ಮಮ್ಮಿ ಸೇವ್‌ ಮಿ' ಸಿನಿಮಾಗಳ ನಂತರ ಕನ್ನಡ ಚಿತ್ರರಂಗದಲ್ಲಿನ ಸಿನಿಮಾಗಳ ಕಥೆಗಳಲ್ಲೂ ಹೊಸತನ ಕಾಣುತ್ತಿದೆ. ಈಗ ಗಣಿ ತವರು ಬಳ್ಳಾರಿಯಲ್ಲಿ ನಡೆದಂಥ ಒಂದಷ್ಟು ಸತ್ಯ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣ ಮಾಡಿದ ಅಂತದೇ ಸಿನಿಮಾ ಒಂದು ಈ ವಾರ ತೆರೆಕಾಣುತ್ತಿದೆ.[ಬಳ್ಳಾರಿ ದರ್ಬಾರ್ ಸಿನಿಮಾ ಫೋಟೋ ಗ್ಯಾಲರಿ]

ಹೌದು, ಸತ್ಯ ಘಟನೆ ಆಧಾರಿತ ಎಂದು ಹಲವಾರು ಕಾರಣಗಳಿಂದ ಸುದ್ದಿಯಲ್ಲಿರುವ 'ಬಳ್ಳಾರಿ ದರ್ಬಾರ್' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಲನಚಿತ್ರ ಪ್ರಮಾಣೀಕರಣ ಮಂಡಳಿ ಈ ಚಿತ್ರಕ್ಕೆ 'ಎ' ಪ್ರಮಾಣ ಪತ್ರವನ್ನು ನೀಡಿದೆ. ಇನ್ನೂ ಈ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಿರುವುದು ಯಾರು, ಸಿನಿಮಾದಲ್ಲಿ ಯಾರ್ಯಾರು ನಟಿಸಿದ್ದಾರೆ ಎಂಬುದನ್ನು ಮುಂದೆ ಓದಿರಿ.

'ಬಳ್ಳಾರಿ ದರ್ಬಾರ್‌' ಗೆ ಸ್ಮೈಲ್‌ ಶ್ರೀನು ಆಕ್ಷನ್ ಕಟ್

'ಬಳ್ಳಾರಿ ದರ್ಬಾರ್‌' ಗೆ ಸ್ಮೈಲ್‌ ಶ್ರೀನು ಆಕ್ಷನ್ ಕಟ್

ಈ ಹಿಂದೆ ತೂಫಾನ್‌ ಎಂಬ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಿದ್ದ ಸ್ಮೈಲ್‌ ಶ್ರೀನು ರವರೇ 'ಬಳ್ಳಾರಿ ದರ್ಬಾರ್' ಚಿತ್ರ ನಿರ್ದೇಶನ ಮಾಡಿದ್ದಾರೆ. ಸ್ಮೈಲ್ ಶ್ರೀನು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಅವರೇ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಬಳ್ಳಾರಿ ದರ್ಬಾರ್' ಕಥೆ ಏನು?

'ಬಳ್ಳಾರಿ ದರ್ಬಾರ್' ಕಥೆ ಏನು?

ಗಣಿ ದಣಿಗಳ ನಾಡು ಎಂದೇ ಖ್ಯಾತವಾಗಿರುವ ಬಳ್ಳಾರಿ ಹಲವಾರು ಕಾರಣಗಳಿಂದ ರಾಜಕೀಯ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಸದಾ ಸುದ್ದಿಯಲ್ಲಿದೆ. ಗಣಿ ತವರು ಬಳ್ಳಾರಿಯಲ್ಲಿ ನಡೆದಂಥ ಒಂದಷ್ಟು ಘಟನೆಗಳನ್ನು ಆಧಾರವಾಗಿಟ್ಟುಕೊಂಡು 'ಬಳ್ಳಾರಿ ದರ್ಬಾರ್' ಚಿತ್ರ ನಿರ್ಮಿಸಲಾಗಿದೆ.

ಚಿತ್ರಕ್ಕೆ ಎನ್‌. ಶ್ರೀನಿವಾಸ್‌ ಬಂಡವಾಳ

ಚಿತ್ರಕ್ಕೆ ಎನ್‌. ಶ್ರೀನಿವಾಸ್‌ ಬಂಡವಾಳ

ಲವ್‌ ದರ್ಬಾರ್, ಮನಿ ದರ್ಬಾರ್, ಹಾಗೂ ರಿವೇಂಜ್ ದರ್ಬಾರ್ ಅಂಶಗಳೇ ವಿಜೃಂಭಿಸಲಿರುವ 'ಬಳ್ಳಾರಿ ದರ್ಬಾರ್' ಚಿತ್ರಕ್ಕೆ ಎನ್‌.ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ.

ಬಳ್ಳಾರಿ ಚಿತ್ರದಲ್ಲಿ ನಟಿಸಿರುವ ಕಲಾವಿದರು ಯಾರು ಗೊತ್ತೇ?

ಬಳ್ಳಾರಿ ಚಿತ್ರದಲ್ಲಿ ನಟಿಸಿರುವ ಕಲಾವಿದರು ಯಾರು ಗೊತ್ತೇ?

ಪೊಲಾ ಶ್ರೀನಿವಾಸಬಾಬು, ಸಂಪತ್ ಕುಮಾರ್, ಶುಭಶ್ರೀ, ಆಶಿನಿ, ಮಮತರಾವುತ್, ನಯನ, ಗುರುನಾಥ ಮುಂತಾದ ಇತರರ ತಾರಾಬಳಗವಿದೆ. ಚಿತ್ರಕ್ಕೆ ನಾನಿ ಮತ್ತು ಕಾರ್ತಿಕ್ ಸುಬ್ರಮಣಿ ಛಾಯಾಗ್ರಹಣ, ಅರ್ಜುನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಆಂಧ್ರ ಪ್ರದೇಶದ ಚಿತ್ರ ಮಂದಿರಗಳಲ್ಲೂ ರಿಲೀಸ್

ಆಂಧ್ರ ಪ್ರದೇಶದ ಚಿತ್ರ ಮಂದಿರಗಳಲ್ಲೂ ರಿಲೀಸ್

ಗಣಿ ಮಾಫಿಯಾದ ಸುತ್ತಲಿನ ದ್ವೇಷದ ಜೊತೆಗೆ ನವಿರಾದ ಪ್ರೀತಿ, ಅರ್ಟ್ಯಾಕ್ಟ್ ಮಾಡೋ ಹಲವು ಹಾಡುಗಳು ಚಿತ್ರದಲ್ಲಿದೆ. ಚಿತ್ರ ವಿಶೇಷವಾಗಿ ಆಂಧ್ರ ಪ್ರದೇಶದಲ್ಲಿ ತೆರೆ ಕಾಣುತ್ತಿದೆ. ಇನ್ನುಳಿದಂತೆ ಈ ವಾರದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿಯೂ ಹೆಚ್ಚಿನ ಚಿತ್ರ ಮಂದಿರಗಳಲ್ಲಿ 'ಬಳ್ಳಾರಿ ದರ್ಬಾರ್' ಚಿತ್ರ ತೆರೆ ಕಾಣುತ್ತಿದೆ. ಸ್ಮೈಲ್ ಶ್ರೀನು ಸತ್ಯ ಘಟನೆಗಳೊಂದಿಗೆ ಸಂದೇಶ ಹೇಳಲು ಸಿನಿಮಾ ಮೂಲಕ ಹೊರಟಿದ್ದಾರಂತೆ.

English summary
Real incedent based 'Ballari Darbar' Kannada Cinema Releasing this week all over karnataka. And also specialy this movie screening in Andra Pradesh.
Please Wait while comments are loading...

Kannada Photos

Go to : More Photos