»   » 'ರಾಜಕುಮಾರ' ಸಿನಿಮಾ ನೋಡೋರಿಗೆ ಶಿವಣ್ಣನಿಂದ ಬೊಂಬಾಟ್ ಸರ್ಪ್ರೈಸ್!

'ರಾಜಕುಮಾರ' ಸಿನಿಮಾ ನೋಡೋರಿಗೆ ಶಿವಣ್ಣನಿಂದ ಬೊಂಬಾಟ್ ಸರ್ಪ್ರೈಸ್!

Posted by:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಅಪ್ಪು ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋಗೆ ಟಿಕೆಟ್ ಕಾಯ್ದಿರಿಸಿ ಸಿನಿಮಾ ನೋಡೊದಕ್ಕೆ ಕಾದು ಕುಂತಿದ್ದಾರೆ.

ಹೀಗಾಗಿ, ಈ ಶುಕ್ರವಾರ ಎಲ್ಲರ ಕಣ್ಣು 'ರಾಜಕುಮಾರ'ನ ಮೇಲೆ ಬಿದ್ದಿದೆ. ಆದ್ರೆ, 'ರಾಜಕುಮಾರ'ನನ್ನ ನೋಡೋದಕ್ಕಾಗಿ ಥಿಯೇಟರ್ ಗೆ ಹೋದ ಪ್ರೇಕ್ಷಕರಿಗೆ ಡಾ.ಶಿವರಾಜ್ ಕುಮಾರ್ ಕಡೆಯಿಂದ ದೊಡ್ಡ ಸರ್ಪ್ರೈಸ್ ಸಿಗಲಿದೆ ಎನ್ನುವುದು ಲೇಟೆಸ್ಟ್ ನ್ಯೂಸ್. ಏನದು ಸರ್ಪ್ರೈಸ್ ಅಂತ ಮುಂದೆ ನೋಡಿ......

'ರಾಜಕುಮಾರ'ನ ಜೊತೆ ಶಿವಣ್ಣ ಎಂಟ್ರಿ!

'ರಾಜಕುಮಾರ'ನ ಜೊತೆ ಶಿವಣ್ಣ ಎಂಟ್ರಿ!

'ರಾಜಕುಮಾರ' ಸಿನಿಮಾ ಮಾರ್ಚ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ರಾಜಕುಮಾರ' ಬಿಡುಗಡೆಯಾಗುವ ಚಿತ್ರಮಂದಿರಗಳಲ್ಲಿ ಸೆಂಚುರಿ ಸ್ಟಾರ್ ಕೂಡ ಎಂಟ್ರಿ ಕೊಡ್ತಿದ್ದಾರೆ. ಈ ಮೂಲಕ ಮಾರ್ಚ್ 24 ರಂದು ದೊಡ್ಮನೆ ಅಭಿಮಾನಿಗಳಿಗೆ ಡಬಲ್ ಧಮಾಕ

'ಬಂಗಾರ ಸನ್ ಆಫ್ ಬಂಗಾರದ' ಮನುಷ್ಯ ಟ್ರೈಲರ್!

'ಬಂಗಾರ ಸನ್ ಆಫ್ ಬಂಗಾರದ' ಮನುಷ್ಯ ಟ್ರೈಲರ್!

'ರಾಜಕುಮಾರ' ಚಿತ್ರದ ಜೊತೆ ಹ್ರ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಅದೇ ದಿನ ಯ್ಯೂಟ್ಯೂಬ್ ನಲ್ಲೂ ಬಂಗಾರದ ಮನುಷ್ಯ ಟ್ರೈಲರ್ ಲಾಂಚ್ ಆಗಲಿದೆ.

ಅಪ್ಪು-ಶಿವಣ್ಣನ ಜೊತೆ 'ಸಾಹೇಬ' ಟ್ರೈಲರ್

ಅಪ್ಪು-ಶಿವಣ್ಣನ ಜೊತೆ 'ಸಾಹೇಬ' ಟ್ರೈಲರ್

'ರಾಜಕುಮಾರ' ಚಿತ್ರದ ಜೊತೆ ಕೇವಲ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಮಾತ್ರವಲ್ಲ, ಕ್ರೇಜಿಪುತ್ರ ಮನೋರಂಜನ್ ಅಭಿನಯದ ಚೊಚ್ಚಲ ಚಿತ್ರ 'ಸಾಹೇಬ' ಟ್ರೈಲರ್ ಕೂಡ ಪ್ರದರ್ಶನವಾಗಲಿದೆ.

ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರಗಳು

ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರಗಳು

ಅಂದ್ಹಾಗೆ, 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಮತ್ತು 'ಸಾಹೇಬ' ಚಿತ್ರಗಳು ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡುತ್ತಿರುವ ಚಿತ್ರಗಳು. ಒಂದೇ ದಿನ ಸೆಟ್ಟೇರಿದ್ದ ಇವೆರೆಡು ಚಿತ್ರಗಳು ಒಂದೇ ದಿನ ಟೀಸರ್ ಬಿಡುಗಡೆ ಮಾಡಿದ್ದವು. ಈಗ ಒಂದೇ ದಿನ ಟ್ರೈಲರ್ ಕೂಡ ರಿಲೀಸ್ ಮಾಡುತ್ತಿದ್ದು, 'ರಾಜಕುಮಾರ' ಜೊತೆ ಬರ್ತಿದೆ.

ಚಿತ್ರಪ್ರೇಮಿಗಳಿಗೆ ಹಬ್ಬ!

ಚಿತ್ರಪ್ರೇಮಿಗಳಿಗೆ ಹಬ್ಬ!

ಯೋಗಿ ಜಿ ನಿರ್ದೇಶನ ಮಾಡುತ್ತಿರುವ ಚಿತ್ರ' ಬಂಗಾರ ಸನ್ ಆಫ್ ಬಂಗಾರದ ಮನುಷ್ಯ'. ಭರತ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ 'ಸಾಹೇಬ. ಇದರ ಜೊತೆಗೆ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಜಕುಮಾರ' ಸಿನಿಮಾ. ಒಟ್ನಲ್ಲಿ, ಈ ಮೂವರನ್ನ ಒಂದೇ ಸ್ಕ್ರೀನ್ ನಲ್ಲಿ ನೋಡುವುದು ಹಬ್ಬನೇ ಸರಿ.

English summary
'Bangara son of Bangarada Manushya' Trailer Releasing with Raajakumara Movie. Puneeth Rajkumar Starrer 'Raajakumara' Movie Releasing on March 24th all over karnataka.
Please Wait while comments are loading...

Kannada Photos

Go to : More Photos