twitter
    For Quick Alerts
    ALLOW NOTIFICATIONS  
    For Daily Alerts

    'ಐರಾವತ' ದರ್ಶನ್ ಮನೆ ಮುಂದೆ ಜೆಸಿಬಿ ಘರ್ಜನೆ ಸದ್ಯಕ್ಕಿಲ್ಲ!

    By Harshitha
    |

    ರಾಜಕಾಲುವೆ ಒತ್ತುವರಿ ಹೆಸರಿನಲ್ಲಿ ಬೆಂಗಳೂರಿನ ಹಲವೆಡೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜೆಸಿಬಿ ಘರ್ಜನೆ ಮಾಡಿದ ರೀತಿ ನೋಡಿದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೂ ಜೆಸಿಬಿ ನುಗ್ಗುವುದು ಖಚಿತ ಅಂತ್ಲೇ ಎಲ್ಲರೂ ಭಾವಿಸಿದ್ರು.

    ಕಷ್ಟ ಪಟ್ಟು ದುಡಿದ ಹಣದಲ್ಲಿ ಮನೆ ಕಟ್ಟಿ, ಯಾರೋ ಮಾಡಿದ ಎಡವಟ್ಟಿಗೆ ಬೆಲೆ ತೆರಬೇಕಾದರೂ, 'ಬಿಬಿಎಂಪಿ ಯವರಿಗೆ ಸಹಕರಿಸುತ್ತೇನೆ' ಅಂತ್ಹೇಳಿ ದರ್ಶನ್ ಉದಾರತೆ ಮೆರೆದಿದ್ದರು.

    ಇದೀಗ ಬಂದಿರುವ ಮಾಹಿತಿ ಪ್ರಕಾರ, ದರ್ಶನ್ ಮನೆ ಮುಂದೆ ಜೆಸಿಬಿ ಬಂದು ನಿಲ್ಲಬೇಕಾದರೆ ಕನಿಷ್ಟ ಅಂದ್ರೂ ಒಂದು ವಾರ ಬೇಕು. ಬಾರದೇ ಹೋದರೂ ಅಚ್ಚರಿ ಇಲ್ಲ.! [ನಟ ದರ್ಶನ್ ಗೂ ಬಿಬಿಎಂಪಿ ರಾಜಕಾಲುವೆ ಒತ್ತುವರಿ ಬಿಸಿ ತಟ್ಟಿತೆ.?]

    BBMP Demolition drive: Temporary relief for Darshan

    ಇಷ್ಟು ದಿನ ಕಂದಾಯ ಇಲಾಖೆಯ ವರದಿಯೇ ಅಂತಿಮ ಅಂತ ಜನ ಸಾಮಾನ್ಯರ ಮನೆಗಳನ್ನೆಲ್ಲಾ ನಿರ್ದಾಕ್ಷಿಣ್ಯವಾಗಿ ಕೆಡವಿದ ಬಿಬಿಎಂಪಿ ಇದೀಗ ಗಣ್ಯರ ಮನೆ ನೆಲಸಮ ಮಾಡಲು ಜಂಟಿ ಸರ್ವೆ ವರದಿ ಎದುರುನೋಡುತ್ತಿದೆ. [ರಾಜಕಾಲುವೆ ಒತ್ತುವರಿ ತೆರವಿನಲ್ಲೂ ಪ್ರಭಾವದ ಒಳಸುಳಿ]

    ಒರಾಯನ್ ಮಾಲ್, ಮಾನ್ಯತಾ ಟೆಕ್ ಪಾರ್ಕ್, ಶಾಮನೂರು ಶಿವಶಂಕರಪ್ಪ ರವರಿಗೆ ಸೇರಿದ ಎಸ್.ಎಸ್.ಆಸ್ಪತ್ರೆ ಕೂಡ ರಾಜಕಾಲುವೆ ಭಾಗದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಗೊತ್ತಾಗಿದ್ದೇ ತಡ, ಕಾರ್ಯಚರಣೆಗೆ ಬಿಬಿಎಂಪಿ ಫುಲ್ ಸ್ಟಾಪ್ ಇಟ್ಟಿದೆ.

    ಯಾಕ್ ಸರ್ ಹೀಗೆ ಅಂತ ಕೇಳಿದ್ರೆ, 'ಜಂಟಿ ಸರ್ವೆ ವರದಿ ಬಂದ್ಮೇಲೆ ಮುಂದಿನ ನಡೆ' ಅಂತ ಹೇಳ್ತಿದ್ದಾರೆ. [ಬಿಬಿಎಂಪಿ ತೆರವು ಕಾರ್ಯಾಚರಣೆ ಬಂದ್ ಮಾಡಿದ್ದೇಕೆ?]

    ಜಂಟಿ ಸರ್ವೆ ಶುರು ಆಗುವುದು ಯಾವಾಗ? ಮುಗಿಯುವುದು ಯಾವಾಗ? ದೇವರೇ ಬಲ್ಲ.! ಒಂದಂತೂ ಸ್ಪಷ್ಟ, ದರ್ಶನ್ ಮನೆ ಮುಂದೆ ಜೆಸಿಬಿ ಘರ್ಜನೆ ಸದ್ಯಕ್ಕೆ ಇಲ್ಲ.

    English summary
    All of a sudden BBMP has stopped Demolition Drive. Since, BBMP officers are waiting for the report of Joint Survey with Revenue Department, Kannada Actor Darshan has got temporary relief.
    Tuesday, August 23, 2016, 18:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X