»   » ಬೆಳ್ಳಿ ಸಿನಿಮಾದಲ್ಲಿ 'ರಂಗಿತರಂಗ' ತಂಡದ ಬೆಳ್ಳಿ ಮಾತು

ಬೆಳ್ಳಿ ಸಿನಿಮಾದಲ್ಲಿ 'ರಂಗಿತರಂಗ' ತಂಡದ ಬೆಳ್ಳಿ ಮಾತು

Posted by:
Subscribe to Filmibeat Kannada

ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಪ್ರತಿ ಶನಿವಾರ ಹಮ್ಮಿಕೊಳ್ಳುವ 'ಬೆಳ್ಳಿ ಸಿನಿಮಾ-ಬೆಳ್ಳಿಮಾತು ಕಾರ್ಯಕ್ರಮದಲ್ಲಿ ಈ ಶನಿವಾರ ಹೊಸಬರ 'ರಂಗಿತರಂಗ' ಸೌಂಡ್ ಮಾಡಲಿದೆ.

ನವ ನಿರ್ದೇಶಕ ಅನುಪ್ ಭಂಡಾರಿ ಆಕ್ಷನ್-ಕಟ್ ಹೇಳಿರುವ ಹೊಸಬರ 'ರಂಗಿತರಂಗ' ಭರ್ಜರಿ 200ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಭ್ರಮದಲ್ಲಿ ಈ ಸಿನಿಮಾ ಬೆಳ್ಳಿ ಮಾತು ಕಾರ್ಯಕ್ರಮಕ್ಕೆ ಈ ಬಾರಿ ಆಯ್ಕೆ ಆಗಿದೆ.[ಚಿತ್ರಗಳು: ಬೆಳ್ಳಿ ಹೆಜ್ಜೆಯಲ್ಲಿ ಡಾ.ಶಿವಣ್ಣನ ಮನದಾಳದ ಮಾತು]ಅಂದಹಾಗೆ ಡಿಸೆಂಬರ್ 26 ರಂದು ಶನಿವಾರ ಸಂಜೆ 4.00 ಘಂಟೆಗೆ ಬೆಂಗಳೂರಿನ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸುವ 'ಬೆಳ್ಳಿ ಸಿನಿಮಾ-ಬೆಳ್ಳಿಮಾತು' ಕಾರ್ಯಕ್ರಮದಲ್ಲಿ 'ರಂಗಿತರಂಗ' ಚಿತ್ರ ಪ್ರದರ್ಶನಗೊಳ್ಳಲಿದೆ.[ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಅಜ್ಜ ಆದಾಗ..!]


ಈ ವಾರದ ಬೆಳ್ಳಿ ಮಾತನ್ನು 'ರಂಗಿತರಂಗ' ಚಿತ್ರದ ಕಾರ್ಯಕಾರಿ ನಿರ್ಮಾಪಕ ಸುಧಾಕರ್ ಭಂಡಾರಿ ಅವರು ನಡೆಸಿಕೊಡಲಿದ್ದಾರೆ. ಚಿತ್ರದ ನಾಯಕ ನಟ ನಿರೂಪ್ ಭಂಡಾರಿ, ನಾಯಕ ನಟಿ ರಾಧಿಕಾ ಚೇತನ್, ಚಿತ್ರದ ನಿರ್ಮಾಪಕ ಹೆಚ್. ಕೆ. ಪ್ರಕಾಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

English summary
Kannada Movie 'RangiTaranga': 'Belli Cinema Belli Maathu' movie shows and discussions by Karnataka Chalanachitra Academy is organised in Chamundeshwari Theater, Millers Road, Bengaluru on December 26th, Saturday at 4 o clock.
Please Wait while comments are loading...

Kannada Photos

Go to : More Photos