»   » ಕರ್ನಾಟಕದಲ್ಲಿ 'ಬಾಹುಬಲಿ' ಬಿಡುಗಡೆ ಡೌಟ್: ಏಪ್ರಿಲ್ 28 ರಂದು ಬೆಂಗಳೂರು ಬಂದ್!

ಕರ್ನಾಟಕದಲ್ಲಿ 'ಬಾಹುಬಲಿ' ಬಿಡುಗಡೆ ಡೌಟ್: ಏಪ್ರಿಲ್ 28 ರಂದು ಬೆಂಗಳೂರು ಬಂದ್!

Written by: ಒನ್ಇಂಡಿಯಾ ಕನ್ನಡ ವಾರ್ತೆ
Subscribe to Filmibeat Kannada

ಕರ್ನಾಟಕದಲ್ಲಿ ಏಪ್ರಿಲ್ 28 ರಂದು ಬಹು ನಿರೀಕ್ಷಿತ ಚಿತ್ರ 'ಬಾಹುಬಲಿ-2' ಬಿಡುಗಡೆ ಆಗುವುದೇ ಅನುಮಾನ. ಅದಕ್ಕೆಲ್ಲ ಕಾರಣ, ಕನ್ನಡಿಗರು ಹಾಗೂ ಕನ್ನಡ ಪರ ಹೋರಾಟಗಾರರ ವಿರುದ್ಧ ಬಾಯಿಗೆ ಬಂದಂತೆ ನಿಂದಿಸಿರುವ 'ಬಾಹುಬಲಿ-2' ಚಿತ್ರದ ಕಟ್ಟಪ್ಪನ ಪಾತ್ರಧಾರಿ ಸತ್ಯರಾಜ್.!['ಕನ್ನಡಿಗರು ಮುಚ್ಕೊಂಡ್ ಕೂತ್ಕೊಳ್ಳಿ': ಫೇಸ್ ಬುಕ್ನಲ್ಲಿ ತೆಲುಗು ಸಿನಿ'ಭಕ್ತ'ರ ಗೇಲಿ.!]

ಸತ್ಯರಾಜ್ ಬಹಿರಂಗವಾಗಿ ಕನ್ನಡಿಗರ ಕುರಿತು ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಬಿಡುಗಡೆಗೆ ಅವಕಾಶ ನೀಡಲ್ಲ ಎಂಬುದು ಕನ್ನಡಿಗರ ಕಟ್ಟಪ್ಪಣೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದರೂ, ಇಲ್ಲಿಯವರೆಗೂ ಸತ್ಯರಾಜ್ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದರಿಂದ ಏಪ್ರಿಲ್ 28 ರಂದು ('ಬಾಹುಬಲಿ-2' ಬಿಡುಗಡೆ ಆಗುವ ದಿನ) 'ಬೆಂಗಳೂರು ಬಂದ್' ಆಗಲಿದೆ. ಮುಂದೆ ಓದಿ....

ಏಪ್ರಿಲ್ 28 ರಂದು 'ಬೆಂಗಳೂರು ಬಂದ್.. ಬಂದ್.. ಬಂದ್'

ಏಪ್ರಿಲ್ 28 ರಂದು 'ಬೆಂಗಳೂರು ಬಂದ್.. ಬಂದ್.. ಬಂದ್'

ಏಪ್ರಿಲ್ 28 ರಂದು 'ಬೆಂಗಳೂರು ಬಂದ್' ಮಾಡಲು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.[ಕನ್ನಡಿಗರೇ... ತೆಲುಗಿನವರ 'ವಿಶಾಲ ಹೃದಯ'ಕ್ಕೆ ನಿಮ್ಮ ಪ್ರತಿಕ್ರಿಯೆ ಏನು.?]

ಬಂದ್ ಆದರೆ 'ಬಾಹುಬಲಿ' ಬಿಡುಗಡೆ ಎಲ್ಲಿ.?

ಬಂದ್ ಆದರೆ 'ಬಾಹುಬಲಿ' ಬಿಡುಗಡೆ ಎಲ್ಲಿ.?

ಏಪ್ರಿಲ್ 28 ರಂದು ಬೆಂಗಳೂರು ಬಂದ್ ಆದರೆ, ಬೆಂಗಳೂರಿನ ಬಹುತೇಕ ಮಾಲ್ ಗಳಿಗೆ ಬೀಗ ಬೀಳುವುದು ಗ್ಯಾರೆಂಟಿ. ಅಲ್ಲಿಗೆ, ಅವತ್ತು ಬೆಂಗಳೂರಿನಲ್ಲಿ 'ಬಾಹುಬಲಿ' ದರ್ಶನ ಸಾಧ್ಯವಿಲ್ಲ.[ಕಟ್ಟಪ್ಪ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಬಿಡುಗಡೆ ಇಲ್ಲ.! ಇದು ಕನ್ನಡಿಗರ ಕಟ್ಟಪ್ಪಣೆ.!]

ಥಿಯೇಟರ್ ಮಾಲೀಕರಿಗೆ ಎಚ್ಚರಿಕೆ.!

ಥಿಯೇಟರ್ ಮಾಲೀಕರಿಗೆ ಎಚ್ಚರಿಕೆ.!

'ಬಾಹುಬಲಿ-2' ಚಿತ್ರ ಪ್ರದರ್ಶನ ಮಾಡದಿರುವಂತೆ ಥಿಯೇಟರ್ ಮಾಲಿಕರ ಬಳಿ ಕನ್ನಡ ಪರ ಸಂಘಟನೆಗಳು ಮನವಿ ಮಾಡಿದೆ. ಬಂದ್ ಅಂತ ಘೋಷಿಸಿದ ಮೇಲೂ 'ಬಾಹುಬಲಿ-2' ಚಿತ್ರ ಪ್ರದರ್ಶನ ಮಾಡಿದರೆ, ಉಗ್ರ ಹೋರಾಟ ಮಾಡುವುದಾಗಿ ಕನ್ನಡ ಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.[ಸುದೀಪ್ ಚಿತ್ರಗಳನ್ನ ಬ್ಯಾನ್ ಮಾಡಿ: ಕನ್ನಡಿಗರಿಗೆ 'ಟ್ರೋಲ್ ಟಾಲಿವುಡ್' ಲೇವಡಿ.!]

ಸತ್ಯರಾಜ್ ವಿರುದ್ಧ ಮಾತ್ರ ಪ್ರತಿಭಟನೆ

ಸತ್ಯರಾಜ್ ವಿರುದ್ಧ ಮಾತ್ರ ಪ್ರತಿಭಟನೆ

''ನಮ್ಮ ಹೋರಾಟ 'ಬಾಹುಬಲಿ-2' ಚಿತ್ರದ ವಿರುದ್ಧ ಅಲ್ಲ. ಕನ್ನಡಿಗರನ್ನ ನಿಂದಿಸಿರುವ ಸತ್ಯರಾಜ್ ವಿರುದ್ಧ ಮಾತ್ರ. ಸತ್ಯರಾಜ್ ಕ್ಷಮೆ ಕೇಳುವವರೆಗೂ ಕರ್ನಾಟಕದಲ್ಲಿ 'ಬಾಹುಬಲಿ-2' ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ'' ಎನ್ನುತ್ತಾರೆ ವಾಟಾಳ್ ನಾಗರಾಜ್.['ಟಾಲಿವುಡ್ ಟ್ರೋಲ್'ಗಳ ವಿರುದ್ಧ ತೊಡೆ ತಟ್ಟಿ ನಿಂತ ಫಿಲ್ಮಿಬೀಟ್ ಕನ್ನಡ ಓದುಗರು]

ಏಪ್ರಿಲ್ 28 ರಂದು ಪ್ರತಿಭಟನಾ ರ್ಯಾಲಿ

ಏಪ್ರಿಲ್ 28 ರಂದು ಪ್ರತಿಭಟನಾ ರ್ಯಾಲಿ

ಏಪ್ರಿಲ್ 28 ರಂದು ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಲು ಕನ್ನಡ ಪರ ಸಂಘಟನೆಗಳು ಮುಂದಾಗಿವೆ.

English summary
Pro-Kannada organisations have called for Bengaluru Bandh on April 28th protesting against the release of 'Baahubali-2' in the state.
Please Wait while comments are loading...

Kannada Photos

Go to : More Photos