»   » ಟಾರ್ಗೆಟ್ ಬೆಂಗಳೂರಿಗೆ ತಾರೆಗಳು ತಳಮಳ

ಟಾರ್ಗೆಟ್ ಬೆಂಗಳೂರಿಗೆ ತಾರೆಗಳು ತಳಮಳ

Posted by:
Subscribe to Filmibeat Kannada

ಹೊಸ ವರ್ಷದ ಸಂಭ್ರಮಾಚರಣೆಗೆ ತಯಾರಿ ನಡೆಸಬೇಕಾಗಿದ್ದ ಗಾರ್ಡನ್ ಸಿಟಿ ಬೆಂಗಳೂರು ಜನತೆ 'ಬಾಂಬ್ ಬ್ಲಾಸ್ಟ್' ನಿಂದ ಬೆದರಿದ್ದಾರೆ. ಚರ್ಚ್ ಸ್ಟ್ರೀಟ್ ನಲ್ಲಿ ಭಾನುವಾರ ರಾತ್ರಿ ನಡೆದ ಬಾಂಬ್ ಸ್ಫೋಟಕ್ಕೆ ನಮ್ಮ ಸ್ಯಾಂಡಲ್ ವುಡ್ ಮಂದಿ ಕೂಡ ಆತಂಕಕ್ಕೊಳಗಾಗಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ತೆರೆಮೇಲೆ ಎಲ್ಲಾ ಸ್ಟಂಟ್ ಗಳನ್ನ ಮಾಡುವ ನಮ್ಮ ಗಾಂಧಿನಗರದ ಮಂದಿ, ರಿಯಲ್ ಬ್ಲಾಸ್ಟ್ ಬಗ್ಗೆ ಗಾಬರಿಗೊಂಡು, ಟ್ಟಿಟ್ಟರ್ ಹಾಗೂ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಯಾರ್ಯಾರು ಏನು ಹೇಳಿದ್ದಾರೆ....ಮುಂದೆ ಓದಿ....

ರಾಗಿಣಿ

''ಬೆಂಗಳೂರು ಬ್ಲಾಸ್ ಬಗ್ಗೆ ಈಗಷ್ಟೆ ಗೊತ್ತಾಯ್ತು. ಶಾಕಿಂಗ್. ಎಲ್ಲರು ಸೇಫಾಗಿ ಮನೆಯಲ್ಲೇ ಇರಿ'' - ರಾಗಿಣಿ

ಹರಿಪ್ರಿಯಾ

''ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಬ್ಲಾಸ್ಟ್ ಮತ್ತು ಏರ್ ಏಷಿಯಾ ವಿಮಾನ ನಾಪತ್ತೆ. ಎರಡೂ ಒಂದೇ ದಿನ ಘಟಿಸಿರುವುದು ಆತಂಕಕಾರಿ. ಚರ್ಚ್ ಸ್ಟ್ರೀಟ್ ಗೆ ಎರಡು ದಿನಗಳ ಹಿಂದೆಯಷ್ಟೇ ಭೇಟಿ ನೀಡಿದ್ದೆ. ಜೀವನ ಅನಿಶ್ಚಿತ''- ಹರಿಪ್ರಿಯಾ

ಪಾರುಲ್ ಯಾದವ್

''ಬಾಂಬ್ ಬ್ಲಾಸ್ಟ್ ಆದ ಸ್ಥಳ, ನಾನಿರುವ ಹೋಟೇಲ್ ಗೆ ತೀರಾ ಹತ್ತಿರ. ಯಾರೂ ತಮ್ಮ ಆಪ್ತರನ್ನ ಕಳೆದುಕೊಂಡಿಲ್ಲ. ಪ್ರಾಣಹಾನಿ ಸಂಭವಿಸಿಲ್ಲ ಅಂತ ಭಾವಿಸುತ್ತೇನೆ. ಇಂತಹ ಘಟನೆಗಳು ಅಮಾನವೀಯ.'' - ಪಾರುಲ್ ಯಾದವ್

ಖುಷ್ಬು

''ಸಮಾಜದಲ್ಲಿ ಎಂತೆಂಥ ಹುಚ್ಚರಿದ್ದಾರೆ. ಅಮಾಯಕ ಜನರನ್ನ ಟಾರ್ಗೆಟ್ ಮಾಡುವುದರಿಂದ ಅವರಿಗೆ ಸಿಗುವ ಲಾಭವಾದರೂ ಏನು?''- ಖುಷ್ಬು

ರಾಧಿಕಾ ಶರತ್ ಕುಮಾರ್

''ಏರ್ ಏಷಿಯಾ ವಿಮಾನ ನಾಪತ್ತೆ ಮತ್ತು ಬೆಂಗಳೂರು ಬ್ಲಾಸ್ಟ್ ಸುದ್ದಿಗಳು ಆತಂಕ ಮೂಡಿಸಿದೆ. 2014 ದುಖಃದಿಂದ ಕೊನೆಗೊಳ್ಳುತ್ತಿರುವುದು ಬೇಸರದ ಸಂಗತಿ.'' ರಾಧಿಕಾ ಶರತ್ ಕುಮಾರ್.

ಮಾಳವಿಕಾ ಅವಿನಾಶ್

''ಚರ್ಚ್ ಸ್ಟೀಟ್ ಬಳಿ ನಡೆದಿರುವ ಸ್ಫೋಟದ ಸುದ್ದಿ ಕೇಳಿ ಬೇಸರ ಆಯ್ತು. ಜೊತೆಗೆ ಸಿಟ್ಟೂ ಬಂತು. ದೇವರು ಎಲ್ಲರನ್ನೂ ಕಾಪಾಡಲಿ'' - ಮಾಳವಿಕಾ ಅವಿನಾಶ್.

ಜಗ್ಗೇಶ್

''ಉಗ್ರಗಾಮಿಗಳು ಟ್ವೀಟ್ ಮಾಡಿದಾಗಲೇ ಇಂತಹ ಘಟನೆ ನಡೆಯಬಹುದೆಂದು ಜನಸಾಮಾನ್ಯನಾಗಿ ನಾನು ಊಹಿಸಿದ್ದೆ. ಆದ್ರೆ ಅದನ್ನ ಪೊಲೀಸರು ಯಾಕೆ ನಿರ್ಲಕ್ಷಿಸಿದರು?''- ಜಗ್ಗೇಶ್

English summary
Bomb Blast in Bengaluru has created panic among the Celebrities too. Few Celebrities have taken their Twitter account to express their grief.
Please Wait while comments are loading...

Kannada Photos

Go to : More Photos