twitter
    For Quick Alerts
    ALLOW NOTIFICATIONS  
    For Daily Alerts

    2016ರ 'ಅತ್ಯುತ್ತಮ ಪ್ರಯೋಗಾತ್ಮಕ' ಚಿತ್ರದ ಕಿರೀಟ ಯಾರಿಗೆ?

    By Bharath Kumar
    |

    ಈ ವರ್ಷ ಪ್ರಯೋಗಾತ್ಮಕ ಚಿತ್ರಗಳು ತುಂಬ ಬಂದವು. 'ರಾಮಾ ರಾಮಾ ರೇ..', 'ಕರ್ವ', 'ಯೂ ಟರ್ನ್‌', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ತಿಥಿ' - ಹೀಗೆ ಸಾಕಷ್ಟು ಗುರುತಿಸಬಹುದು.

    ಈ ಎಲ್ಲ ಚಿತ್ರಗಳು ಸ್ಟಾರ್ ನಟ, ಸ್ಟಾರ್ ನಿರ್ದೇಶಕನ ಸಿನಿಮಾ ಎನ್ನುವುದಕ್ಕಿಂತ ಗಟ್ಟಿಯಾದ ಕಥೆ, ಚಿತ್ರಕಥೆ ಹಾಗೂ ಮೇಕಿಂಗ್ ಮೂಲಕ ಗಮನ ಸೆಳೆದ ಚಿತ್ರಗಳು. ಯಾವುದೇ ಆಡಂಬರ, ಅಬ್ಬರಯಿಲ್ಲದೇ ಪ್ರೇಕ್ಷಕರನ್ನ ರಂಜಿಸಿದ ಚಿತ್ರಗಳು.[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

    ಕಮರ್ಷಿಯಲ್ ಎಲಿಮೆಂಟ್ಸ್ ಗಳು ಎನಿಸಿಕೊಳ್ಳುವ ಅಂಶಗಳನ್ನ ಬಿಟ್ಟು ತಯಾರಾಗಿರುವ ಚಿತ್ರಗಳು ಇದಾಗಿರುವುದರಿಂದ ಇವುಗಳನ್ನ ಪ್ರಯೋಗತ್ಮಾಕ ಸಿನಿಮಾ ಎನ್ನಬಹುದು ಅಂತ ಎನಿಸಿದರು, ಈ ಚಿತ್ರಗಳು ಸಾಮಾನ್ಯ ಅಂಶಗಳನ್ನ ಬಿಟ್ಟು, ಒಂದೊಳ್ಳೆ ಸಧಾಭಿರುಚಿಯನ್ನ ನೀಡಿವೆ ಎಂಬುದು ಮಾತ್ರ ಸುಳ್ಳಾಲ್ಲ.?

    ಇಂತಹ ಚಿತ್ರಗಳ ಪೈಕಿ ಈ ವರ್ಷ ಕನ್ನಡದಲ್ಲಿ ಬಿಡುಗಡೆಯಾದ ಪ್ರಯೋಗಾತ್ಮಕ ಸಿನಿಮಾಗಳ ವಿವರಗಳನ್ನ ಕೆಳಗಿರುವ ಸ್ಲೈಡ್ ಗಳಲ್ಲಿ ನೀಡಲಾಗಿದೆ. ಯಾವುದು ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರವೆಂದು ನಿಮ್ಮ ಅಭಿಪ್ರಾಯ ತಿಳಿಸಿ.

    ದೇಶ ಮೆಚ್ಚಿದ 'ತಿಥಿ'

    ದೇಶ ಮೆಚ್ಚಿದ 'ತಿಥಿ'

    ಈ ವರ್ಷ ಕನ್ನಡದಲ್ಲಿ ಹೊಸ ಅಲೆಯನ್ನ ಸೃಷ್ಠಿಸಿದ ಚಿತ್ರ 'ತಿಥಿ'. ವೃತ್ತಿ ಕಲಾವಿದರಲ್ಲದ ವ್ಯಕ್ತಿಗಳಿಂದ ಅಭಿನಯ ಮಾಡಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿದ ಈ ಚಿತ್ರ, 2016 ಬಹುದೊಡ್ಡ ಪ್ರಯೋಗ. ಸಾವುಗೀಡಾದ ವ್ಯಕ್ತಿಯ ತಿಥಿ ಮಾಡುವ ಸಂಪ್ರದಾಯ ಸುತ್ತಾ ನಡೆಯುತ್ತ ಕಥೆ ನೈಜವಾಗಿ ತೋರಿಸಲಾಗಿತ್ತು. ಟೈಟಲ್ ನಿಂದ ಹಿಡಿದು, ಕಥೆ, ಸಂಗೀತ, ಸಂಭಾಷಣೆ, ಕಲಾವಿದರು, ಹೀಗೆ ಎಲ್ಲವೂ ನಿರೀಕ್ಷೆಗೂ ಮೀರಿದ್ದು. ಇದೆಲ್ಲದರ ಪರಿಣಾಮ ವರ್ಷದ ಅತ್ಯುತ್ತಮ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಯ ಹಿರಿಮೆ. ರಾಮ್ ರೆಡ್ಡಿ ನಿರ್ದೇಶನ ಮಾಡಿದ್ದ, ಈ ಚಿತ್ರಕ್ಕೆ ಈರೇಗೌಡ ಸಂಭಾಷಣೆ ಬರೆದಿದ್ದರು. ಗಡ್ಡಪ್ಪ, ಸೆಂಚುರಿ ಗೌಡ, ತಮ್ಮಣ್ಣ, ಅಭಿ ಹಾಗೂ ಪೂಜಾ ಎಂಬ ನೂತನ ಕಲಾವಿದರ ಪರಿಚಯಕ್ಕೆ 'ತಿಥಿ' ವೇದಿಕೆಯಾಯಿತು.[2016 ರಲ್ಲಿ ಭರವಸೆ ಮೂಡಿಸಿದ ಯುವನಟ ಯಾರು? ]

    ಅಪರೂಪದ 'ಅಪೂರ್ವ'

    ಅಪರೂಪದ 'ಅಪೂರ್ವ'

    ಕನ್ನಡದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಗಗಳನ್ನ ಮಾಡುತ್ತಾ ಬಂದಿದ್ದ ಕ್ರೇಜಿಸ್ಟಾರ್ ರವಿಚಂದ್ರನ್, ಈ ವರ್ಷ 'ಅಪೂರ್ವ' ಎಂಬ ಹೊಸ ಅಭಿರುಚಿಯ ಚಿತ್ರವನ್ನ ನೀಡಿದರು. ಚಿತ್ರದ ಶೇಕಾಡ 90 ರಷ್ಟು ಭಾಗವನ್ನ ಲಿಫ್ಟ್ ವೊಂದರಲ್ಲಿ ಚಿತ್ರೀಕರಣ ಮಾಡಿ ಅಚ್ಚರಿ ಉಂಟು ಮಾಡಿದರು. ಅಷ್ಟೆ ಅಲ್ಲದೆ, 'ಅಪೂರ್ವ' ಚಿತ್ರಕ್ಕೆ ನಿರ್ದೇಶನ, ನಿರ್ಮಾಣ, ಸಂಗೀತ, ಕಥೆ, ಚಿತ್ರಕಥೆ, ಸಂಕಲನ, ನಟನೆ ಸೇರಿದಂತೆ 'ಒನ್ ಮ್ಯಾನ್ ಶೋ' ಆಗಿ ಕೆಲಸ ಮಾಡಿದ್ದು ಹೊಸ ಇತಿಹಾಸವಾಯಿತು.[2016ರ ರಿಮೇಕ್ ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು? ]

    ಅಭಿಮಾನದ 'ನಾಗರಹಾವು'

    ಅಭಿಮಾನದ 'ನಾಗರಹಾವು'

    ಡಾ.ವಿಷ್ಣುವರ್ಧನ್ ಅವರ 201ನೇ ಚಿತ್ರವೆಂದು ಬಿಂಬಿತವಾದ 'ನಾಗರಹಾವು', ಈ ವರ್ಷ ಗಮನ ಸೆಳೆದ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಕೋಡಿ ರಾಮಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ರಮ್ಯಾ, ದಿಗಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ, ಈ ಸಿನಿಮಾ ಹೆಚ್ಚು ಸುದ್ದಿ ಮಾಡಿದ್ದು, ಡಾ.ವಿಷ್ಣುವರ್ಧನ್ ಅವರನ್ನ ಮತ್ತೆ ತೆರೆಮೇಲೆ ಮೂಡಿಸಿದ ವಿಚಾರಕ್ಕೆ. ಹೌದು, ಭಾರತೀಯ ಚಿತ್ರರಂಗದಲ್ಲೇ ವಿಧಿವಶರಾದ ನಟನನ್ನ ಹೆಡ್ ರೀಪ್ಲೆಸ್ ಮೆಂಟ್ ತಂತ್ರಜ್ಞಾನದ ಮೂಲಕ, 10 ನಿಮಿಷಗಳ ಕಾಲ ಬೆಳ್ಳಿತೆರೆಯ ಮೇಲೆ ಬಿಂಬಿಸಿದ್ದು ಈ ಚಿತ್ರದ ಬಹುದೊಡ್ಡ ಸಾಧನೆ.

    ಜನ ಮೆಚ್ಚಿದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’

    ಜನ ಮೆಚ್ಚಿದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’

    ಕಮರ್ಷಿಯಲ್ ಚಿತ್ರಗಳ ಅಬ್ಬರದಲ್ಲಿ ಮುಳುಗಿ ಹೋಗಿರುವ ಪ್ರೇಕ್ಷಕರಿಗೆ ಒಂದು ಸಧುಭಿರುಚಿಯ ಮನರಂಜನೆ ನೀಡಿದ್ದು 'ಗೋಧಿಬಣ್ಣ ಸಾಧರಣ ಮೈಕಟ್ಟು'. ಹೇಮಂತ್ ರಾವ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಅನಂತ್ ನಾಗ್, ರಕ್ಷಿತ್ ಶೆಟ್ಟಿ, ಶೃತಿ ಹರಿಹರನ್ ಅಭಿನಯಿಸಿದ್ದರು. ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಹೇಮಂತ್ ರಾವ್, ತಂದೆ-ಮಗನ ಸಂಬಂಧವನ್ನಿಟ್ಟು, ಒಂದು ಭಾವಾನತ್ಮಕ ಚಿತ್ರವನ್ನ ನೀಡಿದ್ದರು.[ಗೂಗಲ್ ನಲ್ಲಿ ವರ್ಷವಿಡೀ 'ಸೌಂಡ್' ಮಾಡಿದ ನಟ ಯಾರು.? ]

    ಸಾಮಾಜಿಕ ಕಳಕಳಿ ಮೆರೆದ 'ಯು-ಟರ್ನ್'

    ಸಾಮಾಜಿಕ ಕಳಕಳಿ ಮೆರೆದ 'ಯು-ಟರ್ನ್'

    'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡಿದ್ದ 'ಯು-ಟರ್ನ್' ಈ ವರ್ಷ ವಿಭಿನ್ನ ವಿಷಯಕ್ಕಾಗಿ ಗಮನ ಸೆಳೆದ ಚಿತ್ರ. ಸರಳವಾದ ಕಥಾವಸ್ತುನ್ನಿಟ್ಟು ಚಿತ್ರಕಥೆ ಎಣೆದಿದ್ದ ಪವನ್ ಕುಮಾರ್, ಅದ್ಬುತವಾದ ಸಂದೇಶದ ಮೂಲಕ ಹೊಸ ಕ್ರಾಂತಿ ಉಂಟು ಮಾಡಿದರು. ಟ್ರಾಫಿಕ್ಸ್ ನಿಯಮಗಳನ್ನ ಉಲ್ಲಂಘನೆ ಬಗ್ಗೆ ಅರಿವು ಮೂಡಿಸಿದ್ದರು. ಶ್ರದ್ಧಾ ಶ್ರೀನಾಥ್, ರೋಜರ್ ನಾರಾಯಣ್, ರಾಧಿಕಾ ಚೇತನ್ ಸೇರಿದಂತೆ ಹಲವರು 'ಯು-ಟರ್ನ್' ನಲ್ಲಿ ಅಭಿನಯಿಸಿದ್ದರು.[2016ರ ಗಾಂಧಿನಗರದ ಗಲಾಟೆ ಗಲ್ಲಿಯಲ್ಲಿ ಒಂದು ಸುತ್ತು ]

    ಗಮನ ಸೆಳೆದ 'ಕರ್ವ'

    ಗಮನ ಸೆಳೆದ 'ಕರ್ವ'

    '6-5=2' ಚಿತ್ರವನ್ನ ಮಾಡಿ ಪ್ರೇಕ್ಷಕರನ್ನ ಬೆಚ್ಚಿಬೀಳಿಸಿದ್ದ ಚಿತ್ರತಂಡ, ಈ ವರ್ಷ 'ಕರ್ವ' ಸಿನಿಮಾವನ್ನ ಮಾಡಿದ್ದರು. ಹಾರರ್ ಚಿತ್ರವಾಗಿದ್ದ ಕರ್ವ, ಬಹುತೇಕ ಮನೆಯೊಂದರಲ್ಲಿ ಚಿತ್ರೀಕರಣ ಮಾಡಲಾಗಿತ್ತು. ತಿಲಕ್, ಆರ್ ಜೆ ರೋಹಿತ್, ದೇವರಾಜ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು. ಪರಿಕಲ್ಪನೆ ಸಾಮಾನ್ಯವೆನಿಸಿದರು ಚಿತ್ರದ ಮೇಕಿಂಗ್ ಮೂಲಕ 'ಕರ್ವ' ವಿಭಿನ್ನ ಸಿನಿಮಾ ಎನಿಸಿಕೊಂಡಿದೆ.

    ವಿಶೇಷವಾದ 'ಕಬೀರ'

    ವಿಶೇಷವಾದ 'ಕಬೀರ'

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಸಂತೆಯಲ್ಲಿ ನಿಂತ ಕಬೀರ' ಪೂರ್ತಿ ಕಮರ್ಷಿಯಲ್ ಚಿತ್ರವಾಗದಿದ್ದರು, ಅದೊಂದು ಪ್ರಯೋಗವಾಗಿತ್ತು. 15ನೇ ಶತಮಾನದ 'ಸಂತ ಕಬೀರ' ಅವರ ಜೀವನ ಚರಿತ್ರೆಯನ್ನ ತೆರೆಮೇಲೆ ತರಲಾಗಿತ್ತು. ಕಬೀರ ಅವರ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದೇ ಒಂದು ವಿಶೇಷವಾಯಿತು. ಇನ್ನೂ ಇಸ್ಮಾಯಿಲ್ ದರ್ಬಾರ್ ಅವರ ಕ್ಲಾಸಿಕ್ ಸಂಗೀತ ಉತ್ತಮ ಸಾಥ್ ನೀಡಿತ್ತು. ಈ ಚಿತ್ರವನ್ನ ಇಂದ್ರಬಾಬು ನಿರ್ದೇಶನ ಮಾಡಿದ್ದರು.

    ಏಂಟು ನಿರೀಕ್ಷೆ ಮೀರಿದ 'ರಾಮಾ ರಾಮಾ ರೇ'

    ಏಂಟು ನಿರೀಕ್ಷೆ ಮೀರಿದ 'ರಾಮಾ ರಾಮಾ ರೇ'

    ಈ ವರ್ಷದ ಮತ್ತೊಂದು ಅಚ್ಚರಿಯ ಸಿನಿಮಾ ಎಂದರೆ 'ರಾಮಾ ರಾಮಾ ರೇ'. ಜೈಲಿನಿಂದ ತಪ್ಪಿಸಿಕೊಂಡ ವ್ಯಕ್ತಿಯೊಬ್ಬನ ಭಾವನಾತ್ಮಕ ಸಂಗತಿಗಳನ್ನಿಟ್ಟು ಎಣೆಯಲಾಗಿದ್ದ ಚಿತ್ರಕಥೆಯಿಂದ ಪ್ರೇಕ್ಷಕರನ್ನ ಮೋಡಿದ್ದರು. ಪಾತ್ರಗಳಿಗೆ ತಕ್ಕ ಅಭಿನಯ, ಪೂರಕವಾದ ಸಂಗೀತ, ಅಚ್ಚುಕಟ್ಟಾದ ಛಾಯಗ್ರಹಣದಿಂದ ಇಡೀ ಚಿತ್ರವನ್ನ ಒಂದು ಅದ್ಬುತವೆಂಬಂತೆ ನಿರೂಪಿಸಿದ್ದರು. ಸತ್ಯ ಪ್ರಕಾಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕೆ ಜಯರಾಂ, ನಟರಾಜ್, ದರ್ಮಣ್ಣ ಕಡೂರ್ ಕಾಣಿಸಿಕೊಂಡಿದ್ದರು.[2016: ಗೂಗಲ್ ನಲ್ಲಿ ಅತಿ ಹೆಚ್ಚು ಸುದ್ದಿಯಾಗಿದ್ದ ಕನ್ನಡದ ನಟಿ ಯಾರು.? ]

    ನಿಮ್ಮ ಆಯ್ಕೆ ಯಾವುದು?

    ನಿಮ್ಮ ಆಯ್ಕೆ ಯಾವುದು?

    ಈ ಎಲ್ಲ ಚಿತ್ರಗಳು ಸ್ಟಾರ್ ನಟ, ಸ್ಟಾರ್ ನಿರ್ದೇಶಕ ಎನ್ನುವುಧಕ್ಕಿಂತ ಹಿಡಿದಿಡುವ ಚಿತ್ರಕಥೆ, ಮೇಕಿಂಗ್ ಮೂಲಕ ಹೊಸ ಟ್ರೆಂಡ್ ಹುಟ್ಟಿಹಾಕಿವೆ. ಹೀಗಾಗಿ ಈ ಚಿತ್ರಗಳಲ್ಲಿ ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರದ ಕಿರೀಟ ಯಾರಿಗೆ ಸಿಗಬಹುದು ಎಂದು ನಿಮ್ಮ ಅಭಿಪ್ರಾಯ ತಿಳಿಸಿ.

    English summary
    the year 2016 has been a brilliant one for Sandalwood with experimental films setting a new standard in terms of subject, story and narration. Here's a look at the year's experimental flicks that have won accolades from audience as well as critics.
    Thursday, December 29, 2016, 9:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X