twitter
    For Quick Alerts
    ALLOW NOTIFICATIONS  
    For Daily Alerts

    ಓದುಗರ ಅಭಿಮತ: 2016ರ ಉದಯೋನ್ಮುಖ ನಟ 'ಗಡ್ಡಪ್ಪ'

    By Harshitha
    |

    2016ನೇ ಸಾಲಿನ 'ಅತ್ಯುತ್ತಮ ಉದಯೋನ್ಮುಖ ನಟ' ಸೇರಿದಂತೆ ಒಟ್ಟು ಒಂಬತ್ತು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಹಾಗೂ ಚಿತ್ರಗಳಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.

    ತಮ್ಮ ನೆಚ್ಚಿನ ನಟ-ನಟಿ, ಚಿತ್ರವನ್ನ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ತಾರೆಯರು ಹಾಗೂ ತಾರೆಯರ ಫ್ಯಾನ್ ಕ್ಲಬ್ ಸ್ವಯಂ ಪ್ರೇರಿತವಾಗಿ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಪೇಜ್ ನ ಶೇರ್ ಮಾಡಿಕೊಂಡು ವೋಟಿಂಗ್ ಪ್ರಕ್ರಿಯೆಗೆ ಉತ್ಸಾಹ ತುಂಬಿದರು.[ಸಿನಿಪ್ರಿಯರ ಜಡ್ಜ್ ಮೆಂಟ್: 2016ರ ಅತ್ಯುತ್ತಮ ಕಮರ್ಶಿಯಲ್ ಚಿತ್ರ 'ಜಗ್ಗುದಾದಾ'.!]

    ಸುಮಾರು ಒಂದು ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಹಾಕುವ ಸಮಯ ಬಂದಿದೆ. ಓದುಗ ಪ್ರಭುಗಳ ಇಷ್ಟದ ಅನುಸಾರ, 2016ರ 'ಅತ್ಯುತ್ತಮ ಉದಯೋನ್ಮುಖ ನಟ' ಆಗಿ ಹೊರಹೊಮ್ಮಿರುವುದು 'ತಿಥಿ' ಚಿತ್ರದ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ.!

     ಅತ್ಯುತ್ತಮ ಉದಯೋನ್ಮುಖ ನಟ ಚನ್ನೇಗೌಡ

    ಅತ್ಯುತ್ತಮ ಉದಯೋನ್ಮುಖ ನಟ ಚನ್ನೇಗೌಡ

    'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2016ರ 'ಅತ್ಯುತ್ತಮ ಉದಯೋನ್ಮುಖ ನಟ' ಚನ್ನೇಗೌಡ.[ಓದುಗರ ಆಯ್ಕೆ: 2016 ರ 'ಅತ್ಯುತ್ತಮ ಹಾಸ್ಯನಟ' ಗರಿ ಸಾಧು ಕೋಕಿಲ ಮುಡಿಗೆ]

     ಅತಿ ಹೆಚ್ಚು ಮತ ಪಡೆದ ಚನ್ನೇಗೌಡ

    ಅತಿ ಹೆಚ್ಚು ಮತ ಪಡೆದ ಚನ್ನೇಗೌಡ

    ನಾಮನಿರ್ದೇಶನಗೊಂಡಿದ್ದ ಏಳು ಹೊಸ ನಟರ ಪೈಕಿ 'ತಿಥಿ' ಚಿತ್ರದಲ್ಲಿನ ಅಭಿನಯಕ್ಕಾಗಿ ಚನ್ನೇಗೌಡ (ಗಡ್ಡಪ್ಪ) 50% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.[ಓದುಗರ ನೆಚ್ಚಿನ ಶ್ರದ್ಧಾ ಶ್ರೀನಾಥ್ ಗೆ 'ಉದಯೋನ್ಮುಖ ನಟಿ-2016' ಪ್ರಶಸ್ತಿ]

     ಚನ್ನೇಗೌಡ ರವರಿಗೆ ಸಿಕ್ಕ ಮತಗಳೆಷ್ಟು.?

    ಚನ್ನೇಗೌಡ ರವರಿಗೆ ಸಿಕ್ಕ ಮತಗಳೆಷ್ಟು.?

    ಬರೋಬ್ಬರಿ 11,971 ಜನರು 'ಅತ್ಯುತ್ತಮ ಉದಯೋನ್ಮುಖ ನಟ-2016' ಆಯ್ಕೆ ಮಾಡಲು ಮತ ಚಲಾಯಿಸಿದ್ದಾರೆ. ಇವರ ಪೈಕಿ ಒಟ್ಟು 5937 ಜನರು ನಟ ಚನ್ನೇಗೌಡ ಪರ ವೋಟ್ ಮಾಡಿದ್ದಾರೆ.

     ತೀವ್ರ ಪೈಪೋಟಿ ನೀಡಿದ ನಿಖಿಲ್ ಕುಮಾರ್

    ತೀವ್ರ ಪೈಪೋಟಿ ನೀಡಿದ ನಿಖಿಲ್ ಕುಮಾರ್

    'ಜಾಗ್ವಾರ್' ಚಿತ್ರದ ಅಭಿನಯಕ್ಕಾಗಿ ನಟ ನಿಖಿಲ್ ಕುಮಾರ್ 33% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡು, ಎರಡನೇ ಸ್ಥಾನ ಪಡೆದಿದ್ದಾರೆ. ಒಟ್ಟು 3925 ಜನರು ನಿಖಿಲ್ ಕುಮಾರ್ ಪರ ಮತ ಚಲಾವಣೆ ಮಾಡಿದ್ದಾರೆ.

     ನಂತರದ ಸ್ಥಾನಗಳು

    ನಂತರದ ಸ್ಥಾನಗಳು

    ಮೂರನೇ ಸ್ಥಾನ - ಸೂರಜ್ ಗೌಡ - 685 ಮತಗಳು
    ನಾಲ್ಕನೇ ಸ್ಥಾನ - ಪ್ರವೀಣ್ - 669 ಮತಗಳು
    ಐದನೇ ಸ್ಥಾನ - ದಿಲೀಪ್ - 337 ಮತಗಳು
    ಆರನೇ ಸ್ಥಾನ - ಅನೂಪ್ ರೇವಣ್ಣ - 235 ಮತಗಳು
    ಏಳನೇ ಸ್ಥಾನ - ಸಚಿನ್ - 183 ಮತಗಳು

     ಮತದಾನ ನಡೆದದ್ದು ಯಾವಾಗ.?

    ಮತದಾನ ನಡೆದದ್ದು ಯಾವಾಗ.?

    'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಂಡು ಜನವರಿ 15ಕ್ಕೆ ಮುಕ್ತಾಯವಾಗಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

     ಎಲ್ಲರಿಗೂ ಧನ್ಯವಾದಗಳು

    ಎಲ್ಲರಿಗೂ ಧನ್ಯವಾದಗಳು

    ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.

    English summary
    'Best of Sandalwood-2016' Poll Results are out. Kannada Actor Channegowda aka Gaddappa is selected as 'Best Debutant Male-2016'
    Wednesday, February 8, 2017, 14:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X