twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ ಕುವರಿಗೆ ತವರಿನಲ್ಲಿ ಸಿಗದ ಮನ್ನಣೆ ಹೊರ ರಾಜ್ಯದಲ್ಲಿ ಸಿಕ್ಕಾಗ..

    By Bharath Kumar
    |

    ಕನ್ನಡ ನಟ, ನಟಿಯರು ಬೇರೆ ಇಂಡಸ್ಟ್ರಿಗೆ ಹೋಗಿ ಅಲ್ಲೆ ನೆಲೆನಿಂತಿರುವುದು ಹೊಸದೇನಲ್ಲ. ಇಲ್ಲಿ ಅವಕಾಶಗಳು ಸಿಗದೇ ಇದ್ದಾಗ ಬೇರೆ ಕಡೆ ಹೋಗ್ತಾರೆ, ಅಲ್ಲಿ ಯಶಸ್ಸು ಸಿಗುತ್ತೆ. ಅಲ್ಲೆ ನೆಲೆ ನಿಲ್ತಾರೆ. ಹಾಗಂತ, ಇವರೆಲ್ಲ ಕನ್ನಡ ಚಿತ್ರಗಳಲ್ಲಿ ಅಭಿನಯಿಸಲ್ಲ ಅಂತಲ್ಲ. ಅಭಿನಯಿಸುವುದಕ್ಕೆ ಅವಕಾಶಗಳು ಸಿಗಲ್ಲ ಅಷ್ಟೇ. ಈ ರೀತಿ ಕನ್ನಡದಲ್ಲಿ ಅವಕಾಶ ಸಿಗದೆ, ಬೇರೆ ಭಾಷೆಗಳಲ್ಲಿ ನಟಿಸಿ ಜನಮನ್ನಣೆಯ ಜೊತೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ ಕನ್ನಡ ನಟಿ ನಂದಿತಾ ಶ್ವೇತಾ.

    'ಫಿಲ್ಮ್ ಫೇರ್' ಕನ್ನಡ ವಿಭಾಗದಲ್ಲಿ ಯಾರಿಗೆ, ಯಾವ ಚಿತ್ರಕ್ಕೆ ಪ್ರಶಸ್ತಿ!'ಫಿಲ್ಮ್ ಫೇರ್' ಕನ್ನಡ ವಿಭಾಗದಲ್ಲಿ ಯಾರಿಗೆ, ಯಾವ ಚಿತ್ರಕ್ಕೆ ಪ್ರಶಸ್ತಿ!

    ಸೂಪರ್ ಸ್ಟಾರ್ ರಜನಿಕಾಂತ್, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಪ್ರಕಾಶ್ ರೈ ಹೀಗೆ ದೊಡ್ಡ ದೊಡ್ಡ ನಟರೆಲ್ಲಾ ಇಲ್ಲಿಂದ ಹೋಗಿ, ಅಲ್ಲಿ ಸ್ಟಾರ್, ಸೂಪರ್ ಸ್ಟಾರ್ ಗಳಾಗಿದ್ದಾರೆ ಎಂದು ಬಹಳ ಹೆಮ್ಮೆಯಿಂದ ಹೇಳಿ ಕೊಳ್ಳತ್ತೇವೆ. ಅದೇ ರೀತಿ ಕನ್ನಡದ ಈ ನಟಿ ಇಲ್ಲಿ ಸಾಧಿಸಲಾಗದನ್ನ ಅಲ್ಲಿ ಗಳಿಸಿಕೊಂಡಿದ್ದಾರೆ. ಅಷ್ಟಕ್ಕೂ, ಈ ನಂದಿತಾ ಯಾರು? ಮುಂದೆ ಓದಿ.....

    ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ವಿಜೇತೆ

    ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ವಿಜೇತೆ

    64ನೇ ಸಾಲಿನ ಫಿಲ್ಮ್ ಫೇರ್ ಸಾಲಿನ ತೆಲುಗು ವಿಭಾಗದಲ್ಲಿ ''ಎಕ್ಕಡಿಕಿ ಪೋತಾವು ಚಿನ್ನವಾಡ'' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಂದಿತಾ ಜೊತೆ ನಟಿ ರಮ್ಯಾಕೃಷ್ಣ, ಪ್ರಿಯಾಮಣಿ, ಅನುಷಾ, ಅನುಪಮಾ ಪೈಪೋಟಿಯಲ್ಲಿದ್ದರು.

    ನಂದಿತಾ ಶ್ವೇತಾ ಕನ್ನಡದ ಹುಡುಗಿ

    ನಂದಿತಾ ಶ್ವೇತಾ ಕನ್ನಡದ ಹುಡುಗಿ

    ಲೂಸ್ ಮಾದ ಯೋಗೀಶ್ ನಾಯಕನಾಗಿ ಅಭಿನಯದ ಚೊಚ್ಚಲ ಸಿನಿಮಾ 'ನಂದ ಲವ್ಸ್ ನಂದಿತಾ' ಚಿತ್ರದ ನಾಯಕಿ ಈ ನಂದಿತಾ ಶ್ವೇತಾ.

    'ರಕ್ಷಿತ್-ರಶ್ಮಿಕಾ'ಗೆ ಬಹುದೊಡ್ಡ ಅಚ್ಚರಿ ನೀಡಿದ 'ಫಿಲ್ಮ್ ಫೇರ್' ಸಮಾರಂಭ.!'ರಕ್ಷಿತ್-ರಶ್ಮಿಕಾ'ಗೆ ಬಹುದೊಡ್ಡ ಅಚ್ಚರಿ ನೀಡಿದ 'ಫಿಲ್ಮ್ ಫೇರ್' ಸಮಾರಂಭ.!

    ಕನ್ನಡದಲ್ಲಿ ಮಾಡಿದ್ದು ಒಂದೇ ಚಿತ್ರ

    ಕನ್ನಡದಲ್ಲಿ ಮಾಡಿದ್ದು ಒಂದೇ ಚಿತ್ರ

    'ನಂದ ಲವ್ಸ್ ನಂದಿತಾ' ಚಿತ್ರ ಯಶಸ್ಸು ಕಂಡಿತ್ತು. ಈ ಚಿತ್ರದ ನಂತ ಲೂಸ್ ಮಾದ ಯೋಗಿ ಸಿಕ್ಕಾಪಟ್ಟೆ ಬ್ಯುಸಿಯಾದ್ರು. ನಾಯಕಿ ನಂದಿತಾಗೆ ಅವಕಾಶಗಳು ಸಿಗಲಿಲ್ಲ. ಆದ್ರೆ, ತಮಿಳು ಚಿತ್ರರಂಗದಿಂದ ನಂದಿತಾಗೆ ಆಫರ್ ಬಂದವು. ಬಂದ ಅವಕಾಶಗಳನ್ನ ಸದ್ಬಳಕೆ ಮಾಡಿಕೊಂಡ ನಂದಿತಾ ಸಕ್ಸಸ್ ಕಂಡರು.

    ತಮಿಳಿನಲ್ಲಿ ಬ್ಯುಸಿಯಾದ್ರು

    ತಮಿಳಿನಲ್ಲಿ ಬ್ಯುಸಿಯಾದ್ರು

    'ಅಟ್ಟಕತ್ತಿ', 'ಎಥೀರ್ ನೀಚಲ್', 'ಮುಂದಾಸುಪಟ್ಟಿ', 'ಪುಲಿ', 'ಅಂಜಲ', 'ಉಪ್ಪು ಕರುವಾಡು', ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ್ರು. 'ಎಥೀರ್ ನೀಚಲ್' ಚಿತ್ರದ ಅಭಿನಯಕ್ಕೆ ಕೂಡ ಅತ್ಯುತ್ತಮ ಪೋಷಕ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿದೆ.

    ಕನ್ನಡದಲ್ಲಿ ನಟಿಸುವ ಆಸೆ

    ಕನ್ನಡದಲ್ಲಿ ನಟಿಸುವ ಆಸೆ

    ಸದ್ಯ, ಸಂಪೂರ್ಣವಾಗಿ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ನಂದಿತಾಗೆ ಕನ್ನಡದಲ್ಲಿ ನಟಿಸುವ ಆಸೆ. ನಿರ್ದೇಶಕರು ಮತ್ತು ನಿರ್ಮಾಪಕರು ಒಳ್ಳೆಯ ಪಾತ್ರವನ್ನ ಕೊಟ್ಟರೇ, ಖಂಡಿತವಾಗಿ ಕನ್ನಡದಲ್ಲಿ ಸಿನಿಮಾ ಮಾಡುತ್ತೇನೆ ಎನ್ನುತ್ತಾರೆ ಫಿಲ್ಮ್ ಫೇರ್ ಗೆದ್ದ ನಟಿ ನಂದಿತಾ.

    'ಸೌತ್ ಫಿಲ್ಮ್ ಫೇರ್' ಪ್ರಶಸ್ತಿ: ಅತ್ಯುತ್ತಮ ನಿರ್ದೇಶಕ ರಿಷಬ್ ಶೆಟ್ಟಿ'ಸೌತ್ ಫಿಲ್ಮ್ ಫೇರ್' ಪ್ರಶಸ್ತಿ: ಅತ್ಯುತ್ತಮ ನಿರ್ದೇಶಕ ರಿಷಬ್ ಶೆಟ್ಟಿ

    English summary
    64th filmfare Award Best Supporting Actress in Telugu Wins Nandita swetha for Ekkadiki Pothavu Chinnavada Movie.
    Tuesday, June 20, 2017, 12:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X