»   » ಫಸ್ಟ್‌ ಲುಕ್: 'ರಾಗ' ಚಿತ್ರದಲ್ಲಿ ಕುರುಡಿಯಾದ ಭಾಮಾ

ಫಸ್ಟ್‌ ಲುಕ್: 'ರಾಗ' ಚಿತ್ರದಲ್ಲಿ ಕುರುಡಿಯಾದ ಭಾಮಾ

Posted by:
Subscribe to Filmibeat Kannada

ಅಂದ ಹುಡುಗಿ ಮತ್ತು ಹುಡುಗ ನಡುವಿನ ಪ್ರೇಮಕತೆ ಆಧಾರಿತ ವಿಭಿನ್ನ ಚಿತ್ರ 'ರಾಗ' ಈಗ ಸ್ಯಾಂಡಲ್‌ ವುಡ್‌ ನಲ್ಲಿ ಸದ್ದು ಮಾಡುತ್ತಿರುವ ಹೊಸ ಪ್ರಯತ್ನದ ಸಿನಿಮಾ.[ಓ ಮೈ ಗಾಡ್ ಕುರುಡಿಯಾದ್ರಾ ನಟಿ ಭಾಮಾ.?]

'ರಾಗ' ಸಿನಿಮಾ ಕಾಮಿಡಿ ನಟ ಮಿತ್ರ ನಿರ್ಮಾಣದಲ್ಲಿ ಮತ್ತು ಈ ಹಿಂದೆ ರೋಮಿಯೋ, ಸ್ಟೈಲ್ ಕಿಂಗ್, ಚಡ್ಡಿ ದೋಸ್ತ್ ಚಿತ್ರ ನಿರ್ದೇಶನ ಮಾಡಿದರುವ ಪಿ ಸಿ ಶೇಖರ್ ಆಕ್ಷನ್‌ ಕಟ್‌ ನಲ್ಲಿ ಮೂಡಿಬರುತ್ತಿರುವ ಡಿಫರೆಂಟ್ ಸಿನಿಮಾ.[ಪಂಜಾಬಿ ಹುಡುಗಿ ಜೊತೆ ಕನ್ನಡದ ಹುಡುಗನ 'ಬರ್ಫಿ']

ಕಾಮಿಡಿ ನಟ ಮಿತ್ರ ಮತ್ತು ಮಲಯಾಳಂ ಲಿಡೀಂಗ್ ನಟಿ ಭಾಮಾ ಇಬ್ಬರು ಅಂದರಾಗಿ ಡಿಫರೆಂಟ್ ಗೆಟಪ್‌ ನಲ್ಲಿ ಕಾಣಿಸಿಕೊಂಡಿರುವ 'ರಾಗ' ಚಿತ್ರ ಈಗ ತನ್ನ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದೆ. ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಮಿತ್ರ ಅವರ ಮೊದಲ ನೋಟ ಈ ಹಿಂದೆ ಪ್ರಶಂಸೆಗೆ ಕಾರಣವಾಗಿತ್ತು. ಚಿತ್ರತಂಡ ಈಗ ನಟಿ ಭಾಮಾ 'ರಾಗ' ಚಿತ್ರದಲ್ಲಿ ಕಾಣಿಸಿಕೊಂಡಿರುವ ಡಿಫರೆಂಟ್ ಫಸ್ಟ್‌ ಲುಕ್ ಅನ್ನು ಬಿಡುಗಡೆ ಮಾಡಿದೆ. ಭಾಮಾ ರವರ ಫಸ್ಟ್‌ ಲುಕ್ ಹೇಗಿದೆ ಇಲ್ಲಿ ನೋಡಿ.

ರೆಟ್ರೋ ಲುಕ್‌ ನಲ್ಲಿ ಮಿಂಚಿದ ಭಾಮಾ

ರೆಟ್ರೋ ಲುಕ್‌ ನಲ್ಲಿ ಮಿಂಚಿದ ಭಾಮಾ

'ರಾಗ' ಸಿನಿಮಾದಲ್ಲಿ ಭಾಮಾ ರವರು ತಮ್ಮ ಮೆಟ್ರೋ ಲುಕ್ ಬದಲಾಗಿ ರೆಟ್ರೋ ಲುಕ್‌ ನಲ್ಲಿ ಮಿಂಚುತ್ತಿರುವುದನ್ನು ಈ ಫೊಸ್ಟರ್ ನಲ್ಲೇ ನೋಡಿ.

ಅಂದ ಪಾತ್ರದಲ್ಲಿ ಭಾಮಾ

ಅಂದ ಪಾತ್ರದಲ್ಲಿ ಭಾಮಾ

ಅಂದಹಾಗೆ ಭಾಮಾ ರವರು 'ರಾಗ' ಸಿನಿಮಾದಲ್ಲಿ 'ಡೆವಲಪ್‌ಮೆಂಟಲ್ ಕ್ಯಾಟರಾಕ್ಟ್' ತೊಂದರೆಯಿಂದ ಕಣ್ಣು ಕಳೆದುಕೊಂಡ ಹುಡುಗಿಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಡಿ ಲಾಂಗ್ವೇಜ್ ಚೇಂಜ್ ಮಾಡಿಕೊಂಡಿದ್ದಾರೆ ಭಾಮಾ

ಬಾಡಿ ಲಾಂಗ್ವೇಜ್ ಚೇಂಜ್ ಮಾಡಿಕೊಂಡಿದ್ದಾರೆ ಭಾಮಾ

ರಾಗ ಸಿನಿಮಾದಲ್ಲಿ ಮಿತ್ರ ರವರ ಕಾಂಬಿನೇಷನ್‌ ಪಾತ್ರಕ್ಕಾಗಿ ಭಾಮಾ ದೇಹದ ತೂಕ ಹೆಚ್ಚಿಸಿಕೊಂಡಿದ್ದು, ಬಾಡಿ ಲಾಂಗ್ವೇಜ್ ಚೇಂಜ್ ಮಾಡಿಕೊಂಡಿದ್ದಾರೆ.

 ಫಿಸಿಕಲ್ ಎಕ್ಸ್‌ಪ್ರೆಷನ್ ಜಾಸ್ತಿ

ಫಿಸಿಕಲ್ ಎಕ್ಸ್‌ಪ್ರೆಷನ್ ಜಾಸ್ತಿ

'ರಾಗ' ಸಿನಿಮಾದಲ್ಲಿ ಭಾಮಾ 8 ಕೆಜಿ ತೂಕ ಹೆಚ್ಚಿಸಿಕೊಂಡಿರುವುದು ಮಾತ್ರವಲ್ಲದೇ, ಅಬ್‌ನಾರ್ಮಲ್ ಆಗಿ ತಮ್ಮ ಪಾತ್ರವನ್ನು ನಟಿಸಿದ್ದಾರೆ. ಆದ್ದರಿಂದ ಈ ಚಿತ್ರದಲ್ಲಿ ಮಾತಿಗಿಂತ ಹೆಚ್ಚಾಗಿ ಭಾಮಾ ರ ಫಿಸಿಕಲ್ ಎಕ್ಸ್‌ಪ್ರೆಷನ್ ಜಾಸ್ತಿ ಇದೆಯಂತೆ.

ಪುಟ್ಟ ಹುಡುಗಿಯಂತೆ ಕಾಸ್ಟೂಮ್

ಪುಟ್ಟ ಹುಡುಗಿಯಂತೆ ಕಾಸ್ಟೂಮ್

ಸಹ ಕಲಾವಿದರಾಗಿ ನಟಿಸುತ್ತ ಬಂದಿರುವ ಮಿತ್ರಾ ಜತೆ ನಾಯಕಿಯಾಗಿ ಭಾಮಾ ನಟಿಸಲು ಕಾರಣ ಚಿತ್ರದ ಪಾತ್ರವಂತೆ. ಆದ್ದರಿಂದ ಸಹಜವಾಗೆ ತಮ್ಮ ಪಾತ್ರ ನಿರ್ವಹಣೆಗೆ ಭಾಮಾ ಕಾಸ್ಟ್ಯೂಮ್ ಕೂಡ ಪುಟ್ಟ ಹುಡುಗಿಯಂತೆ ಇದೆ.

ಮೊದಲ ಬಾರಿಗೆ ವಿಕಲಚೇತನೆ ಪಾತ್ರದಲ್ಲಿ ಭಾಮಾ

ಮೊದಲ ಬಾರಿಗೆ ವಿಕಲಚೇತನೆ ಪಾತ್ರದಲ್ಲಿ ಭಾಮಾ

ಮಲಯಾಳಂ ಲೀಡಿಂಗ್ ನಟಿ ಭಾಮಾ ಇದೇ ಮೊದಲ ಬಾರಿಗೆ ದೃಷ್ಟಿ ವಿಕಲಚೇತನೆ ಪಾತ್ರದಲ್ಲಿ 'ರಾಗ' ಸಿನಿಮಾದ ಮೂಲಕ ಕಾಣಿಸಿಕೊಂಡಿದ್ದಾರೆ.

ಪಾತ್ರ ನಿರ್ವಹಣೆಗೆ ವಿಕಲ ಚೇತನ ಮಕ್ಕಳ ಜತೆ ಇದ್ರು ಭಾಮಾ

ಪಾತ್ರ ನಿರ್ವಹಣೆಗೆ ವಿಕಲ ಚೇತನ ಮಕ್ಕಳ ಜತೆ ಇದ್ರು ಭಾಮಾ

'ರಾಗ' ಸಿನಿಮಾದಲ್ಲಿ ತಮ್ಮ ಪಾತ್ರ ನಿರ್ವಹಣೆಗಾಗಿ ಶೂಟಿಂಗ್ ಗೆ ಮೊದಲು ಭಾಮಾ ದೃಷ್ಟಿ ವಿಕಲಚೇತನ ಮಕ್ಕಳ ಜತೆ ಇದ್ದು ಅವರನ್ನು ಗಮನಿಸಿದ್ದರಂತೆ. ಇನ್ನೂ ಸಿನಿಮಾದಲ್ಲಿ ಹೆಚ್ಚಾಗಿ ಮ್ಯೂಸಿಕ್ ಮತ್ತು ಫೀಲಿಂಗ್‌ಗಳ ಮೂಲಕವೇ ಕತೆ ಸಾಗುತ್ತದಂತೆ. ಆದ್ದರಿಂದ ಮಾತು ಕಡಿಮೆಯೇ.

ಪಿ.ಸಿ.ಶೇಖರ್ ನಿರ್ದೇಶನದ ಈ ರಾಗ ಸಿನಿಮಾಗೆ ಅರ್ಜುನ್‌ ಜನ್ಯಾ ಸಂಗೀತವಿದೆ.

ಸೀರಿಯಸ್ ಲುಕ್‌ ನಲ್ಲಿ ಮಿತ್ರ

ಸೀರಿಯಸ್ ಲುಕ್‌ ನಲ್ಲಿ ಮಿತ್ರ

ಕಾಮಿಡಿ ನಟ ಮಿತ್ರ ರವರು ಸದಾ ಹೊಸತನವನ್ನು ಹುಡುಕುತ್ತಿರುತ್ತಾರೆ. ಅದರಂತೆ ನಟ ಮಿತ್ರ ನಟನೆ ಜೊತೆ-ಜೊತೆಗೆ ಹೊಸ ಅವತಾರ ತಾಳಿದ್ದಾರೆ. ಮಿತ್ರ ರವರು 'ರಾಗ' ಚಿತ್ರದಲ್ಲಿ ಕಾಣಿಸಿಕೊಂಡಿರುವ ಹೊಸ ಲುಕ್ ಇದು.

ಪ್ರಶಂಸೆಗೆ ಕಾರಣವಾದ ಮಿತ್ರ ರವರ ರಾಗ ನೋಟ

ಪ್ರಶಂಸೆಗೆ ಕಾರಣವಾದ ಮಿತ್ರ ರವರ ರಾಗ ನೋಟ

ಯಾವಾಗ್ಲು ಕಾಮಿಡಿ ಲುಕ್‌ ನಲ್ಲೇ ನೋಡಿದ ಮಿತ್ರ ರನ್ನು ಈಗ ಸೀರಿಯಸ್ ಲುಕ್‌ ನಲ್ಲಿ ನೋಡಬಹುದು. 'ರಾಗ' ಚಿತ್ರದಲ್ಲಿ ಭಾಮಾ ರವರಿಗೆ ಕಾಂಬಿನೇಷನ್ ಆಗಿ ದೃಷ್ಟಿ ವಿಕಲಚೇತನ ಪಾತ್ರದಲ್ಲಿ ಚಿತ್ರದ ನಿರ್ಮಾಣ ಜಬಾಬ್ದಾರಿ ಹೊತ್ತಿರುವ ಮಿತ್ರ ರವರೇ ಅಭಿನಯಿಸಿದ್ದಾರೆ.

English summary
Here is Bhama's First look in Kannada Movie 'Raaga'. Bhama plays visually impaired girl in Raaga.
Please Wait while comments are loading...

Kannada Photos

Go to : More Photos