»   » 'ಜಾಕಿ' ಭಾವನಾ ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡಿರುವುದರ ಹಿಂದಿನ ಗುಟ್ಟು ರಟ್ಟು!

'ಜಾಕಿ' ಭಾವನಾ ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡಿರುವುದರ ಹಿಂದಿನ ಗುಟ್ಟು ರಟ್ಟು!

Posted by:
Subscribe to Filmibeat Kannada

ಪ್ರತಿ ಬಾರಿ 'ಜಾಕಿ' ಭಾವನಾ ಮದುವೆ ಬಗ್ಗೆ ಸುದ್ದಿ ಹಬ್ಬಿದಾಗೆಲ್ಲಾ - ''ನಾನು ಚಿತ್ರಗಳ ಶೂಟಿಂಗ್ ನಲ್ಲಿ ಬಿಜಿಯಾಗಿದ್ದೇನೆ. ಸದ್ಯಕ್ಕೆ ಮದುವೆ ಬಗ್ಗೆ ಯೋಚನೆ ಮಾಡಿಲ್ಲ'' ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳ್ತಿದ್ದ ಭಾವನಾ, ಇತ್ತೀಚೆಗಷ್ಟೇ ದಿಢೀರ್ ಅಂತ ಯಾರಿಗೂ ಹೇಳದೆ ನಿಶ್ಚಿತಾರ್ಥ ಮಾಡಿಕೊಂಡುಬಿಟ್ಟರು.

ಅಷ್ಟಕ್ಕೂ, ನಟಿ ಭಾವನಾ ರವರ ಎಂಗೇಜ್ಮೆಂಟ್ ಗುಟ್ಟುಗುಟ್ಟಾಗಿ ನಡೆದದ್ದು ಯಾಕೆ.? ಎಂಬ ಪ್ರಶ್ನೆಗೆ ಸ್ವತಃ ಭಾವನಾ ರವರೇ ಬಾಯಿಬಿಟ್ಟಿದ್ದಾರೆ. ಸಂಪೂರ್ಣ ವರದಿ ಇಲ್ಲಿದೆ ಓದಿರಿ...

ಕಡೆಗೂ ತುಟಿ ಎರಡು ಮಾಡಿರುವ ಭಾವನಾ

ಕಡೆಗೂ ತುಟಿ ಎರಡು ಮಾಡಿರುವ ಭಾವನಾ

ಕನ್ನಡ ಚಿತ್ರ ನಿರ್ಮಾಪಕ ನವೀನ್ ರವರೊಂದಿಗಿನ ನಿಶ್ಚಿತಾರ್ಥ ಗುಪ್ತವಾಗಿ ನಡೆಯಲು ಕಾರಣವೇನು ಎಂಬುದರ ಬಗ್ಗೆ ಮಲಯಾಳಂನ 'ಆನ್ ಮನೋರಮಾ'ಗೆ ನಟಿ ಭಾವನಾ ಸ್ಪಷ್ಟನೆ ಕೊಟ್ಟಿದ್ದಾರೆ.[ನಟಿ ಭಾವನಾ-ಕನ್ನಡಿಗ ನವೀನ್ ನಿಶ್ಚಿತಾರ್ಥ ಸಂಭ್ರಮದ ಕಲರ್ ಫುಲ್ ಚಿತ್ರಗಳು]

ನಟಿ ಭಾವನಾ ಹೇಳಿದ್ದೇನು.?

ನಟಿ ಭಾವನಾ ಹೇಳಿದ್ದೇನು.?

''ಸಂಪ್ರದಾಯದಂತೆ ನವೀನ್ ಮತ್ತು ಕುಟುಂಬ 'ಹೆಣ್ಣು ನೋಡುವ ಶಾಸ್ತ್ರ'ಕ್ಕಾಗಿ ನಮ್ಮ ಮನೆಗೆ ಬಂದಿದ್ದರು. ಆಗ ಉಭಯ ಕುಟುಂಬಗಳೂ ನಮ್ಮ ಮನೆಯಲ್ಲಿ ನೆರೆದಿದ್ದರಿಂದ, ಎಲ್ಲರೂ ಸೇರಿ ಉಂಗುರ ಬದಲಾಯಿಸಿಕೊಳ್ಳಲು ತೀರ್ಮಾನ ತೆಗೆದುಕೊಂಡರು. ಹೀಗಾಗಿ ದಿಢೀರ್ ಅಂತ ನಿಶ್ಚಿತಾರ್ಥ ನಡೆದೇ ಹೋಯ್ತು'' ಅಂತ ನಟಿ ಭಾವನಾ 'ಆನ್ ಮನೋರಮಾ'ಗೆ ತಿಳಿಸಿದ್ದಾರೆ.[ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡ್ರು ನಟಿ 'ಜಾಕಿ' ಭಾವನಾ.!]

ಸ್ನೇಹಿತರನ್ನೂ ಕರೆಯಲು ಆಗಲಿಲ್ಲ.

ಸ್ನೇಹಿತರನ್ನೂ ಕರೆಯಲು ಆಗಲಿಲ್ಲ.

''ಎಲ್ಲವೂ ಸಡನ್ ಆಗಿ ನಡೆದರಿಂದ ಆಪ್ತ ಸ್ನೇಹಿತರಿಗೂ ಆಹ್ವಾನ ನೀಡಲು ಆಗಲಿಲ್ಲ'' ಎಂದಿದ್ದಾರೆ ನಟಿ ಭಾವನಾ

ಭಾವನಾ ನಿಶ್ಚಿತಾರ್ಥ ನಡೆದದ್ದು ಯಾವಾಗ.?

ಭಾವನಾ ನಿಶ್ಚಿತಾರ್ಥ ನಡೆದದ್ದು ಯಾವಾಗ.?

ಮಾರ್ಚ್ 9 ರಂದು ಕೇರಳದ ಕೊಚ್ಚಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಭಾವನಾ ರವರ ನಿಶ್ಚಿತಾರ್ಥ ಕನ್ನಡಿಗ, ಕನ್ನಡ ಚಿತ್ರ ನಿರ್ಮಾಪಕ ನವೀನ್ ರವರೊಂದಿಗೆ ನಡೆದಿತ್ತು. ಆಗಸ್ಟ್ ನಲ್ಲಿ ಈ ಜೋಡಿ ಮದುವೆ ಆಗುವ ಸಾಧ್ಯತೆ ಇದೆ.

ನಾಲ್ಕು ವರ್ಷಗಳ ಪ್ರೀತಿ

ನಾಲ್ಕು ವರ್ಷಗಳ ಪ್ರೀತಿ

ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ 2014ರಲ್ಲೇ ಮದುವೆ ಆಗಬೇಕಿತ್ತು. ಆದ್ರೆ, ಚಿತ್ರಗಳಲ್ಲಿ ಬಿಜಿಯಾಗಿದ್ರಿಂದ ಮದುವೆ ದಿನಾಂಕವನ್ನ ಮುಂದೂಡುತ್ತಿದ್ದ ಭಾವನಾ ರವರಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ.

English summary
Talking to OnManorama, Actress Bhavana revealed the reason behind getting engaged to Kannada Producer Naveen in hush-hush manner.
Please Wait while comments are loading...

Kannada Photos

Go to : More Photos