twitter
    For Quick Alerts
    ALLOW NOTIFICATIONS  
    For Daily Alerts

    ಕೇಳ್ರಪ್ಪೋ ಕೇಳಿ.. 'ಭೂಮಿಪುತ್ರನ ಜನಕ' ಯಡಿಯೂರಪ್ಪ ಬಗ್ಗೆ ಸಿನಿಮಾ ಬರಲಿದೆ.!

    By Harshitha
    |

    ಜೆಡಿಎಸ್ ದಳಪತಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕೈಗೊಂಡ ಜನಪರ ಕಾರ್ಯಕ್ರಮಗಳ ಕುರಿತು ಕಲಾ ಸಾಮ್ರಾಟ್ ಎಸ್.ನಾರಾಯಣ್ 'ಭೂಮಿಪುತ್ರ' ಎಂಬ ಚಿತ್ರ ನಿರ್ದೇಶನ ಮಾಡುತ್ತಿರುವ ವಿಷಯ ನಿಮಗೆಲ್ಲ ಗೊತ್ತೇ ಇದೆ. ಈಗ ನಿಮ್ಮ ಗಮನಕ್ಕೆ ಬಾರದ ಹೊಸ ವಿಚಾರ ಹೇಳ್ತೀವಿ ಕೇಳಿ...

    ಎಚ್.ಡಿ.ಕುಮಾರಸ್ವಾಮಿ ರವರ ಮುಖ್ಯಮಂತ್ರಿ ಆಡಳಿತದ ಕುರಿತು 'ಭೂಮಿಪುತ್ರ' ಸೆಟ್ಟೇರುತ್ತಿದ್ದ ಹಾಗೆ ಬಿಜೆಪಿ ಪಾಳಯದಲ್ಲೂ ಹೊಸ ರಣತಂತ್ರದ ರೂಪುರೇಷೆ ಸಿದ್ಧವಾಗಿದೆ. ಅದರ ಪರಿಣಾಮ ಕಮಲ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ನವರ ಕುರಿತು ಅದೇ ಟಿ-ಟ್ವೆಂಟಿ ಆಡಳಿತದ ಬಗ್ಗೆ ಒಂದು ಸಿನಿಮಾ ಮಾಡಲು ಬಿ.ಜೆ.ಪಿ ಮನಸ್ಸು ಮಾಡಿದೆ.[ಬೆಳ್ಳಿತೆರೆಯಲ್ಲಿ ಮೂಡಲಿದೆ ಜೆಡಿಎಸ್ 'ದಳಪತಿ'ಯ T20 ಆಡಳಿತ]

    ಎಚ್.ಡಿ.ಕುಮಾರಸ್ವಾಮಿ 'ಭೂಮಿಪುತ್ರ' ಆದರೆ... ಬಿ.ಎಸ್.ಯಡಿಯೂರಪ್ಪ 'ಭೂಮಿಪುತ್ರನ ಜನಕ' ಎಂಬ ಕೂಗು ಬಿ.ಜೆ.ಪಿ ಪಾಳಯದಲ್ಲಿ ಕೇಳಿ ಬರುತ್ತಿದೆ. ಅಲ್ಲಿಗೆ, ಬಿ.ಎಸ್.ವೈ ಕುರಿತ ಸಿನಿಮಾ ಸದ್ಯದಲ್ಲಿಯೇ ಸೆಟ್ಟೇರುವುದು ಖಾತ್ರಿ ಎಂದ ಹಾಗೆ ಲೆಕ್ಕ. ಮುಂದೆ ಓದಿ....

    ಇದೆಲ್ಲ ಅಂತೆ-ಕಂತೆ ಎಂದುಕೊಳ್ಳಬೇಡಿ

    ಇದೆಲ್ಲ ಅಂತೆ-ಕಂತೆ ಎಂದುಕೊಳ್ಳಬೇಡಿ

    ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಬಗ್ಗೆ ಸಿನಿಮಾ ಮೂಡಿಬರುವ ಸುದ್ದಿ ಅಂತೆ-ಕಂತೆ ಎಂದು ನೀವು ಭಾವಿಸಬೇಡಿ. ಯಾಕಂದ್ರೆ, ಬಿ.ಎಸ್.ವೈ ಬಗ್ಗೆ ಸಿನಿಮಾ ಮಾಡುವುದಾಗಿ ಸ್ವತಃ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಘೋಷಿಸಿದ್ದಾರೆ.['ಭೂಮಿಪುತ್ರ' ಸಿನಿಮಾ ಹಿಂದಿದ್ಯಾ ಎಚ್.ಡಿ.ಕೆ ಚುನಾವಣಾ ರಣತಂತ್ರ.?]

    'ಭೂಮಿಪುತ್ರನ ಜನಕ' ಎಂಬ ಸಿನಿಮಾ ಮಾಡುವುದು ಪಕ್ಕಾ

    'ಭೂಮಿಪುತ್ರನ ಜನಕ' ಎಂಬ ಸಿನಿಮಾ ಮಾಡುವುದು ಪಕ್ಕಾ

    ಮಂಡ್ಯ ಜಿಲ್ಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತೇಜಸ್ವಿನಿ ರಮೇಶ್, ಬಿ.ಎಸ್.ಯಡಿಯೂರಪ್ಪ ಕುರಿತು 'ಭೂಮಿಪುತ್ರನ ಜನಕ' ಎಂಬ ಸಿನಿಮಾ ಮಾಡುವುದು ಪಕ್ಕಾ ಎಂದಿದ್ದಾರೆ.

    ನಿಜವಾದ ನೇಗಿಲಯೋಗಿ ಯಾರು.?

    ನಿಜವಾದ ನೇಗಿಲಯೋಗಿ ಯಾರು.?

    ''ಎಚ್.ಡಿ.ಕುಮಾರಸ್ವಾಮಿ ಪ್ರಶ್ನಾತೀತರೂ ಅಲ್ಲ, ಪರಿಶುದ್ಧರೂ ಅಲ್ಲ. ಅದೇನೋ 'ಭೂಮಿಪುತ್ರ' ಅಂತ ಸಿನಿಮಾ ಬರ್ತಿದ್ಯಂತೆ. ನಮ್ಮ ಕಾರ್ಯಕರ್ತರೆಲ್ಲ ನನ್ನ ಬಳಿ ಬಂದು ಹೇಳುತ್ತಿದ್ದರು. ಇವತ್ತು ನಿಜವಾದ ನೇಗಿಲಯೋಗಿ, ಅನ್ನದಾತರ ಅಪ್ರತಿಮ ನಾಯಕರು ಅಂದ್ರೆ ಅದು ನಮ್ಮ ರಾಜ್ಯಾಧ್ಯಕ್ಷರು.... ಬಿ.ಎಸ್.ಯಡಿಯೂರಪ್ಪನವರು. ನಮ್ಮ ಯಡಿಯೂರಪ್ಪಜೀ 'ಭೂಮಿಪುತ್ರನ ಜನಕ'' ಎನ್ನುತ್ತಾರೆ ತೇಜಸ್ವಿನಿ ರಮೇಶ್

    ಬಿ.ಎಸ್.ವೈ ವಿರುದ್ಧ ಷಡ್ಯಂತ್ರ ರೂಪಿಸಿದ್ದು ಜೆ.ಡಿ.ಎಸ್

    ಬಿ.ಎಸ್.ವೈ ವಿರುದ್ಧ ಷಡ್ಯಂತ್ರ ರೂಪಿಸಿದ್ದು ಜೆ.ಡಿ.ಎಸ್

    ''ಇಪ್ಪತ್ತು ತಿಂಗಳು ಅಧಿಕಾರವನ್ನು ಅನುಭವಿಸಿದಕ್ಕೆ ಕುಮಾರಸ್ವಾಮಿ ಅಪ್ರತಿಮ ನಾಯಕ ಆದರೆ, 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದು.. ಇವತ್ತಿಗೂ ಪರಿಶ್ರಮದ ರಾಜಕಾರಣ ಮಾಡಿಕೊಂಡು ಬಂದ ಯಡಿಯೂರಪ್ಪಜೀ ವಿರುದ್ಧ ಷಡ್ಯಂತ್ರ ಮಾಡುವುದರಲ್ಲಿ ಜೆಡಿಎಸ್ ಪಕ್ಷ ಮುಂಚೂಣಿಯಲ್ಲಿ ನಿಂತಿತ್ತು'' - ತೇಜಸ್ವಿನಿ ರಮೇಶ್

    'ಭೂಮಿಪುತ್ರ' ಸಿನಿಮಾದಲ್ಲಿ ನೈಜ ಚಿತ್ರಣ ಸಿಗಲ್ಲ!

    'ಭೂಮಿಪುತ್ರ' ಸಿನಿಮಾದಲ್ಲಿ ನೈಜ ಚಿತ್ರಣ ಸಿಗಲ್ಲ!

    ''ಭೂಮಿಪುತ್ರ' ಚಿತ್ರದಲ್ಲಿ ನೈಜ ಚಿತ್ರಣ ಸಿಗುವುದಿಲ್ಲ. ನಮ್ಮ ಕಾರ್ಯಕರ್ತರೆಲ್ಲ ಸೇರಿ 'ಭೂಮಿಪುತ್ರನ ಜನಕ' ಯಡಿಯೂರಪ್ಪನವರ ಬಗ್ಗೆ ನಾವೊಂದು ಸಿನಿಮಾ ಮಾಡ್ತೀವಿ'' - ತೇಜಸ್ವಿನಿ ರಮೇಶ್

    ಕಾರ್ಯಕರ್ತರೇ ದುಡ್ಡು ಹಾಕುತ್ತಾರೆ

    ಕಾರ್ಯಕರ್ತರೇ ದುಡ್ಡು ಹಾಕುತ್ತಾರೆ

    ''ನಮ್ಮ ಕಾರ್ಯಕರ್ತರೆಲ್ಲ ನನ್ನ ಬೆನ್ನತ್ತಿದ್ದಾರೆ. ಯಾರೋ ದುಡ್ಡು ಇರುವ ಕುಳ ಕರ್ಕೊಂಡು ಬಂದು ಸಿನಿಮಾ ಮಾಡೋದಲ್ಲ. ಕಾರ್ಯಕರ್ತರೇ ಒಂದೊಂದು ಲಕ್ಷ ಹಾಕ್ತೀವಿ ಅಂತ ಹೇಳ್ತಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಕಾರ್ಯಕರ್ತರೆಲ್ಲ ಸೇರಿ ದುಡ್ಡು ಹಾಕಿ ಬಿ.ಎಸ್.ವೈ ಬಗ್ಗೆ ನಾವೊಂದು ಸಿನಿಮಾ ಮಾಡುತ್ತೇವೆ'' - ತೇಜಸ್ವಿನಿ ರಮೇಶ್

    ಜೆಡಿಎಸ್ ಷಡ್ಯಂತ್ರ ಬಯಲು ಮಾಡುತ್ತೇವೆ

    ಜೆಡಿಎಸ್ ಷಡ್ಯಂತ್ರ ಬಯಲು ಮಾಡುತ್ತೇವೆ

    ''ಇಪ್ಪತ್ತು ತಿಂಗಳಿನಲ್ಲಿ ಜೆಡಿಎಸ್ ಏನೇನೆಲ್ಲ ಮಾಡಿದೆ ಎಂಬ ನಿಜವಾದ ಚಿತ್ರಣವನ್ನ ನಾವು ತೋರಿಸುತ್ತೇವೆ. ಯಡಿಯೂರಪ್ಪನವರನ್ನ ಮುಗಿಸಲು ಏನೇನು ಷಡ್ಯಂತ ರೂಪಿಸಿದರು ಅಂತ ನಾವು ತೆರೆಗೆ ತರುತ್ತೇವೆ. ಅದರಲ್ಲೂ ವಿಶೇಷವಾಗಿ ಚಿತ್ರವನ್ನ ನಾನೇ ನಿರ್ದೇಶನ ಮಾಡಬೇಕು ಎಂಬುದು ನಮ್ಮ ಕಾರ್ಯಕರ್ತರ ಅಪೇಕ್ಷೆ'' - ತೇಜಸ್ವಿನಿ ರಮೇಶ್

    ನಾನೇ ನಿರ್ದೇಶಕಿ ಆಗುವೆ.!

    ನಾನೇ ನಿರ್ದೇಶಕಿ ಆಗುವೆ.!

    ''ಭೂಮಿಪುತ್ರ' ಸಿನಿಮಾದಲ್ಲಿ ಇಪ್ಪತ್ತು ತಿಂಗಳ ಅವಧಿಯಲ್ಲಿ ಯಡಿಯೂರಪ್ಪ ವಿರುದ್ಧ ಏನು ಷಡ್ಯಂತ್ರ ನಡೆಯಿತು ಎಂಬುದರ ಕುರಿತು ತೋರಿಸುವುದಿಲ್ಲ ಅಂತ ನಮ್ಮ ಕಾರ್ಯಕರ್ತರಿಗೆ ಅನುಮಾನ ಮೂಡಿದೆ. ನಿಜವಾದ ಕ್ಲೈಮ್ಯಾಕ್ಸ್... ಕರೆಕ್ಟಾಗಿ ಸತ್ಯ ಹೇಳಬೇಕು ಎಂದು 'ನೇಗಿಲಯೋಗಿ ಬಿ.ಎಸ್.ವೈ' ಅಥವಾ 'ಭೂಮಿಪುತ್ರನ ಜನಕ ಬಿ.ಎಸ್.ವೈ' ಅಂತ್ಹೇಳಿ ನಾವು ಯಡಿಯೂರಪ್ಪನವರ ಹೆಸರಿನಲ್ಲಿ ಒಂದು ಸಿನಿಮಾ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದೇವೆ. ನಾನೇ ನಿರ್ದೇಶಕಿ. ಕರ್ನಾಟಕ ರಾಜ್ಯದ ಎಲ್ಲ ಬಿಜೆಪಿ ಕಾರ್ಯಕರ್ತರೇ ನಿರ್ಮಾಪಕರು'' - ತೇಜಸ್ವಿನಿ ರಮೇಶ್

    English summary
    Politician Tejaswini Ramesh to direct the movie on BS Yeddyurappa. The title is likely to be 'Bhoomiputrana Janaka BSY' or 'Negilayogi BSY'.
    Saturday, May 20, 2017, 13:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X