twitter
    For Quick Alerts
    ALLOW NOTIFICATIONS  
    For Daily Alerts

    ನಾಲ್ಕು ವಿಶೇಷ ಚಿತ್ರಗಳನ್ನು ನೋಡಿ ವಿಮರ್ಶೆ ಬರೀರಿ

    By Mahesh
    |

    ಇತ್ತೀಚೆಗೆ ಮುಕ್ತಾಯಗೊಂಡ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೆರೆಕಂಡು ಪ್ರೇಕ್ಷಕರ ಮನ್ನಣೆ ಗಳಿಸಿದ ನಾಲ್ಕು ಹೊಸ ನಿರ್ದೇಶಕರ ಕನ್ನಡ ಚಿತ್ರಗಳ ಉತ್ಸವ ಹಾಗೂ ಯುವ ಪ್ರತಿಭೆಗಳಿಗಾಗಿ ಒಂದು ವಿಮರ್ಶಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

    ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ ಟೈಂ ಅಂಡ್ ಸ್ಪೇಸ್ ಚಲನಚಿತ್ರ ಶಾಲೆಯ ಸಹಯೋಗದಲ್ಲಿ ಗೋಪೀನಾಥ್ ಹಾಗೂ ನಿರ್ದೇಶಕ ಕೇಸರಿ ಹರವೂ ಅವರು ಈ ವಿಶೇಷ ಚಿತ್ರ ಪ್ರದರ್ಶನ ಕಮ್ ಸ್ಪರ್ಧೆಯ ರುವಾರಿಗಳಾಗಿದ್ದಾರೆ.ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ ಟೈಂ ಅಂಡ್ ಸ್ಪೇಸ್ ಚಲನಚಿತ್ರ ಶಾಲೆಯ ಸಹಯೋಗದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೆರೆಕಂಡು ಪ್ರೇಕ್ಷಕರ ಮನ್ನಣೆ ಗಳಿಸಿದ ನಾಲ್ಕು ಹೊಸ ನಿರ್ದೇಶಕರ ಕನ್ನಡ ಚಿತ್ರಗಳ ಉತ್ಸವವನ್ನು ಹಮ್ಮಿಕೊಂಡಿದೆ.

    ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸುವ ಈ ಚಿತ್ರೋತ್ಸವ ಡಿಸೆಂಬರ್21ರಿಂದ ನಾಲ್ಕು ಭಾನುವಾರ ನಡೆಯಲಿದೆ. ಪ್ರತಿ ಚಿತ್ರ ಪ್ರದರ್ಶನದ ನಂತರ ನಿರ್ದೇಶಕರೊಂದಿಗೆ ಪ್ರೇಕ್ಷಕರ ಸಂವಾದ ಇರುತ್ತದೆ. ಅಲ್ಲದೇ, ಯುವ ಪ್ರೇಕ್ಷಕರಿಂದ ಚಿತ್ರಗಳ ವಿಮರ್ಷೆಗಳನ್ನು ಆಹ್ವಾನಿಸಲಾಗಿದ್ದು, ಎರಡು ಅತ್ಯುತ್ತಮ ಬರಹಗಳಿಗೆ ಪ್ರೋತ್ಸಾಹದಾಯಕ ಬಹುಮಾನಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಶಂಸಾಪತ್ರಗಳನ್ನು ನೀಡಿ ಉತ್ತೇಜಿಸಲಾಗುತ್ತದೆ.

    BIFF acclaimed four Kannada films Screening

    ವಿಚಾರ ಸಂಕಿರಣ: ಜನವರಿ 18ರಂದು ನಡೆಯುವ ನಾಲ್ಕೂ ಚಿತ್ರಗಳ ಕುರಿತ ವಿಚಾರ ಸಂಕಿರಣದಲ್ಲಿ ಗಿರೀಶ್ ಕಾಸರವಳ್ಳಿ, ಮನು ಚಕ್ರವರ್ತಿ, ಕಲಾ ವಿಮರ್ಶಕ ಅನಿಲ್ ಕುಮಾರ್, ಬಸಂತಕುಮಾರ್ ಪಾಟೀಲ್, ವಿದ್ಯಾಶಂಕರ್, ಗೋಪಾಲಕೃಷ್ಣ ಪೈ, ಕೇಸರಿ ಹರವೂ, ಎನ್. ಎಸ್. ಶ್ರೀಧರಮೂರ್ತಿ, ಬಿ.ಎಂ. ಹನೀಫ್, ಮುಂತಾದ ನಿರ್ದೇಶಕರು, ನಿರ್ಮಾಪಕರು ಮತ್ತು ವಿಮರ್ಷಕರು ಪಾಲ್ಗೊಳ್ಳಲಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

    ಚಿತ್ರ ವೀಕ್ಷಣೆಗೆ ಉಚಿತ ಪ್ರವೇಶ ಹಾಗೂ ವಿಮರ್ಶಾ ಸ್ಪರ್ಧೆಯಲ್ಲಿ ಭಾಗವಹಿಸಿವುದಕ್ಕೆ ಮುಂಗಡವಾಗಿ ನೋಂದಾಯಿಸಿಕೊಳ್ಳಬೇಕಿರುತ್ತದೆ. ಸಂಪರ್ಕ ಸಂಖ್ಯೆಗಳು: 8892795666 / 9945342433

    ಚಿತ್ರಗಳ ಪ್ರದರ್ಶನ ವೇಳಾಪಟ್ಟಿ:

    ಡಿಸೆಂಬರ್ 21: ‘ಹಜ್ಝ್' ನಿ: ನಿಖಿಲ್ ಮಂಜು

    ಡಿಸೆಂಬರ್ 28: ‘ಅಗಸೀ ಪಾರ್ಲರ್' ನಿ: ಮಹಾಂತೇಶ್ ರಾಂದುರ್ಗ್

    ಜನವರಿ 04: ‘ಹರಿವು' ನಿ: ಮಂಜುನಾಥ ಮನ್ಸೂರೆ

    ಜನವರಿ 11: ‘ಅತ್ತಿಹಣ್ಣು ಮತ್ತು ಕಣಜ' ನಿ: ಪ್ರಕಾಶ್ ಬಾಬು

    ಸಮಯ: ಪ್ರತೀ ಭಾನುವಾರ ಸಂಜೆ 5.30ಕ್ಕೆ

    ಜನವರಿ 18: ಮದ್ಯಾನ್ಹ 3ಕ್ಕೆ ವಿಚಾರ ಸಂಕಿರಣ ಹಾಗೂ ಸಮಾರೋಪ

    ಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ, ನಂ 151, 7ನೇ ಅಡ್ಡರಸ್ತೆ, ಟೀಚರ್ಸ್ ಕಾಲೋನಿ 1ನೇ ಹಂತ, ದಯಾನಂದ ಕಾಲೇಜು ಬಳಿ, ವಸುಧಾ ಭವನದ ಎದುರು, ಬೆಂಗಳೂರು 560078.

    English summary
    K V Subbanna Aptha Rangamandiara and Time & Space Film School, Bengaluru are organising a festival of four Kannada films directed by debutant filmmakers that proved distinctive at the recently concluded Bengaluru International Film Festival.
    Monday, December 22, 2014, 19:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X