»   » ಅವರ ಮುದ್ದಿನ ನಾಯಿ ಸತ್ತು ಹೋಯಿತಂತೆ

ಅವರ ಮುದ್ದಿನ ನಾಯಿ ಸತ್ತು ಹೋಯಿತಂತೆ

Posted by:
Subscribe to Filmibeat Kannada

ನಾಯಿಗಳೇ ಹಾಗೆ, ಯಾರಿಗೆ ಆಗಲಿ ಅಚ್ಚುಮೆಚ್ಚು. ಆದರೆ ಕೆಲವರು ಅದನ್ನು ಅಸಹ್ಯಿಸಿಕೊಳ್ಳುವುದೂ ಉಂಟು.

ಆದರೆ ಬಾಲಿವುಡ್ ಬಾದಷಾ, ಬಿಗ್ ಬಿ ಎಂದೆಲ್ಲಾ ಬಿರುದಾಂಕಿತ ಅಮಿತಾಬ್ ಬಚ್ಚನ್ ಇದ್ದಾರಲ್ಲ ಅವರು ಒಂದು ನಾಯಿಯನ್ನು ಮುದ್ದುಮುದ್ದಾಗಿ ಅತ್ಯಂತ ಮುತುವರ್ಜಿಯಿಂದ ಸಾಕಿದ್ದರು. ಅದು ನಿನ್ನೆ ಅಸುನೀಗಿದೆ.

ದೊಡ್ಡವರ ವಿಷಯವೇ ಹಾಗೆ. ಅವರ ಮನೆಯಲ್ಲಿ ನಾಯಿ, ಬೆಕ್ಕು ಸತ್ತರೂ ಸುದ್ದಿಯಾಗುತ್ತದೆ. ಹಾಗೆ ಅಮಿತಾಬ್ ಮನೆಯಲ್ಲಿ ನಾಯಿ ಸತ್ತಿದ್ದೂ ದೊಡ್ಡ ಸುದ್ದಿಯಾಗಿದೆ. ಅಮಿತಾಬ್ ತಮ್ಮ ನಾಯಿಗೆ ಶನೂಕ್ ಎಂದು ಹೆಸರಿಟ್ಟಿದ್ದರು. ಇತ್ತೀಚೆಗೆ ಅದಕ್ಕೆ ಅನಾರೋಗ್ಯ ಕಾಡಿತ್ತು. ಅದು ನಿನ್ನೆ ಗುರುವಾರ ಕೊನೆಯುಸಿರೆಳೆದಿದೆ.

big-b-amitabh-pet-dog-shanouk-died-due-to-illness

ಶನೂಕ್ ನಾಯಿಯನ್ನು 70 ವರ್ಷದ ಅಮಿತಾಬ್ ತಮ್ಮ ಪುತ್ರ ಅಭಿಷೇಕ್ ಗೆ 2006ರ ಫೆಬ್ರವರಿ 5ರಂದು ಆತನ ಹುಟ್ಟುಹಬ್ಬದ ಕಾಣಿಕೆಯಾಗಿ ನೀಡಿದ್ದರು. ಅದಕ್ಕೆ ಅಬಿಷೇಕ್ ತಕ್ಷಣ ಶನೂಕ್ ಎಂದೂ ಹೆಸರಿಟ್ಟರು. ಅಂದಹಾಗೆ ಶನೂಕ್ ಅಂದರೆ ಆಹ್ಲಾದಕರ ಬೆಳಗಿನ ವಾತಾವರಣದಲ್ಲಿ ಬೀಸುವ ತಂಗಾಳಿ ಎಂಬ ಅರ್ಥವಿದೆ.

ಶ್ವಾನಪ್ರಿಯ ಅಮಿತಾಬ್ ಗೆ ಈ Piranha Dane dog ಅಂದರೆ ಎಲ್ಲಿಲ್ಲದ ಪ್ರೀತಿ. ಇದು ಜಗತ್ತಿನ ಅತಿ ಎತ್ತರದ ಜಾತಿ ನಾಯಿ. ಬಿಗ್ ಬಿ ಹೆಸರಿಗೆ ತಕ್ಕಂತೆ ಇದೂ ಬಿಗ್ಗೇ!

ಅಪ್ಪ-ಮಗ ಇಬ್ಬರೂ ಸಾಮಾಜಿಕ ಜಾಲ ತಾಣದಲ್ಲಿ ಶನೂಕ್ ಸಾವಿಗೆ ಕಂಬನಿಗರೆದಿದ್ದಾರೆ. ಅಮಿತಾಬ್ ಮನೆಯಲ್ಲಿ ಇಲ್ಲಾಂದ್ರೆ ಅವರ ಬೆಡ್ ಮೇಲೆ ಪವಡಿಸುವ ಭಾಗ್ಯ ಶನೂಕ್ ಪಡೆದಿತ್ತು. ಕಾನ್ ಉತ್ಸವದಲ್ಲಿ ಪಾಲ್ಗೊಂಡಿದ್ದ ಅಭಿಷೇಕ್ ಕುಟುಂಬ ಗುರುವಾರ ಸಂಜೆ ಮುಂಬೈಗೆ ವಾಪಸಾಗಿದೆ.
ಟ್ವೀಟ್ 1:

ಅಭಿಷೇಕ್ ಟ್ವೀಟ್:

English summary
Amitabh Bachchan's pet dog Shanouk died due to illness
Please Wait while comments are loading...

Kannada Photos

Go to : More Photos