»   » ಬಿಗ್ ಬಾಸ್ ಮನೆಯಿಂದ ಹೊರಬಂದ ಚಂದನ್ ಈಗೇನ್ಮಾಡ್ತಿದ್ದಾರೆ

ಬಿಗ್ ಬಾಸ್ ಮನೆಯಿಂದ ಹೊರಬಂದ ಚಂದನ್ ಈಗೇನ್ಮಾಡ್ತಿದ್ದಾರೆ

Posted by:
Subscribe to Filmibeat Kannada

ಚಂದನವನದ ಚೆಂದದ ನಟ ಚಂದನ್ ಅವರು ಬಿಗ್ ಬಾಸ್ ಮನೆಯಲ್ಲಿ ರನ್ನರ್ ಅಪ್ ಆಗಿ ಹೊರಬಂದ ಮೇಲೆ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಅಂದಹಾಗೆ ಬಿಗ್ ಬಾಸ್ ಮನೆಯಲ್ಲಿ ಬರೋಬ್ಬರಿ 98 ದಿನಗಳನ್ನು ಪೂರೈಸಿ ಎಲ್ಲರ ಮನೆ-ಮನ ಮೆಚ್ಚಿದ ನಟ ಚಂದನ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಏನು ಮಾಡುತ್ತಿರಬಹುದು ಎಂಬುದು ಎಲ್ಲರ ಕುತೂಹಲ.['ಫೇಕ್ ಶೋ' ಬಿಗ್ ಬಾಸ್ ಗೆ ಛೀಮಾರಿ ಹಾಕಿದ ವೀಕ್ಷಕರು!]

ಅದಕ್ಕೆ ಖುದ್ದು ಚಂದನ್ ಅವರೇ ತಮ್ಮ ಫೇಸ್ ಬುಕ್ಕಿನಲ್ಲಿ ಸಾಕಷ್ಟು ಫೊಟೋಗಳನ್ನು ಹಾಕುವ ಮೂಲಕ ತಮ್ಮೆಲ್ಲಾ ಅಭಿಮಾನಿಗಳಿಗೆ ಉತ್ತರವನ್ನು ನೀಡಿದ್ದಾರೆ.

ಹೌದು ನಟ ಚಂದನ್ ಅವರು ಸದ್ಯಕ್ಕೆ ತಮ್ಮ ಮನೆಯಲ್ಲಿ ಮುದ್ದು ಅಮ್ಮ ಮತ್ತು ಮುದ್ದು ಕಂದಮ್ಮನ ಜೊತೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.['ಬಿಗ್ ಬಾಸ್-3' ; ಚಂದನ್ ಗೆ ಸಿಕ್ಕ ಸೀಕ್ರೆಟ್ ಟಾಸ್ಕ್ ಏನು?]

ಚಂದನ್ ಅವರು ಬರೀ ಮಗುವಿನ ಜೊತೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಿದ್ದು ಮಾತ್ರವಲ್ಲದೇ ಸ್ಯಾಂಡಲ್ ವುಡ್ ನ ಹಲವಾರು ಸ್ಟಾರ್ ನಟರನ್ನು ಭೇಟಿ ಮಾಡುತ್ತಿದ್ದಾರೆ. ಅಂದಹಾಗೆ ಯಾವ ಯಾವ ನಟರನ್ನು ಭೇಟಿ ಮಾಡಿದ್ದಾರೆ ಎಂಬುದನ್ನೇ ನೋಡಬೇಕೇ? ಹಾಗಿದ್ರೆ ಸ್ಲೈಡ್ಸ್ ಕ್ಲಿಕ್ ಮಾಡಿ...

ಚಂದನ್ ನ್ಯೂ ಲುಕ್

ಚಂದನ್ ನ್ಯೂ ಲುಕ್

ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ನಟ ಚಂದನ್ ಅವರು ಸದ್ಯಕ್ಕೆ ತಮ್ಮ ಕಾರಿನಲ್ಲಿ ಹೊರಗಡೆ ಎಲ್ಲಾ ಜಾಲಿ ರೈಡ್ ಮಾಡುತ್ತಿದ್ದಾರೆ. ಜೊತೆಗೆ ಮುಂದಿನ ಪ್ರಾಜೆಕ್ಟ್ ಗಳನ್ನು ಒಂದೊಂದಾಗಿ ಕೈಗೆತ್ತಿಕೊಳ್ಳುತ್ತಿದ್ದಾರೆ.

ಮುದ್ದು ಮಗುವಿನ ಜೊತೆ ಚಂದನ್

ಮುದ್ದು ಮಗುವಿನ ಜೊತೆ ಚಂದನ್

ಮನೆಯಲ್ಲಿ ಹಾಯಾಗಿ ಕಾಲ ಕಳೆಯುತ್ತಿರುವ ನಟ ಚಂದನ್ ಅವರು ಮನೆಯಲ್ಲಿ ಅಮ್ಮ ಮತ್ತು ಮುದ್ದು ಮಗುವಿನ ಜೊತೆ ಎಂಜಾಯ್ ಮಾಡುತ್ತಿದ್ದಾರೆ.

ಶಿವಣ್ಣ ಜೊತೆ ಚಂದನ್

ಶಿವಣ್ಣ ಜೊತೆ ಚಂದನ್

ಬಿಗ್ ಬಾಸ್ ಮನೆಯಿಂದ ಹೊರಬಂದ ನಟ ಚಂದನ್ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಶಿವಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಚಂದನ್ ಅವರು ಸೆಂಚುರಿ ಸ್ಟಾರ್ ಅವರ ಜೊತೆ ಮಾತನಾಡಿ ಅವರ ಆಶೀರ್ವಾದ ಪಡೆದರು.

ಮಂಗಳಾ ರಾಘವೇಂದ್ರ ರಾಜ್-ಚಂದನ್

ಮಂಗಳಾ ರಾಘವೇಂದ್ರ ರಾಜ್-ಚಂದನ್

ಇಡೀ ರಾಜ್ ಫ್ಯಾಮಿಲಿಯನ್ನು ಭೇಟಿ ಮಾಡಿದ ಚಂದನ್ ಅವರು ರಾಘವೇಂದ್ರ ರಾಜ್ ಕುಮಾರ್ ಅವರ ಪತ್ನಿ ಮಂಗಳಾ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಕೂಡ ಭೇಟಿ ಮಾಡಿ ಮಾತನಾಡಿದ್ದರು.

ಪವರ್ ವಿತ್ ಚಂದನ್

ಪವರ್ ವಿತ್ ಚಂದನ್

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕೂಡ ಭೇಟಿ ಮಾಡಿ ತಮ್ಮ ಮುಂದಿನ ಚಿತ್ರಗಳಲ್ಲಿ ನಟಿಸಲು ಕೆಲವು ಸಲಹೆ ಸೂಚನೆಗಳನ್ನು ಪಡೆದುಕೊಂಡರು.

English summary
The well-known contestant of the reality show Bigg Boss 3, Chandan meets Powerstar Puneeth Rajkumar and his family.
Please Wait while comments are loading...

Kannada Photos

Go to : More Photos