»   » 'ಐಟಂ ಹುಡುಗಿ'ಯಾದ 'ಬಿಗ್ ಬಾಸ್' ಸಂಜನಾ!

'ಐಟಂ ಹುಡುಗಿ'ಯಾದ 'ಬಿಗ್ ಬಾಸ್' ಸಂಜನಾ!

Posted by:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4, 'ಕಾರ್ಯಕ್ರಮದಲ್ಲಿ ನಟಿ ಸಂಜನಾ ಒಂದು ಮಾತು ಹೇಳಿದ್ದರು. ''ಇನ್ಮುಂದೆ ನಾನು ಧಾರವಾಹಿಗಳಲ್ಲಿ ನಟಿಸುವುದಿಲ್ಲ. ಸಿನಿಮಾಗಳ ಆಫರ್ ಬಂದ್ರೆ ಖಂಡಿತಾ ನಟಿಸುತ್ತೇನೆ'' ಎಂದು.

ಹೇಳಿದ ಮಾತಿನಂತೆ ಈಗ ಧಾರವಾಹಿಯಿಂದ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ 'ಬಿಗ್ ಬಾಸ್' ಸಂಜನಾ. ಹೌದು, 'ಬಿಗ್ ಬಾಸ್' ಮನೆಯಿಂದ ಹೊರಬರುತ್ತಿದ್ದ ಹಾಗೆ ಚಂದನವನಕ್ಕೆ ಕಾಲಿಟ್ಟ ಸಂಜನಾ ಅವರ ಮೊದಲ ಆಯ್ಕೆ ಐಟಂ ಸಾಂಗ್ ಆಗಿದೆ.['ಬಿಗ್ ಬಾಸ್' ಮನೆಯಿಂದ ಹೊರಬಿದ್ದ ನಟಿ ಸಂಜನಾ!]

ಹೌದು, 'ಮೊಂಬತ್ತಿ' ಚಿತ್ರದ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ಸಂಜನಾ ಪಡ್ಡೆ ಹುಡುಗರ ತಲೆಕೆಡಿಸಿದ್ದಾರೆ. ಮುಂದೆ ನೋಡಿ...

ಐಟಂ ಹಾಡಿನಲ್ಲಿ 'ಬಿಗ್ ಬಾಸ್' ಸಂಜನಾ!

ಐಟಂ ಹಾಡಿನಲ್ಲಿ 'ಬಿಗ್ ಬಾಸ್' ಸಂಜನಾ!

'ಬಿಗ್ ಬಾಸ್ ಕನ್ನಡ 4' ಕಾರ್ಯಕ್ರಮದಲ್ಲಿ ಸ್ವರ್ಧಿಯಾಗಿದ್ದ ಸಂಜನಾ, ಈಗ 'ಮೊಂಬತ್ತಿ' ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.['ಬಿಗ್ ಬಾಸ್'ನಿಂದ ಹೊರಬಂದ ಮೇಲೆ ಸಂಜನಾ-ಭುವನ್ ಮೊದಲ ಭೇಟಿ!]

ಹಾಟ್ ಲುಕ್ ನಲ್ಲಿ ಸಂಜನಾ!

ಹಾಟ್ ಲುಕ್ ನಲ್ಲಿ ಸಂಜನಾ!

ತಮ್ಮ ಮೋಹಕ ಸೌಂದರ್ಯದಿಂದ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಸಂಜನಾ, ಈ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವೈಟ್ ಟಾಪ್ ಮತ್ತು ಬ್ಲೂ ಶಾರ್ಟ್ಸ್ ನಲ್ಲಿ ಕುಣಿದಿದ್ದಾರೆ.[ಭುವನ್ ಗೆ ಎಲಿಮಿನೇಷನ್ ಬಿಸಿ ಮುಟ್ಟಿಸಿದ ಕಿಚ್ಚ: ಕಣ್ಣೀರಿಟ್ಟ ಸಂಜನಾ]

`ಏನೇ ಬರಲಿ ಡ್ಯಾಮ್ ಐ ಡೋಂಟ್ ಕೇರ್...'ಎಂದ ಸಂಜನಾ!

`ಏನೇ ಬರಲಿ ಡ್ಯಾಮ್ ಐ ಡೋಂಟ್ ಕೇರ್...'ಎಂದ ಸಂಜನಾ!

`ಏನೇ ಬರಲಿ ಡ್ಯಾಮ್ ಐ ಡೋಂಟ್ ಕೇರ್...' ಎನ್ನುವ ಈ ಹಾಡಿಗೆ ಸಂಜನಾ ಸ್ಟೆಪ್ ಹಾಕಿದ್ದು, ಈ ಹಾಡಿನಲ್ಲಿ ಸಂಜನಾ ಅವರ ಜೊತೆ ಅಕ್ಷಯ್ ಮತ್ತು ರೋಬೋ ಗಣೇಶ್ ಕಾಣಿಸಿಕೊಂಡಿದ್ದಾರೆ.

ಸಾಂಗ್ ಕಂಪ್ಲೀಟ್!

ಸಾಂಗ್ ಕಂಪ್ಲೀಟ್!

ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಿ ಈ ಹಾಡನ್ನ ಚಿತ್ರೀಕರಣ ಮಾಡಲಾಗಿದ್ದು, ಈ ಹಾಡಿನ ಮೂಲಕ 'ಮೊಂಬತ್ತಿ' ಚಿತ್ರದ ಚಿತ್ರೀಕರಣ ಕೂಡ ಮುಕ್ತಾಯಗೊಂಡಿದೆ.

'ಮೊಂಬತ್ತಿ'ಯಲ್ಲಿ ನೀತೂ ಪೊಲೀಸ್!

'ಮೊಂಬತ್ತಿ'ಯಲ್ಲಿ ನೀತೂ ಪೊಲೀಸ್!

ವಿಶೇಷ ಅಂದ್ರೆ, 'ಮೊಂಬತ್ತಿ' ಚಿತ್ರದಲ್ಲಿ ನೀತೂ ಕೂಡ ಅಭಿನಯಿಸಿದ್ದು, ಪೊಲೀಸ್ ಆಫೀಸರ್ ಆಗಿ ಬಣ್ಣ ಹಚ್ಚಿದ್ದಾರೆ. ಅಷ್ಟೇ ಅಲ್ಲದೇ ಜಬರ್ ದಸ್ತ್ ಆಕ್ಷನ್ ಸೀನ್ ಗಳಲ್ಲೂ ಅಬ್ಬರಿಸಿದ್ದಾರೆ.

'ಮೊಂಬತ್ತಿ' ಚಿತ್ರದ ಪರಿಚಯ!

'ಮೊಂಬತ್ತಿ' ಚಿತ್ರದ ಪರಿಚಯ!

ರವಿಕುಮಾರ್ ಚಿತ್ರದ ನಾಯಕನಾಗಿದ್ದು, ರಚನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಶ್ರೀನಿವಾಸ್ ಕೌಶಿಕ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಶ್ಯಾಮ್ ಛಾಯಾಗ್ರಹಣ ಮಾಡಿದರೆ, ಸತೀಶ್ ಬಾಬು ಸಂಗೀತವಿದೆ.

English summary
After Elimination From Biggboss Kannada 4, Actress Sanjana Was Completed item Number Shooting for Upcoming Kannada film ‘Mombathi’. Check out in pics.....
Please Wait while comments are loading...

Kannada Photos

Go to : More Photos