»   » ಅಂತೂ ಇಂತೂ 'ಪ್ರಥಮ್' ಕೈಗೆ ಅರ್ಧಕೋಟಿ ಹಣ ಬಂತು!

ಅಂತೂ ಇಂತೂ 'ಪ್ರಥಮ್' ಕೈಗೆ ಅರ್ಧಕೋಟಿ ಹಣ ಬಂತು!

Posted by:
Subscribe to Filmibeat Kannada

ಇತ್ತೀಚೆಗಷ್ಟೇ ಒಳ್ಳೆ ಹುಡುಗ ಪ್ರಥಮ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಕಾಂಮೆಂಟ್ ಗಳು ಹರಿದಾಡಿದ್ವು. 'ಬಿಗ್ ಬಾಸ್'ನಲ್ಲಿ ಗೆದ್ದ ಹಣವನ್ನ ಯೋಧರ ಕುಟುಂಬಕ್ಕೆ, ರೈತರ ಕುಟುಂಬಕ್ಕೆ ಕೊಟ್ಟಿಲ್ಲ. ಗೆದ್ದ ಹಣ ಕೈಗೆ ಬಂದಿದ್ದರೂ ಯಾರಿಗೂ ಸಹಾಯ ಮಾಡಿಲ್ಲ ಎಂಬ ಮಾತುಗಳು ಚರ್ಚೆಯಾಗುತ್ತಿದ್ದವು.['ಬಿಗ್ ಬಾಸ್' ಹಣದ ವಿಚಾರದಲ್ಲಿ ಸಿಡಿದೆದ್ದ 'ಒಳ್ಳೆ ಹುಡುಗ ಪ್ರಥಮ್']

ಈ ಬೆಳವಣಿಗೆಯನ್ನೆಲ್ಲ ಗಮನಿಸಿದ್ದ ಪ್ರಥಮ್, ಫೇಸ್ ಬುಕ್ ಲೈವ್ ನಲ್ಲಿ ಕಾಮೆಂಟ್ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಕೇವಲ ಮೂರು ದಿನದಲ್ಲೇ ಪ್ರಥಮ್ ಕೈಗೆ ಅರ್ಧಕೋಟಿ ಹಣ ಬಂದು ಸೇರಿದೆ. ಮುಂದೆ ಓದಿ.....

ಪ್ರಥಮ್ ಕೈಗೆ ಬಂತು ಅರ್ಧಕೋಟಿ

ಪ್ರಥಮ್ ಕೈಗೆ ಬಂತು ಅರ್ಧಕೋಟಿ

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಗೆದ್ದ ಪ್ರಥಮ್ ಗೆ 50 ಲಕ್ಷ ಬಹುಮಾನ ಸಿಕ್ಕಿತ್ತು. ಆದ್ರೆ, ಸೂಕ್ತವಾದ ದಾಖಲೆಗಳನ್ನ ಒದಗಿಸಿದಿದ್ದಲ್ಲಿ ಕಲರ್ಸ್ ವಾಹಿನಿ ಅವರು ಪ್ರಥಮ್ ಗೆ ದುಡ್ಡು ಕೊಟ್ಟಿರಲಿಲ್ಲ. ಈಗ ದಾಖಲೆಗಳನ್ನ ಒದಗಿಸಿದ ನಂತರ ಬಹುಮಾನ ಹಣವನ್ನ ನೀಡಿದ್ದಾರೆ.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

ಏಪ್ರಿಲ್ 1ಕ್ಕೆ ಪ್ರಥಮ್ ಕೈಸೇರಿದ ಹಣ

ಏಪ್ರಿಲ್ 1ಕ್ಕೆ ಪ್ರಥಮ್ ಕೈಸೇರಿದ ಹಣ

ಏಪ್ರಿಲ್ 1 ರಂದು 'ಬಿಗ್ ಬಾಸ್'ನಲ್ಲಿ ಗೆದ್ದ ಹಣ ಕೈಗೆ ಬಂದಿರುವುದಾಗಿ ಪ್ರಥಮ್ ಸ್ವಷ್ಟಪಡಿಸಿದ್ದಾರೆ. ಈ ಹಣವನ್ನ ಆದಷ್ಟೂ ನೀಡಬೇಕಾಗಿರುವವರಿಗೆ ನೀಡುವುದಾಗಿ ಕೂಡ ತಿಳಿಸಿದ್ದಾರೆ.[ಹುತಾತ್ಮ ಯೋಧ ಸಂದೀಪ್ ಕುಟುಂಬಕ್ಕೆ ನೆರವಾದ 'ಬಿಗ್ ಬಾಸ್' ಪ್ರಥಮ್]

ಯೋಧರಿಗೆ-ರೈತರಿಗೆ ನೀಡುವುದಾಗಿ ಘೋಷಿಸಿದ್ದ ಪ್ರಥಮ್

ಯೋಧರಿಗೆ-ರೈತರಿಗೆ ನೀಡುವುದಾಗಿ ಘೋಷಿಸಿದ್ದ ಪ್ರಥಮ್

'ಬಿಗ್ ಬಾಸ್'ನಲ್ಲಿ ಗೆದ್ದ ಹಣವನ್ನ ದೇಶಕ್ಕಾಗಿ ಹೋರಾಡುವ ಯೋಧರಿಗೆ, ರೈತರಿಗೆ ನೀಡುವುದಾಗಿ, ಪ್ರಥಮ್ ಮತ್ತು ಪ್ರಥಮ್ ಅವರ ತಂದೆ ಮಲ್ಲಣ್ಣ ಬಿಗ್ ಬಾಸ್ ವೇದಿಕೆಯಲ್ಲಿ ಘೋಷಿಸಿದ್ದರು.['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ಪ್ರಥಮ್ ಸಿನಿಮಾಗಳಲ್ಲಿ ಬ್ಯುಸಿ!

ಪ್ರಥಮ್ ಸಿನಿಮಾಗಳಲ್ಲಿ ಬ್ಯುಸಿ!

ಸದ್ಯ, ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ 'ದೇವ್ರಂತಾ ಮನುಷ್ಯ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲದೇ ಬೇರೆ ಚಿತ್ರಗಳ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವಿಶೇಷ ಕಾರ್ಯಕ್ರಮಗಳಲ್ಲೂ ಒಳ್ಳೆ ಹುಡುಗ ತೊಡಗಿಕೊಂಡಿದ್ದಾರೆ.['ದೇವ್ರಂಥ ಮನುಷ್ಯ' ಪ್ರಥಮ್ ಗೆ ಇಬ್ಬರು ನಾಯಕಿಯರು]

English summary
Biggboss Winner Pratham Get Winning Prize of Biggboss kannada 4 Reality show.
Please Wait while comments are loading...

Kannada Photos

Go to : More Photos