»   » ಬರ್ತಡೇ ಬಾಯ್ ದುನಿಯಾ ವಿಜಯ್ ಹೊಸ ಸಿನಿಮಾ ಗವಿ

ಬರ್ತಡೇ ಬಾಯ್ ದುನಿಯಾ ವಿಜಯ್ ಹೊಸ ಸಿನಿಮಾ ಗವಿ

Written by: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನ ಕಿಂಗ್ ಕೋಬ್ರಾ ದುನಿಯಾ ವಿಜಯ್ ಗೆ ನಲವತ್ತೊಂದನೇ ಹುಟ್ಟುಹಬ್ಬದ ಸಂಭ್ರಮ ಇಂದು (ಜ.20). ವಿಜಿ ಅಭಿಮಾನಿಗಳು ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿದ್ರೆ ವಿಜಿ ಅಭಿನಯದ ಹೊಸ ಸಿನಿಮಾಗೆ ಕೂಡ ತಯಾರಿ ಜೋರಾಗಿದೆ.

ದುನಿಯಾ ವಿಜಯ್ ಕೋಬ್ರಾ ನಂತರ ಅಭಿನಯಿಸ್ತಿರೋ ಚಿತ್ರದ ಹೆಸ್ರು 'ಗವಿ'. ಗವಿ ಅಂದ ಕೋಡಲೇ ಗವಿ ಗಂಗಾಧರೇಶ್ವರ ದೇವಸ್ಥಾನ ನೆನಪಾಗುತ್ತೆ. ಆದ್ರೆ ಇಲ್ಲಿ ಗವಿಗೂ ಗವಿ ಗಂಗಾಧರೇಶ್ವರನಿಗೂ ಟೈಟಲ್ ನಲ್ಲಿ ಯಾವುದೇ ಸಂಬಂಧವಿಲ್ಲ. ಆದ್ರೆ ಗವಿ ಅನ್ನೋದು ಒಂದು ಸೌಂಡಿಂಗ್ ಟೈಟಲ್ ಅನ್ನೋದು ಸತ್ಯ. [ಮೂರು ಕಥೆಗಳ ರೀಮಿಕ್ಸ್ 'ಜಾಕ್ಸನ್'ಗೆ ಮೂರು ಸ್ಟಾರ್]

ಇನ್ನು ಗವಿ ಅಂದ್ರೆ ಗುಹೆ ಅನ್ನೋ ಅರ್ಥ ಬರುತ್ತೆ. ಇಷ್ಟಕ್ಕೂ ಗವಿ ಸಿನಿಮಾವನ್ನ ಡೈರೆಕ್ಟ್ ಮಾಡ್ತಿರೋದು ರವಿ ಶ್ರೀವತ್ಸ. ಡೆಡ್ಲಿ ಸೋಮದಂತಹ ಸೂಪರ್ ಡ್ಯೂಪರ್ ಹಿಟ್ ರೌಡಿಯಿಸಂ ಸಿನಿಮಾ ಕೊಟ್ಟಿದ್ದ ನಿರ್ದೇಶಕ ರವಿ ಶ್ರೀವತ್ಸ ಈಗ ಮತ್ತೊಂದು ಮಾಸ್ ಸಿನಿಮಾಗೆ ಪ್ಲಾನ್ ಮಾಡಿದ್ದಾರೆ.


ಇಷ್ಟಕ್ಕೂ ಗವಿ ಎಂಬ ಶೀರ್ಷಿಕೆ ಇಡಲು ಕಾರಣ, ವಿಜಿ ಸ್ಟಾರ್ ಆಗುವುದಕ್ಕೂ ಮುನ್ನ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಹೆಚ್ಚಾಗಿ ಹೋಗಿ ಬರುತ್ತಿದ್ದರಂತೆ. ಇತ್ತೀಚೆಗೆ ರವಿ ಶ್ರೀವತ್ಸ ಜೊತೆಗೆ ವಿಜಿ ದೇವಸ್ಥಾನಕ್ಕೆ ಹೋಗಿದ್ದಾಗ. ತಮ್ಮ 25ನೇ ಚಿತ್ರಕ್ಕೆ 'ಗವಿ' ಎಂದು ಹೆಸರಿಟ್ಟರೆ ಹೇಗೆ ಎಂದು ಕೇಳಿದರಂತೆ ರವಿ.

ದೇವಸ್ಥಾನದಲ್ಲೇ ಈ ಶೀರ್ಷಿಕೆ ಹೊಳೆದದ್ದು ಕೇಳಿದ ಥ್ರಿಲ್ ಆದ ವಿಜಿ ಓಕೆ ಎಂದಿದ್ದಾರೆ. ಬಳಿಕ ಒಂದು ಸಲಹೆಯನ್ನೂ ನೀಡಿದರಂತೆ. ಗವಿ ಅಲಿಯಾಸ್ ಗಂಗಾಧರ ಎಂದು. ಒಟ್ನಲ್ಲಿ ಈ ಚಿತ್ರ ಗವಿ ಗಂಗಾಧರೇಶ್ವರನ ಪ್ರೇರಣೆ ಇದೆ ಎಂಬುದು ವಿಜಿ ಅವರ ನಂಬಿಕೆ.

ಸ್ಟಾರ್ ನಟನಾಗುವುದಕ್ಕೂ ಮುನ್ನ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ ಸಂದರ್ಭದಲ್ಲಿ ಇದೇ ಗವಿ ಗಂಗಾಧರೇಶ್ವರನ ಗುಡಿಯ ಮುಂದೆ ನಡೆದ ಒಂದು ಅಹಿತಕರ ಘಟನೆಯೂ ವಿಜಿ ಇನ್ನೂ ಮರೆತಿಲ್ಲ. ಪೇಮಂಟ್ ಗಾಗಿ ಸಂಜೆ ಇಲ್ಲಿಗೆ ಬರಲು ಹೇಳಿದ್ದ ನಿರ್ಮಾಪಕರೊಬ್ಬರು ಅವರ ಮೇಲೆ ಕೈಮಾಡಿದ್ದರಂತೆ.

ಆಗ ಇದೇ ಜಾಗದಲ್ಲಿ ತಾನು ಒಂದಿನ ಹೀರೋ ಆಗುತ್ತೇನೆ ನೋಡ್ತಾ ಇರು ಎಂದು ಚಾಲೆಂಜ್ ಹಾಕಿ ಹೋಗಿದ್ದರು ವಿಜಿ. ಈಗ ಅದೇ ಜಾಗದಲ್ಲಿ ಕಾಕತಾಳೀಯ ಎಂಬಂತೆ 'ಗವಿ' ಶೀರ್ಷಿಕೆ ಇಟ್ಟಿರುವುದು ಅವರಿಗೆ ಖುಷಿ ಕೊಟ್ಟಿದೆ.

ರವಿ ಶ್ರೀವತ್ಸ ಅವರು ಹೇಳಿಕೇಳಿ ಮಾಸ್ ನಿರ್ದೇಶಕ. ಇನ್ನು ಗವಿ ಚಿತ್ರವೂ ಅದೇ ರೀತಿಯ ಮಾಸ್ ಎಲಿಮೆಂಟ್ಸ್ ನಿಂದ ಕೂಡಿರುತ್ತದೆ. ದುನಿಯಾ ವಿಜಯ್ ಅಭಿನಯದ 25ನೇ ಚಿತ್ರ ಇದು. ದುನಿಯಾ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

English summary
Birthday boy Duniya Vijay celebrating 41st birthday on 20th January. In the meantime Duniya Vijay has given his nod for a new film 'Gavi', which is said to be held by Ravi Srivatsa.
Please Wait while comments are loading...

Kannada Photos

Go to : More Photos