twitter
    For Quick Alerts
    ALLOW NOTIFICATIONS  
    For Daily Alerts

    ಬರ್ತ್ ಡೇ ಸ್ಪೆಷಲ್: ಕಿಚ್ಚನಿಗೆ ಬ್ರೇಕ್ ಕೊಟ್ಟ 'ಆ' 5 ಸಿನ್ಮಾಗಳು

    By Suneetha
    |

    ಕಿಚ್ಚ ಸುದೀಪ್ ಅವರು ಇಂದು ಎಲ್ಲರಿಗೂ ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿದರೂ ಕೂಡ, ಒಂದು ಕಾಲದಲ್ಲಿ ಇದೇ ಸ್ಥಾನ ಅಲಂಕರಿಸಲು ಸುದೀಪ್ ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದನ್ನು ಅವರೇ ಈಗಾಗಲೇ ಹಂಚಿಕೊಂಡಿದ್ದಾರೆ.

    ಇದೀಗ ಚಿತ್ರರಂಗ ಎಂಬ ಬಣ್ಣದ ಲೋಕಕ್ಕೆ ಕಾಲಿಟ್ಟು 'ಸೂಪರ್ ಸ್ಟಾರ್', 'ಅಭಿನಯ ಚಕ್ರವರ್ತಿ', 'ಅನ್ನದಾತರ ಅನ್ನದಾತ' ಇತ್ಯಾದಿ..ಇತ್ಯಾದಿ ಬಿರುದು ಗಿಟ್ಟಿಸಿಕೊಂಡಿರುವ ಸುದೀಪ್ ಅವರು ಈಗಾಗಲೇ ಸುಮಾರು 50 ಕ್ಕೂ ಹೆಚ್ಚು (ಎಲ್ಲಾ ಭಾಷೆ ಸೇರಿಸಿ) ಸಿನಿಮಾ ಪೂರೈಸಿದ್ದಾರೆ.[ಟೀಸರ್: ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ಕ ಸ್ಪೆಷಲ್ ಗಿಫ್ಟ್ ಇದು]

    ಸಿನಿಮಾ ರಂಗಕ್ಕೆ ಬಂದ ಅಲ್ಪ ಸಮಯದಲ್ಲೇ ನಾಲ್ಕು ಚಿತ್ರರಂಗ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ಸುದೀಪ್ ಅವರು, ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಪಾರ ಅಭಿಮಾನಿ ಬಳಗದವರನ್ನು ಹೊಂದಿರುವ ಕಿಚ್ಚ ಅವರು ಇಂದು ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.[ಸುದೀಪ್ 43: ಅಭಿಮಾನಿಗಳಿಂದ ಸಂಭ್ರಮದ 'ಕಿಚ್ಚೋತ್ಸವ 2016' ಆಚರಣೆ]

    ಸುದೀಪ್ ಅವರ ಹುಟ್ಟುಹಬ್ಬದ ಸ್ಪೆಷಲ್ ಅಂತ ಅವರ 5 ಅತ್ಯದ್ಭುತ ಹಾಗೂ ಕಿಚ್ಚ ಸುದೀಪ್ ಅವರ ಹೆಸರನ್ನು ಅಮರವಾಗಿಸಿದ, ಅವರಿಗೆ ಬ್ರೇಕ್ ಕೊಟ್ಟ 5 ಸಿನಿಮಾಗಳ ಬಗ್ಗೆ ನಿಮಗೆ ಹೇಳಲೇಬೇಕು. ಅದು ಯಾವ ಸಿನಿಮಾ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

    'ಹುಚ್ಚ' ಸಿನಿಮಾ

    'ಹುಚ್ಚ' ಸಿನಿಮಾ

    ಸಿನಿಮಾದಲ್ಲಿ ನಟಿಸಬೇಕು ಅನ್ನೋ ಕನಸು ಇಟ್ಟುಕೊಂಡು ಬೆಳ್ಳಿತೆರೆಗೆ ಕಾಲಿಟ್ಟ ಸುದೀಪ್ ಅವರಿಗೆ ಯಾವ ಸಿನಿಮಾಗಳು ಅಷ್ಟಾಗಿ ಬ್ರೇಕ್ ಕೊಡಲಿಲ್ಲ. 'ಸ್ಪರ್ಶ' ಸ್ವಲ್ಪಮಟ್ಟಿಗೆ ಹೆಸರು ತಂದುಕೊಟ್ಟರು ಅವರ ಯಾರ ನೆನಪಿನಲ್ಲೂ ಉಳಿಯಲಿಲ್ಲ. ಆವಾಗ ಅವರಿಗೆ 'ಹುಚ್ಚ' ಸಿನಿಮಾ ಕೈ ಹಿಡಿಯಿತು. ಈ ಬ್ರೇಕ್ ಸುದೀಪ್ ಅವರು ಜೀವನದಲ್ಲಿ ಮರೆಯಲಾರದ ಬ್ರೇಕ್. ತಮಿಳಿನ 'ಸೇತು' ರೀಮೇಕ್ ಆದ 'ಹುಚ್ಚ' ಚಿತ್ರ ಸುದೀಪ್ ಅವರ ನಸೀಬನ್ನೇ ಬದಲಾಯಿಸಿತು. ಆಮೇಲೆ ಅವರು 'ಕಿಚ್ಚ' ಅಂತಾನೇ ಖ್ಯಾತಿ ಗಳಿಸಿದರು.

    'ಮೈ ಆಟೋಗ್ರಾಫ್'

    'ಮೈ ಆಟೋಗ್ರಾಫ್'

    ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಕಮ್ ನಟನೆ ಮಾಡಿದ 'ಮೈ ಆಟೋಗ್ರಾಫ್' ಸಿನಿಮಾ ಮತ್ತೆ ಸುದೀಪ್ ಅವರನ್ನು ಎಲ್ಲಿಗೋ ಕರೆದೊಯ್ಯಿತು. ಇದರಲ್ಲಿ ಅವರ ನಟನೆ ಮತ್ತು ನಿರ್ದೇಶನ ಎರಡೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

    'ಕೆಂಪೇಗೌಡ'

    'ಕೆಂಪೇಗೌಡ'

    ತಮಿಳಿನ 'ಸಿಂಗಂ' ರೀಮೇಕ್ ಆದ 'ಕೆಂಪೇಗೌಡ' ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತು. ಇದು ಸುದೀಪ್ ಅವರಿಗೆ ಹೊಸ ಇಮೇಜ್ ತಂದುಕೊಟ್ಟಿತು. ಈ ಚಿತ್ರದ ನಂತರ ಬಂದ 'ವಿಷ್ಣುವರ್ಧನ', 'ಬಚ್ಚನ್', 'ಮಾಣಿಕ್ಯ' ಮತ್ತು' ರನ್ನ' ಚಿತ್ರಗಳು ಬಾಕ್ಸಾಫೀಸ್ ಹಿಟ್ ಆದವು.

    'ಈಗ'

    'ಈಗ'

    ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ 'ಈಗ' ಚಿತ್ರದಲ್ಲಿ ಮಿಂಚಿದ ನಂತರ ಸುದೀಪ್ ಅವರು ಪಕ್ಕದ ರಾಜ್ಯದಲ್ಲೂ ಸೌಂಡ್ ಮಾಡೋಕೆ ಶುರು ಮಾಡಿದರು. ಈ ಸಿನಿಮಾ ಸುದೀಪ್ ಅವರ ಸಿನಿಮಾ ಕೆರಿಯರ್ ನಲ್ಲಿ ಬಿಗ್ ಬ್ರೇಕ್ ಕೊಟ್ಟಿತು. ಈ ಸಿನಿಮಾ ಸುದೀಪ್ ಅವರನ್ನು ಇಡೀ ಪ್ರಪಂಚಕ್ಕೆ ಪರಿಚಯ ಮಾಡಿ ಕೊಟ್ಟಿತು. ಈ ಸಿನಿಮಾ ಸುದೀಪ್ ಅವರಿಗೆ ಹಲವು ಪ್ರಶಸ್ತಿ ತಂದುಕೊಟ್ಟಿದ್ದಲ್ಲದೇ, ಇಡೀ ಚಿತ್ರರಂಗ ಇವರ ಬಗ್ಗೆ ಮಾತನಾಡುವಂತೆ ಮಾಡಿತು.

    'ಕೋಟಿಗೊಬ್ಬ 2'

    'ಕೋಟಿಗೊಬ್ಬ 2'

    ಇತ್ತೀಚೆಗೆ ತೆರೆಕಂಡು ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ 'ಕೋಟಿಗೊಬ್ಬ 2' ಕಿಚ್ಚ ಸುದೀಪ್ ಅವರ ಸಿನಿಮಾ ರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆಕಂಡ ಈ ಸಿನಿಮಾ ಸುದೀಪ್ ಅವರಿಗೆ ಮತ್ತೊಂದು ಬ್ರೇಕ್ ಕೊಟ್ಟಿತು. ಜೊತೆಗೆ ಸ್ವಮೇಕ್ ಸಿನಿಮಾ ಮಾಡಿ ಕೂಡ ಸುದೀಪ್ ಗೆಲ್ಲುತ್ತಾರೆ ಅನ್ನೋದಕ್ಕೆ ಈ ಸಿನಿಮಾ ಉತ್ತಮ ಉದಾಹರಣೆ ಆಯ್ತು.

    ಇನ್ನುಳಿದ ಚಿತ್ರಗಳು.?

    ಇನ್ನುಳಿದ ಚಿತ್ರಗಳು.?

    ಇವಿಷ್ಟು ಸುದೀಪ್ ಅವರ ಸಿನಿ ಜರ್ನಿಯಲ್ಲಿ ಇತಿಹಾಸ ಬರೆದರೆ, ಇವನ್ನು ಬಿಟ್ಟು 'ಸ್ವಾತಿಮುತ್ತು', 'ರಂಗ ಎಸ್ ಎಲ್.ಸಿ', 'ವೀರ ಮದಕರಿ', 'ರನ್ನ', 'ಫೂಂಕ್' ಮುಂತಾದವು ಸುದೀಪ್ ಅವರ ಅದ್ಭುತ ಅಭಿನಯಕ್ಕೆ ಸಾಕ್ಷಿಯಾದವು.

    English summary
    Actor Kichcha Sudeep, who is celebrating his 43rd birthday today, is inching close to the landmark 50th film in his career (includes all the language films and special appearances as well). There are a number of movies of Sudeep, which were blockbusters and number of them which were critically acclaimed. We have listed 5 movies of Kichcha Sudeep which we feel were the most important films in his career.
    Saturday, September 3, 2016, 13:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X