twitter
    For Quick Alerts
    ALLOW NOTIFICATIONS  
    For Daily Alerts

    ಪುಸ್ತಕದಲ್ಲಿ ಸೆರೆಯಾಗುತ್ತಿದೆ ಡಾ.ಶಿವರಾಜ್ ಕುಮಾರ್ ಜೀವನ

    By Bharath Kumar
    |

    ಡಾ.ರಾಜ್ ಕುಮಾರ್ ಅವರ ಸುಪುತ್ರ ಡಾ.ಶಿವರಾಜ್ ಕುಮಾರ್ ಅವರು ಕುರಿತು ಪುಸ್ತಕ ತಯಾರಾಗುತ್ತಿದೆ. ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿವೊಂದರ ಮ್ಯಾನೇಜಿಂಗ್ ಡೈರೆಕ್ಟರ್ ಅವರ ಆಪ್ತ ಸಹಾಯಕರಾಗಿರುವ ಜನಾರ್ಧನರಾವ್ ಸಾಳಂಕೆಯವರು ಸೆಂಚುರಿ ಸ್ಟಾರ್ ಅವರ ಬಗ್ಗೆ ಸಂಪೂರ್ಣ ಮಾಹಿತಿ ಒಳಗೊಂಡ ಪುಸ್ತಕವನ್ನು ಬರೆಯುತ್ತಿದ್ದಾರೆ.

    'ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್' ಎಂಬ ಹೆಸರಿನಲ್ಲಿ ಪುಸ್ತಕ ಸಿದ್ದವಾಗುತ್ತಿದ್ದು, ಶಿವಣ್ಣ ಅವರ ಬಗ್ಗೆ ಕೇಳಿರದ ವಿಶೇಷ ವಿಷಯಗಳು ಮತ್ತು ಅತೀ ವಿರಳವಾದ ಫೋಟೊಗಳನ್ನು ಈ ಪುಸ್ತಕದಲ್ಲಿ ಕಾಣಬಹುದು.

    Book on Kannada Actor Dr Shiva Rajkumar

    ಜನಾರ್ಧನ ರಾವ್ ಸಾಳಂಕೆ ಯವರು ಈಗಾಗಲೇ ಚಿತ್ರರಂಗದ ಕಲಾವಿದರನ್ನು ಭೇಟಿ ಮಾಡುತ್ತಿದ್ದು, ಶಿವಣ್ಣನ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಇನ್ನು ಶಿವರಾಜ್ ಕುಮಾರ್ ಕುರಿತು ಪುಸ್ತಕ ಬರೆಯುತ್ತಿರುವ ವಿಷಯ ತಿಳಿದ ರಾಘವೇಂದ್ರ ರಾಜ್ ಕುಮಾರ್ ಮತ್ತು ಸ್ವತಃ ಶಿವರಾಜ್ ಕುಮಾರ್ ಅವರು ಸಂತಸವನ್ನು ವ್ಯಕ್ತಪಡಿಸಿ ಶುಭಕೋರಿದ್ದಾರೆ.

    ಅಂದ್ಹಾಗೆ, ಲೇಖಕ ಜನಾರ್ಧನ ರಾವ್ ಸಾಳಂಕೆ ಸುಮಾರು 17 ವರ್ಷಗಳಿಂದಲೂ ಇವರು ಮೀಡಿಯಾ ಪತ್ರಕರ್ತರಾಗಿ (Media Journalist). ವಿದ್ಯಾರ್ಹತೆಯಲ್ಲಿ ಎಂ.ಎ. ಪದವಿ (ಅರ್ಥಶಾಸ್ತ್ರ) ಮತ್ತು ಎಂ.ಬಿ.ಎ (ಸಿಸ್ಟಮ್ಸ್) ಮಾಡಿದ್ದಾರೆ.

    Book on Kannada Actor Dr Shiva Rajkumar

    ವಿಶೇಷ ಅಂದ್ರೆ, ಜನಾರ್ಧನ ರಾವ್ ಸಾಳಂಕೆ ಅವರು ಡಾ.ವಿಷ್ಣುವರ್ಧನ್ ಅವರ ಬಗ್ಗೆ ಈಗಾಗಲೇ 4 ಪುಸ್ತಕಗಳನ್ನು ಬರೆದಿದ್ದಾರೆ. 'ಮರೆಯದ ಮಾಣಿಕ್ಯ-ಯಜಮಾನ ಡಾ.ವಿಷ್ಣುವರ್ಧನ್', 'ಸಿಂಹ ಘರ್ಜನೆ', 'ಕರುಣಾಮಯಿ ಡಾ.ವಿಷ್ಣುವರ್ಧನ್', 'ನಾಗರಹಾವು' ಎಂಬ ಹೆಸರಿನಲ್ಲಿ ಪುಸ್ತಕಗಳನ್ನ ಬರೆದಿದ್ದಾರೆ. ಇದರ ಹೊರತಾಗಿಯೂ ನಾಲ್ಕೈದು ಚಿತ್ರಗಳ ಮೇಕಿಂಗ್ ಬಗ್ಗೆ ವಿಶೇಷ ಪತ್ರಿಕೆಗಳು ಹೊರಬಂದಿವೆ. 2009ರಲ್ಲಿ ದಾದಾ ಅವರ ಕೊನೆಯ ಸಂದರ್ಶನವನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

    English summary
    Multinational Company Manager Janardhan salanke Writing a Book on Kannada Actor Dr Shiva rajkumar In the Name of 'Hatric Hero Shivaraj kumar'.
    Monday, April 17, 2017, 16:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X