»   » ಇದುವರೆಗಿನ ಎಲ್ಲಾ ದಾಖಲೆ ಧೂಳೀಪಟ ಮಾಡಿದ ಬ್ರಹ್ಮ

ಇದುವರೆಗಿನ ಎಲ್ಲಾ ದಾಖಲೆ ಧೂಳೀಪಟ ಮಾಡಿದ ಬ್ರಹ್ಮ

Posted by:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಬ್ರಹ್ಮ' ಚಿತ್ರ ಇದುವರೆಗೆ ಕನ್ನಡ ಚಿತ್ರರಂಗ ಕಂಡು ಕೇಳರಿಯದ ವಿನೂತನ ದಾಖಲೆ ಬರೆದಿದೆ. ಆರ್ ಚಂದ್ರು ನಿರ್ದೇಶನದ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಶಹಬ್ಬಾಸ್ ಗಿರಿ ನೀಡಿದ್ದಾನೆ.

ಹೋದ ಶುಕ್ರವಾರ (ಫೆ 7) ಬಿಡುಗಡೆಯಾದ ಬ್ರಹ್ಮ ಚಿತ್ರ ರಾಜ್ಯಾದ್ಯಂತ ತುಂಬಿದ ಪ್ರದರ್ಶನ ಕಾಣುತ್ತಿದೆ, ಹಾಗಾಗಿ ಚಿತ್ರತಂಡ ಮತ್ತು ವಿತರಕರ ಮುಖದಲ್ಲಿ ಸಹಜವಾಗಿ ಮಂದಹಾಸ ತಾಂಡವಾಡುತ್ತಿದೆ. (ಬ್ರಹ್ಮ ಚಿತ್ರ ವಿಮರ್ಶೆ)

ಇದುವರೆಗಿನ ಗರಿಷ್ಠ ಎನ್ನಬಹುದಾದ 276 ಚಿತ್ರಮಂದಿರಗಳಲ್ಲಿ ಬ್ರಹ್ಮ ಚಿತ್ರ ಬಿಡುಗಡೆಯಾಗುವ ಮೂಲಕ ಕನ್ನಡ ಚಿತ್ರವೊಂದು ಅತಿಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದ ದಾಖಲೆ ಬ್ರಹ್ಮ ಚಿತ್ರದ ಪಾಲಾಗಿದೆ.

ಚಿತ್ರದ ಆಡಿಯೋ ಸಿಡಿ ಕೂಡಾ 75 ಸಾವಿರಕ್ಕೂ ಹೆಚ್ಚು ಮಾರಾಟವಾಗಿದ್ದರಿಂದ ಚಿತ್ರ ತಂಡ ಪ್ಲಾಟಿನಂ ಡಿಸ್ಕ್ ಕೂಡಾ ಹೊರ ತಂದಿತ್ತು. ಇದೆಲ್ಲಕ್ಕಿಂತಲೂ ಮಿಗಿಲಾಗಿ ಗಳಿಕೆ ವಿಚಾರದಲ್ಲಿ ಬ್ರಹ್ಮ, ಚಿತ್ರಕ್ಕಿರುವ 'ದಿ ಲೀಡರ್' ಟ್ಯಾಗ್ ಲೈನಿನಂತೆ ಗಲ್ಲಾಪೆಟ್ಟಿಗೆಯಲ್ಲೂ ಲೀಡರ್ ಆಗಿ ಮೆರೆಯುತ್ತಿದ್ದಾನೆ.

ಚಿತ್ರದ ಮೂರು ದಿನದ ಗಳಿಕೆ ಎಷ್ಟು? ಮುಂದೆ ಓದಿ..

ನಿರ್ದೇಶಕರುವ ಹೇಳುವ ಪ್ರಕಾರ

ನಿರ್ದೇಶಕರುವ ಹೇಳುವ ಪ್ರಕಾರ

ನಿರ್ದೇಶಕ ಚಂದ್ರು ಪಬ್ಲಿಕ್ ಟಿವಿ ಮತ್ತು ಟಿವಿ9ಗೆ ಹೇಳಿದ ಪ್ರಕಾರ, ಗರಿಷ್ಠ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು ಮತ್ತು ವಾರಾಂತ್ಯದಲ್ಲಿ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಮೊದಲ ದಿನವೇ ಚಿತ್ರ 3.65 ಕೋಟಿ ಗಳಿಕೆ ಕಂಡಿತ್ತು.

ಹತ್ತು ಕೋಟಿಗೆ ಕ್ಲಬ್ಬಿಗೆ ಉಪ್ಪಿ

ಹತ್ತು ಕೋಟಿಗೆ ಕ್ಲಬ್ಬಿಗೆ ಉಪ್ಪಿ

ಉಪೇಂದ್ರ, ಪ್ರಣೀತಾ ಪ್ರಮುಖ ಭೂಮಿಕೆಯಲ್ಲಿರುವ ಬ್ರಹ್ಮ ಚಿತ್ರ ಮೂರು ದಿನದಲ್ಲಿ ಹತ್ತು ಕೋಟಿ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ನಿರ್ದೇಶಕ ಚಂದ್ರು ಹೇಳಿರುವಂತೆ ಚಿತ್ರ ಮೊದಲ ದಿನ 3.65 ಕೋಟಿ, ಎರಡನೇ ದಿನ 2.40 ಕೋಟಿ ಮತ್ತು ಭಾನುವಾರ 3.70 ಕೋಟಿ ಗಳಿಕೆ ಕಂಡಿದೆ.

ಪೈಪೋಟಿ ಇರಲಿಲ್ಲ

ಪೈಪೋಟಿ ಇರಲಿಲ್ಲ

ಬ್ರಹ್ಮ ಈ ಪಾಟಿ ಗಳಿಕೆ ಕಾಣಲು ಪ್ರಮುಖ ಕಾರಣ ಚಿತ್ರಕ್ಕೆ ಪರಭಾಷಾ ಚಿತ್ರಗಳಿಂದ ಯಾವುದೇ ಪೈಪೋಟಿ ಇರಲಿಲ್ಲ ಮತ್ತು ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಬಂದಿರಲಿಲ್ಲ. ಚಿತ್ರಕ್ಕೆ ಒಳ್ಳೆ ಪ್ರಚಾರ ಮತ್ತು ಜಾಹೀರಾತು ನೀಡಿದ್ದರಿಂದ ಚಿತ್ರ ಉತ್ತಮ ಗಳಿಕೆ ಕಾಣಲು ಸಾಧ್ಯವಾಯಿತು ಎನ್ನುತ್ತಾರೆ ನಿರ್ದೇಶಕ ಚಂದ್ರು.

ಚಿತ್ರದ ವಿತರಕರು

ಚಿತ್ರದ ವಿತರಕರು

ಚಿತ್ರದ ವಿತರಕರಾದ ಜಯಣ್ಣ ಮತ್ತು ಬಾಷಾ ಹೆಚ್ಚಿನ ಚಿತ್ರಮಂದಿರ ಪಡೆಯುವಲ್ಲಿ ಪ್ರಮುಖ ಕಾರಣರಾಗಿದ್ದಾರೆ. ಮೊದಲಿಗೆ ನಾನು ಅವರಿಗೆ ಥ್ಯಾಂಕ್ಸ್ ಹೇಳಬೇಕು - ನಿರ್ದೇಶಕ ಚಂದ್ರು

ಚಂದ್ರು ಅವರಿಂದ ಕಲಿಯುವುದು ತುಂಬಾ ಇದೆ

ಚಂದ್ರು ಅವರಿಂದ ಕಲಿಯುವುದು ತುಂಬಾ ಇದೆ

ವಯಸ್ಸಿನಲ್ಲಿ ನನಗಿಂತ ಅವರು ಚಿಕ್ಕವರಾದರೂ ಅವರಿಂದ ಕಲಿಯುವುದು ತುಂಬಾ ಇದೆ. ಉಪ್ಪಿ2 ಚಿತ್ರ ನನಗೆ ಅವರು ಮಾಡಿ ಕೊಟ್ಟರೆ ತುಂಬಾ ಸಂತೋಷ ಎಂದಿದ್ದಾರೆ ಉಪೇಂದ್ರ.

English summary
Real Star Upendra starer Brahma Kannada Movie opening weekend collection is Ten crores, Director R Chandru says.
Please Wait while comments are loading...

Kannada Photos

Go to : More Photos